ಕಾರವಾರ: ಭಾಷಣ ಮಾಡುವಾಗ ಕಾಂಗ್ರೆಸ್‍ನವರಿಗೆ (Congress) ಏನೂ ಮಾಡಲು ಸಾಧ್ಯವಾಗುವುದಿಲ್ಲ, ಜೆಡಿಎಸ್ (JDS) ಜೊತೆ ಸೇರಿ ಗೆಲ್ಲಲು ಹೋಗಿದ್ದಾರೆ ಎಂದು ಹೇಳುವ ಮೂಲಕ ಮೀನುಗಾರಿಕಾ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (Mankala Vaidya) ಯಡವಟ್ ಮಾಡಿಕೊಂಡಿದ್ದಾರೆ.
ಮುರ್ಡೇಶ್ವರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಒಟ್ಟಾದರೂ ನಮಗೆ ಏನೂ ತೊಂದರೆ ಆಗುವುದಿಲ್ಲ. ನಾವು ಎಲ್ಲಾ ರೀತಿಯಲ್ಲೂ ತಯಾರಾಗಿದ್ದೇವೆ ಎಂದು ಬಾಯಿತಪ್ಪಿ ಹೇಳಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾಗಿ, ಕೂಡಲೇ ಎಚ್ಚೆತ್ತುಕೊಂಡು ಕಾಂಗ್ರೆಸ್ ಯಾರೇ ಒಟ್ಟಾದರೂ ಗೆಲ್ಲಲಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ವಾವಲಂಬಿ ಭಾರತವನ್ನು ರಚಿಸಲು ಬದ್ಧರಾಗಿ: ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ
Advertisement
ಮುಂದುವರೆದು ಬಿಜೆಪಿ (BJP) ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಹಿಂದುತ್ವದ ಅಜೆಂಡಾ ಸೃಷ್ಟಿ ಮಾಡಿದವರು. ಹಿಂದೂಗಳು ಹಿಂದುತ್ವ ಅಜೆಂಡಾವನ್ನು ಯಾವ ಪಕ್ಷಕ್ಕೂ ಮಾರಿಕೊಂಡಿಲ್ಲ. ಹಿಂದೂಗಳು ಸ್ವಾಭಿಮಾನಕ್ಕೆ ಧಕ್ಕೆಯಾಗದ ಹಾಗೆ ಹೇಗೆ ಬದುಕಬೇಕು, ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಗೊತ್ತಿದೆ. ನಾವು ಸಹ ಹಿಂದೂಗಳೇ ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ಬಿಜೆಪಿಯವರು ರಾಜಕಾರಣಕ್ಕೆ ಮಾತ್ರ ಹಿಂದುತ್ವ ಎಂದು ಹೇಳಿಕೊಳ್ಳುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.
Advertisement
Advertisement
ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಸ್ತಾಪಿಸಿದ ಅವರು ಬಿಜೆಪಿಯವರು ಚುನಾವಣೆ ಬಂದ ಸಂದರ್ಭದಲ್ಲಿ ಏನಾದರೂ ಗಲಾಟೆ ಗೌಜು ಮಾಡಿಕೊಂಡು ರಾಜಕಾರಣ ಮಾಡುವುದು ಬಿಟ್ಟರೆ ಬೇರೆ ಯಾವ ನೈತಿಕತೆಯೂ ಅವರಿಗಿಲ್ಲ. ನೈತಿಕತೆ ಇದ್ದಿದ್ದರೇ ಇಂತಹ ಕ್ಷುಲ್ಲಕ ಕೆಲಸ ಮಾಡಲು ಹೋಗುತ್ತಿರಲಿಲ್ಲ. ಅಂತಹ ನೀಚ ಕೆಲಸ ಮಾಡಿದವರು ಬಿಜೆಪಿಗರು. ನಮ್ಮ ಕ್ಷೇತ್ರದಲ್ಲೂ 2018 ರಲ್ಲಿ ಅವರೇ ಕೊಲೆ ಮಾಡಿ, ಅವರೇ ಕೇಸ್ ಮಾಡಿ ಅವರೇ ಸಿಬಿಐಗೆ ಕೊಡಬೇಕು ಎಂದು ಕೊಟ್ಟು ಅವರದ್ದೇ ಸಿಬಿಐ ಸಹಜ ಸಾವು ಎಂದು ವರದಿ ಕೊಟ್ಟಿದೆ. ಇದಕ್ಕಿಂತ ಬೇರೆಯ ಉದಾಹರಣೆ ಬೇಕಾ? ಎಂದು ಪ್ರಶ್ನಿಸಿದ್ದಾರೆ.
Advertisement
ಲಿಂಗಾಯಿತ ಸಿಎಂ ವಿಚಾರವಾಗಿ ಬಸವರಾಜ್ ರಾಯರೆಡ್ಡಿ ಹೇಳಿಕೆ ಅವರ ವಯಕ್ತಿಕವಾದದ್ದು. ಇದು ಕಾಂಗ್ರೆಸ್‍ಗೆ ಸಂಬಂಧ ಇಲ್ಲ. ರಾಜ್ಯದ ಎಲ್ಲಾ ಸಮುದಾಯವನ್ನು ಕಾಂಗ್ರೆಸ್ ಸಮಾನವಾಗಿ ನೋಡಿಕೊಂಡು ಕೆಲಸ ಮಾಡಿದೆ ಎಂದರು.
ಬಿಜೆಪಿಯಿಂದ ಕಾಂಗ್ರೆಸ್‍ಗೆ ಬರುವವರ ವಿಚಾರವಾಗಿ, ಬಿಜೆಪಿಯ ಕತೆ ಮುಗಿಯಿತು ಎಂದು ಹೇಳಿ ಬರುವವರಿಗೆ ನಮ್ಮ ಸ್ವಾಗತವಿದೆ. ನಮ್ಮ ತತ್ವ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಯಾವಾಗಲೂ ಸ್ವಾಗತವಿದೆ. ನಾವು ಆಪರೇಷನ್ ಮಾಡುವವರಲ್ಲ. ಹೆಬ್ಬಾರ್ ಅವರಿಗೆ ಇವತ್ತೇ ನಮ್ಮ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ. ಅವರು ಆಪರೇಷನ್ ಮಾಡಿಕೊಂಡು ಹೋಗಿದ್ದರು. ಅವರಿಗೆ ಅಲ್ಲಿ ಆಪರೇಷನ್ ಸಕ್ಸಸ್ ಆಗಲಿಲ್ಲ ನಾವು ಇಲ್ಲಿ ಮೆಡಿಸಿನ್ ಕೊಟ್ಟು ಸರಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಹರಿಸದಂತೆ ಮನವಿ – ಗಜೇಂದ್ರ ಸಿಂಗ್ ಭೇಟಿಯಾದ ರಾಜ್ಯ ರೈತರ ನಿಯೋಗ
Web Stories