ಕಾಲಿನ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹಾರಿದ ಮೆಗಾಸ್ಟಾರ್

Public TV
1 Min Read
chiranjeevi

ತೆಲುಗು ಸಿನಿಮಾ ರಂಗದ ಖ್ಯಾತ ನಟ ಚಿರಂಜೀವಿ (Chiranjeevi) ಮೊನ್ನೆಯಷ್ಟೇ ಪತ್ನಿಯೊಂದಿಗೆ ವಿಮಾನಯಾನ ಬೆಳೆಸಿದ್ದರು. ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೊಂದು ಖಾಸಗಿ ವಿಮಾನವಾಗಿದ್ದರಿಂದ ಅಲ್ಲಿನ ಕೆಲ ದೃಶ್ಯಗಳನ್ನು ಅವರು ಹಂಚಿಕೊಂಡು ಸಂಭ್ರಮಿಸಿದ್ದರು. ವಿರಾಮ ಬಯಸಿ ಅವರು ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅಸಲಿ ಸುದ್ದಿ ಈಗ ಹೊರ ಬಂದಿದೆ.

chiranjeevi 4

ಮೆಗಾಸ್ಟಾರ್ ಚಿರಂಜೀವಿ ಪತ್ನಿಯೊಂದಿಗೆ ಪ್ರಯಾಣ ಬೆಳೆಸಿದ್ದು ಅಮೆರಿಕಾಗೆ (America) ಎಂದು ಹೇಳಲಾಗುತ್ತಿದೆ. ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿರಂಜೀವಿ ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ (Surgery) ಮಾಡಲಾಗಿದೆಯಂತೆ. ಅದಕ್ಕಾಗಿ ಅವರು ಪತ್ನಿಯೊಂದಿಗೆ ಅಮೆರಿಕಾಗೆ ತೆರಳಿದ್ದರು ಎನ್ನುವುದು ಈಗ ಗೊತ್ತಾಗಿದೆ. ಇದನ್ನೂ ಓದಿ:ಸೌತ್‌ನ ಇಬ್ಬರು ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್

chiranjeevi 2

ಭೋಲಾ ಶಂಕರ್ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಅಮೆರಿಕಾಗೆ ಹಾರಿದ್ದರು ಚಿರಂಜೀವಿ. ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ  ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆಯಲಾಗಿತ್ತು. ಸಣ್ಣದೊಂದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಚಿರಂಜೀವಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರಂತೆ.

 

ಈವರೆಗೂ ಈ ವಿಷಯವನ್ನು ಗೌಪ್ಯವಾಗಿ ಇಡಲಾಗಿತ್ತು. ಆದರೆ, ಆಪ್ತರು ಈ ಮಾಹಿತಿಯನ್ನು ಹಂಚಿಕೊಂಡಿದ್ದರಿಂದ ಅದು ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆತಂಕ ಪಡುವಂತಹ ಅಗತ್ಯವಿಲ್ಲ ಎಂದಿದ್ದಾರೆ ಆಪ್ತರು. ಅಲ್ಲಿಂದ ಬಂದು ಮತ್ತೆ ಅವರು ಸಿನಿಮಾ ಸಂಬಂಧಿ ಕಾರ್ಯಗಳಲ್ಲಿ ತೊಡಗಲಿದ್ದಾರಂತೆ.

Web Stories

Share This Article