ಬೆಂಗಳೂರು: ಹೆಚ್ಚುವರಿ ಡಿಸಿಎಂ (DCM) ಹುದ್ದೆ ಸೃಷ್ಟಿ ಮಾಡಿದ್ರೆ ಲೋಕಸಭಾ ಚುನಾವಣೆಗೆ ಅನುಕೂಲ ಆಗಲಿದೆ ಅಂತ ಸುರ್ಜೇವಾಲ (Randeep Surjewala) ಬಳಿ ಹಲವು ಸಚಿವರು ಮನವಿ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಸೋಮವಾರ ಸಚಿವರಿಂದ ಸುರ್ಜೇವಾಲ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಸಭೆಯಲ್ಲಿ ಹಲವು ಸಚಿವರು ಡಿಸಿಎಂ ಹುದ್ದೆ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಮಂತ್ರಿಗಳನ್ನು ಸುರ್ಜೇವಾಲ ಕರೆದಿದ್ದರು. ಲೋಕಸಭಾ ಚುನಾವಣೆ ಬರುತ್ತಿದೆ. ನೀವು ಹಿರಿಯರು ಇದ್ದೀರಾ ಸಿರಿಯಸ್ ಆಗಿ ತಗೋಬೇಕು ಅಂತ ಚರ್ಚೆ ಮಾಡೋಕೆ ಕರೆದಿದ್ದರು. ಈ ವೇಳೆ ಕೆಲವರು ಡಿಸಿಎಂ ಮಾಡಿದರೆ ಅನುಕೂಲ ಆಗುತ್ತೆ ಅಂತ ಕೆಲ ಸಚಿವರು ಹೇಳಿದ್ರು. ಆದರೆ ಡಿಸಿಎಂ ಹುದ್ದೆ ವಿಷಯವಾಗಿಯೇ ಸಭೆ ಕರೆದಿರಲಿಲ್ಲ. ಡಿಸಿಎಂ ಮಾಡೋದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾವು ಸಲಹೆ ಮಾಡಬಹುದು. ಕೆಲವರು ಸಲಹೆ ಮಾಡಿದ್ದಾರೆ. ಸಲಹೆ ತೆಗೆದುಕೊಳ್ಳೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ ಹೈಕಮಾಂಡ್ ಸಾಧಕ-ಬಾಧಕ ನೋಡಿ ಡಿಸಿಎಂ ಬಗ್ಗೆ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು.
Advertisement
Advertisement
ಡಿಸಿಎಂ ಹುದ್ದೆ ವಿಚಾರ ಪಕ್ಷದ ಆಂತರಿಕ ವಿಷಯ. ಹೈಕಮಾಂಡ್ ಇದೆ ಅದನ್ನ ತೀರ್ಮಾನ ಮಾಡುತ್ತದೆ. ನಿನ್ನೆ ನಾವು ಲೋಕಸಭೆ ಬಗ್ಗೆ ಚರ್ಚೆ ಮಾಡಿದ್ವಿ. ಅಭ್ಯರ್ಥಿಗಳು ಹೇಗೆ ಇರಬೇಕು. ಎಲೆಕ್ಷನ್ ತಂತ್ರಗಾರಿಕೆ ಹೇಗೆ ಮಾಡಬೇಕು ಅಂತ ಚರ್ಚೆ ಮಾಡಿದ್ವಿ. ನಮಗೆ ತಿಳಿದ ರೀತಿ ಹೇಳಿದ್ದೇನೆ.ನಾನು ಎರಡು ಬಾರಿ ಅಧ್ಯಕ್ಷನಾಗಿ ಎರಡು ಚುನಾವಣೆ ಎದುರಿಸಿದ್ದೆ. ಆ ವಿಚಾರಗಳನ್ನು ತಿಳಿಸಿದ್ದೇವೆ. ಅದು ಬಿಟ್ಟು ದೊಡ್ಡ ಪ್ರಮಾಣದ ಚರ್ಚೆ ಆಗಿಲ್ಲ ಅಂತ ಸ್ಪಷ್ಟಪಡಿಸಿದರು. ಹೆಚ್ಚು ಡಿಸಿಎಂ ಹುದ್ದೆ ಮಾಡಿದ್ರೆ ಲೋಕಸಭಾ ಚುನಾವಣೆಗೆ (Loksabha Election) ಫ್ಲಸ್ ಆಗುತ್ತದೆ. ಅದನ್ನ ನಿನ್ನೆ ಕೆಲವರು ಹೇಳಿದ್ವು. ಸುರ್ಜೇವಾಲ ಹೈಕಮಾಂಡ್ ಜೊತೆ ಚರ್ಚೆ ಮಾಡೋದಾಗ ಹೇಳಿದ್ರು ಅಂತ ತಿಳಿಸಿದರು. ಇದನ್ನೂ ಓದಿ: ಲೋಕಾ ಚುನಾವಣೆಗೆ ಬಿಜೆಪಿ ತಯಾರಿ – ಸಭೆಯಲ್ಲಿ ಏನಾಯ್ತು? ಇನ್‌ಸೈಡ್ ವರದಿ ಇಲ್ಲಿದೆ