CinemaKarnatakaLatestMain PostSandalwoodTV Shows

‘ಸೈಕ್’ ನವಾಜ್ ಬೆದರಿಕೆಗೆ ತತ್ತರಿಸಿ ಹೋದ ಬಿಗ್ ಬಾಸ್ ಮನೆಯ ಸದಸ್ಯರು

ನಾನು ಸರಿಯಿಲ್ಲ, ಸರಿಯಿಲ್ಲ ಅಂತಾನೇ ನನ್ನ ರಾತ್ರಿ ಆಚೆ ಬಿಡುವುದಿಲ್ಲ ಎಂದು ಹೇಳುವ ಮೂಲಕ ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆತಂಕ ಮೂಡಿಸಿದ್ದಾರೆ ಸೈಕ್ ನವಾಜ್. ನನ್ನ ತಂದೆ ತಾಯಿ ಒಂದು ರಾತ್ರಿಯೂ ನನ್ನನ್ನು ಬಿಟ್ಟು ಮಲಗುವುದಿಲ್ಲ. ರಾತ್ರಿ ಎಲ್ಲಿಯೂ ನನ್ನನ್ನು ಕಳುಹಿಸುವುದಿಲ್ಲ. ಅದಕ್ಕೆ ಕಾರಣ, ನನ್ನ ಮೇಲೆ ಅವರ ಪ್ರೀತಿ ಇದೆ ಅಂತಲ್ಲ, ರಾತ್ರಿ ವೇಳೆ ನಾನೇನಾದರೂ ಮಾಡಿಬಿಡ್ತೀನಿ ಅನ್ನೋ ಭಯ ಅವರಿಗೆ ಎನ್ನುತ್ತಾರೆ ನವಾಜ್. ನಾನು ಯಾರನ್ನಾದರೂ ಹೊಡೆದು, ಕಿರಿಕ್ ಮಾಡ್ತೀನಿ ಅನ್ನೋ ಕಾರಣಕ್ಕಾಗಿಯೇ ನನ್ನನ್ನು ಆಚೆಯೇ ಬಿಡುವುದಿಲ್ಲ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯ ಟಾಸ್ಕ್ ಪ್ರಕಾರ ಅರುಣ್ ಸಾಗರ್ ಮತ್ತು ನವಾಜ್ ಒಟ್ಟೊಟ್ಟಿಗೆ ಓಡಾಡಬೇಕಿದೆ. ಹಾಗಾಗಿ ಈ ಎಲ್ಲ ವಿಷಯವನ್ನು ಅರುಣ್ ಸಾಗರ್ ಮುಂದೆ ನವಾಜ್ ಹೇಳಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೆಲವರನ್ನು ಕಂಡರೆ ಹೊಡೆಯಬೇಕು ಅನಿಸ್ತಿದೆ. ಜಗಳ ಆಗತ್ತೆ ಅಂತಾನೂ ಫೀಲ್ ಆಗುತ್ತಿದೆ. ಆರ್ಯವರ್ಧನ್, ದರ್ಶ್ ನೋಡಿ ಅವರನ್ನು ಹೊಡೆಯಬೇಕು ಅನಿಸ್ತು ಎನ್ನುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಆತಂಕ ಸೃಷ್ಟಿ ಮಾಡಿದ್ದಾರೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

ನಾನು ಮರ್ಯಾದೆಗೆ ಅಂಜುವುದಿಲ್ಲ, ನನಗೆ ಬೇಗ ಕೋಪ ಬರುತ್ತದೆ ಎಂದೂ ಹೇಳಿರುವ ನವಾಜ್ (Nawaz), ಈತನ ಮಾತಿಗೆ ಸ್ವತಃ ಪ್ರಶಾಂತ್ ಸಂಬರ್ಗಿ (Prashant Sambargi) ಕೂಡ ಬೆಚ್ಚಿಬಿದ್ದಿದ್ದಾರೆ. ನವಾಜ್ ಹೇಳಿದ ಮಾತು ಭಯ ಹುಟ್ಟಿಸುತ್ತಿದೆ ಎಂದೂ ಮಾತನಾಡಿದ್ದಾರೆ. ಅಲ್ಲದೇ ಹೊಡಿತಿನಿ ಅನ್ನೋದು ಸರಿಯಿಲ್ಲ. ಪ್ರೌಢಿಮೆ ಇಲ್ಲದೇ ಅವನು ವರ್ತಿಸುತ್ತಿದ್ದಾನೆ. ಇದು ಸರಿಯಾದದ್ದು ಅಲ್ಲ ಎಂದಿದ್ದಾರೆ ರಾಕೇಶ್ ಅಡಿಗ (Rakesh Adiga). ವಿನೋದ್ ಕೂಡ ಈ ಮಾತಿಗೆ ಧ್ವನಿಗೂಡಿಸಿ, ನವಾಜ್ ಜಗಳ ಆಡಬೇಕು, ಹೊಡೆಯಬೇಕು ಎಂದು ಕಾಯುತ್ತಿದ್ದಾನೆ ಎಂದು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಾರಣಕ್ಕೂ ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆ ಮಾಡುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲ, ಅವರನ್ನು ಮನೆಯಿಂದ ಆಚೆ ಹಾಕಲಾಗುತ್ತದೆ. ಈ ಹಿಂದೆ ಹುಚ್ಚ ವೆಂಕಟ್ (Huchcha Venkat) ಇದೇ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ನವಾಜ್ ಕೂಡ ಮಾತೆತ್ತಿದರೆ ಹೊಡೀತೀನಿ, ಜಗಳ ಮಾಡ್ತೀನಿ ಎನ್ನುತ್ತಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ, ಅವರನ್ನು ಮನೆಯಿಂದಲೇ ಹೊರ ದಬ್ಬಲಾಗುತ್ತದೆ.

Live Tv

Leave a Reply

Your email address will not be published. Required fields are marked *

Back to top button