Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ನೀಡಿದ ಆರ್‌ಬಿಐ – ಎಲ್ಲಿಂದ ಬಂತು ಇಷ್ಟು ದೊಡ್ಡ ಮೊತ್ತ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ನೀಡಿದ ಆರ್‌ಬಿಐ – ಎಲ್ಲಿಂದ ಬಂತು ಇಷ್ಟು ದೊಡ್ಡ ಮೊತ್ತ?

Latest

ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ನೀಡಿದ ಆರ್‌ಬಿಐ – ಎಲ್ಲಿಂದ ಬಂತು ಇಷ್ಟು ದೊಡ್ಡ ಮೊತ್ತ?

Public TV
Last updated: August 27, 2019 4:30 pm
Public TV
Share
4 Min Read
RBI reuters
SHARE

ಮುಂಬೈ: ದೇಶದ ಆರ್ಥಿಕ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ಹಣವನ್ನು ನೀಡಿದೆ.

ದೇಶದ ಕೇಂದ್ರ ಬ್ಯಾಂಕ್ ಆಗಿರುವ ಆರ್‌ಬಿಐ ತನ್ನ ಬಳಿಯಿರುವ ಡಿವಿಡೆಂಡ್ ಮತ್ತು ಸರ್ ಪ್ಲಸ್ ನಿಧಿಯಿಂದ ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ಸರ್ಕಾರಕ್ಕೆ ವರ್ಗಾಯಿಸಲಿದೆ. ಈ ನಿಧಿಯನ್ನು ಸರ್ಕಾರ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಬಳಕೆ ಮಾಡಲಿದೆ. ಇಷ್ಟು ದೊಡ್ಡ ಮೊತ್ತವನ್ನು ಆರ್‌ಬಿಐ ತನ್ನಲ್ಲಿಯ ಸರ್ ಪ್ಲಸ್(ಮೀಸಲು ನಿಧಿ)ನಿಂದ 1.23 ಲಕ್ಷ ಕೋಟಿ ರೂ. ಮತ್ತು ಉಳಿದ ಮೊತ್ತ 52,637 ಕೋಟಿ ರೂ.ವನ್ನು ಸರ್ ಪ್ಲಸ್ ರಿಸರ್ವ್ ನಿಂದ ವರ್ಗಾಯಿಸಲಿದೆ.

rbi

2016-17ನೇ ಆರ್ಥಿಕ ವರ್ಷದಲ್ಲಿ ಆರ್‌ಬಿಐ ಬ್ಯಾಲೆನ್ಸ್ ಶೀಟ್ 36.2 ಲಕ್ಷ ಕೋಟಿ ರೂ. ಹೊಂದಿತ್ತು. ಸಾಮಾನ್ಯ ಕಂಪನಿಗಳ ರೀತಿಯಲ್ಲಿ ಆರ್‌ಬಿಐ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಲ್ಲ. ಬ್ಯಾಂಕಿನ ಒಟ್ಟು ಸಂಪನ್ಮೂಲದ ಶೇ.26ರಷ್ಟು ಭಾಗ ರಿಸರ್ವ್ ರೂಪದಲ್ಲಿ ಇರಿಸಲಾಗುತ್ತದೆ. ವಿದೇಶಿ ವಿನಿಮಯ ಮತ್ತು ಭಾರತದ ಸರ್ಕಾರಿ ಭದ್ರತೆಯ ನಿಯಮದಂತೆ ಶೇ.26ರಷ್ಟು ಸಂಪನ್ಮೂಲವನ್ನು ಚಿನ್ನದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಸದ್ಯ ಆರ್‌ಬಿಐ 566 ಟನ್ ಕ್ಕಿಂತಲೂ ಹೆಚ್ಚು ಚಿನ್ನವನ್ನು ಹೊಂದಿದೆ. ಚಿನ್ನದ ಸಂಗ್ರಹಣೆಯನ್ನು ವಿದೇಶಿ ವಿನಿಮಯದೊಂದಿಗೆ ಜೋಡಿಸಿದಾಗ ಬ್ಯಾಂಕಿನ ಸಂಪತ್ತು ಶೇ.77ರಷ್ಟಾಗುತ್ತದೆ. ಕೆಲವೊಮ್ಮೆ ಇದೇ ವಿಷಯಕ್ಕಾಗಿ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವೆ ಗೊಂದಲಗಳು ಉಂಟಾಗುತ್ತವೆ. ಆರ್‍ಬಿಐ ಮೀಸಲು ನಿಧಿ ಎಷ್ಟಿರಬೇಕೆಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ.

Money Market

ಆರ್‌ಬಿಐ ಬಳಿ ರಿಸರ್ವ್ ಬಂದಿದ್ದು ಹೇಗೆ?
ಆರ್‌ಬಿಐ ಎಲ್ಲ ರಿಸರ್ವ್ ಒಂದೇ ರೀತಿಯಾಗಿರಲ್ಲ. 2017-18ರಲ್ಲಿ ಆರ್‌ಬಿಐ ರಿಸರ್ವ್ 6.9 ಲಕ್ಷ ಕೋಟಿ ರೂ. ಇತ್ತು. ಈ ರಿಸರ್ವ್ ವಿದೇಶಿ ವಿನಿಮಯ ಸಂಗ್ರಹ ಮತ್ತು ಗೋಲ್ಡ್ ರಿಸರ್ವ್ ಮೌಲ್ಯವನ್ನು ತೋರಿಸುತ್ತದೆ. ಮಾರುಕಟ್ಟೆಯಲ್ಲಿ ಆಸ್ತಿಯ ಮೌಲ್ಯವು ಬದಲಾದಂತೆ ರಿಸರ್ವ್ ಮೊತ್ತದಲ್ಲಿಯೂ ಕೆಲ ಬದಲಾವಣೆ ಆಗುತ್ತದೆ. ಕಳೆದ ವರ್ಷ ಅಮೆರಿಕಾದ ಡಾಲರ್ ಮುಂದೆ ಭಾರತದ ರೂಪಾಯಿ ಮೌಲ್ಯ ಕುಸಿತಗೊಂಡಾಗ ಚಿನ್ನದ ಬೆಲೆ ಮತ್ತು ಸಿಜಿಆರ್‍ಎ (Currency and Gold Revaluation Account) ಶೇ.30.5ರಷ್ಟು ಏರಿಕೆ ಕಂಡಿತ್ತು.

rupee rbi

ಕಂಟಿಜೆನ್ಸಿ ಫಂಡ್:
ಕಂಟಿಜೆನ್ಸಿ ಫಂಡ್ (ಸಿಎಫ್-Contingency Fund) ಸಹ ರಿಸರ್ವ್ ಕಾಪಾಡಿಕೊಳ್ಳಲು ವಿಶೇಷ ಪಾತ್ರವನ್ನು ನಿರ್ವಹಿಸುತ್ತದೆ. ಮಾನಿಟರಿ ಪಾಲಿಸಿ, ಎಕ್ಸ್ ಚೇಂಜ್ ರೇಟ್ ಇತರೆ ಅವಶ್ಯಕತೆಗಳನ್ನು ಪೂರೈಸಲು ಕಂಟಿಜೆನ್ಸಿ ಫಂಡ್ ಸಹಾಯ ಮಾಡುತ್ತದೆ. ಈ ನಿಧಿಯನ್ನು ಮಾರುಕಟ್ಟೆಗೆ ಬಂಡವಾಳವಾಗಿ ಉಪಯೋಗಿಸಿ ಲಿಕ್ವಿಡಿಟಿಯ ಸಮತೋಲನವನ್ನು ಆರ್ ಬಿಐ ಮಾಡಿಕೊಳ್ಳುತ್ತದೆ. ಈ ಮೂಲಕ ಆರ್‌ಬಿಐನಲ್ಲಿ ವಿದೇಶಿ ವಿನಿಮಯದ ಸಂಗ್ರಹದಲ್ಲಿ ಏರಿಕೆ ಕಾಣುವಂತೆ ಮತ್ತು ಮಾರುಕಟ್ಟೆಯಲ್ಲಿಯ ಬೆಲೆ ಏರಿಕೆ-ಇಳಿಕೆಯನ್ನು ನಿಯಂತ್ರಣ ಮಾಡುವ ಕೆಲಸವನ್ನು ಆರ್‌ಬಿಐ ಮಾಡುತ್ತದೆ. 2017-18ರಲ್ಲಿ 2.32 ಲಕ್ಷ ಕೋಟಿ ರೂ. ಕಂಟಿಜೆನ್ಸಿ ಫಂಡ್ ಆರ್‌ಬಿಐ ಬಳಿ ಇತ್ತು. ಸಿಎಫ್ ನಿಧಿ ಆರ್‌ಬಿಐನ ಆಸ್ತಿಯ ಒಟ್ಟಾರೆ ಶೇ.6.4ರಷ್ಟಿತ್ತು. ಸಿಜಿಆರ್‍ಎ ಮತ್ತು ಸಿಎಫ್ ಎರಡು ಸೇರಿಸಿದಾಗ ಆರ್‌ಬಿಐ ಆಸ್ತಿಯ ಮೌಲ್ಯ ಶೇ.26ರಷ್ಟು ಆಗಲಿದೆ.

GOLD 1

ಆರ್‌ಬಿಐ ಸರ್ ಪ್ಲಸ್ ಎಷ್ಟಿದೆ?
ಆರ್‌ಬಿಐ ತನ್ನ ಬಳಿಯಿರುವ ಸರ್ ಪ್ಲಸ್ ನ್ನು ಸದ್ಯ ಸರ್ಕಾರಕ್ಕೆ ವರ್ಗಾಯಿಸಿದೆ. ಆರ್‌ಬಿಐ ತನ್ನ ಹಣಕಾಸಿನ ಸ್ಟೇಟ್‍ಮೆಂಟ್ ಎರಡು ಪ್ರಮುಖ ಭಾಗಗಳಿವೆ. ಮೊದಲನೇಯದ್ದು ಆರ್‌ಬಿಐ ತನ್ನ ಆದಾಯಕ್ಕೆ ತೆರಿಗೆಯನ್ನು ನೀಡಲ್ಲ. ಹಾಗಾಗಿ ತನ್ನ ಅವಶ್ಯಕತೆಗೆ ಬಳಕೆಯಾಗಿ ಉಳಿದ ಮೊತ್ತವನ್ನು ಸರ್ ಪ್ಲಸ್ ರೂಪದಲ್ಲಿ ಉಳಿಸಿಕೊಳ್ಳುತ್ತದೆ. ಸರ್ ಪ್ಲಸ್ ರೂಪದಲ್ಲಿ ಉಳಿಸಿಕೊಂಡಿರುವ ಮೊತ್ತವನ್ನು ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ಎರಡನೇಯದ್ದು ತನ್ನ ಸೆಕ್ಯೂರಿಟಿಗೆ ಬಡ್ಡಿಯನ್ನು ಆರ್‌ಬಿಐ ಪಡೆದುಕೊಳ್ಳುತ್ತದೆ. 2017-18ನೇ ವರ್ಷದಲ್ಲಿ ಆರ್‌ಬಿಐ ಕಂಟಿಜೆನ್ಸಿ ಫಂಡ್ ನಿಂದ 14,200 ಕೋಟಿ ರೂ.ಯನ್ನು ತನ್ನ ಖರ್ಚಿಗೆ ಬಳಸಿಕೊಂಡಿತ್ತು. ಸಿಎಫ್ ನಿಂದ ಮೊತ್ತ ಹೊರ ಹೋದಷ್ಟು ಆರ್‌ಬಿಐ ಸರ್ ಪ್ಲಸ್ ಕಡಿಮೆ ಆಗುತ್ತದೆ. 2013-14ರಿಂದ ಮೂರು ವರ್ಷ ಆರ್‌ಬಿಐ ಸಿಎಫ್ ನಿಂದ ಹಣ ಹೊರ ತೆಗೆದಿಲ್ಲ. ಟೆಕ್ನಿಕಲ್ ಕಮಿಟಿ ಪ್ರಕಾರ ಆರ್‌ಬಿಐ ಎಕನಾಮಿಕ್ ಕ್ಯಾಪಿಟಲ್ ಹೊಂದಿದ್ದರಿಂದ ಸಿಎಫ್ ನಿಂದ ತಗೆಯಲಿಲ್ಲ. ಕಳೆದ ವರ್ಷ ಬ್ಯಾಂಕುಗಳು ಸಿಎಫ್ ನಲ್ಲಿ ಹಣವನ್ನು ಮೀಸಲಿರಿಸಿವೆ.

Gold Markert

ಸರ್ ಪ್ಲಸ್ ಹೆಚ್ಚಾಗಿದ್ದು ಹೇಗೆ?
ಈ ವರ್ಷ ಆರ್‌ಬಿಐ ದಾಖಲೆಯ ಪ್ರಮಾಣದಲ್ಲಿ ಸರ್ ಪ್ಲಸ್ ಹೊಂದಿತ್ತು. ಕಾರಣ ಕಳೆದ ವರ್ಷ ಬ್ಯಾಂಕ್ ಚಿನ್ನ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿತ್ತು. ಹಾಗಾಗಿ ಆರ್‌ಬಿಐ ಹೆಚ್ಚಿನ ಲಾಭಾಂಶದಲ್ಲಿ ಡಾಲರ್ ನ್ನು ಮಾರಾಟ ಮಾಡಿತ್ತು. ಹಣಕಾಸಿನ ಮಾರುಕಟ್ಟೆ (Money market)ಯಲ್ಲಿ ದಾಖಲೆ ಪ್ರಮಾಣದಲ್ಲಿ ಬಾಂಡ್ ಖರೀದಿಸಿದ್ದರಿಂದ, ಆರ್‌ಬಿಐ ಒಳ್ಳೆಯ ಬಡ್ಡಿ ಲಭ್ಯವಾಗುತ್ತಿದೆ. ನಿವೃತ್ತ ಆರ್‌ಬಿಐ ಗವರ್ನರ್ ಬಿಮಲ್ ಜಲನ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಹಣ ನೀಡಬಹುದು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸ್ಸನ್ನು ಆರ್‌ಬಿಐ ಈಗ ಅನುಷ್ಠಾನ ಮಾಡಿದ್ದು ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ. ಹಣವನ್ನು ವರ್ಗಾಯಿಸಿದೆ.

Money Market 1

ಇದೇ ಮೊದಲ ಬಾರಿಯಲ್ಲ:
ಸರ್ಕಾರಕ್ಕೆ ಹಣವನ್ನು ಆರ್‌ಬಿಐ ವರ್ಗಾವಣೆ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಆದರೆ ಇಷ್ಟೊಂದು ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ಮಾಡುತ್ತಿರುವುದು ಇದೇ ಮೊದಲು. 2008 – 15,011 ಕೋಟಿ ರೂ., 2009 – 25,009 ಕೋಟಿ ರೂ., 2010 – 18,759 ಕೋಟಿ ರೂ., 2011 – 15,009 ಕೋಟಿ ರೂ.,2012 – 16,010 ಕೋಟಿ ರೂ., 2013 – 33,010 ಕೋಟಿ ರೂ., 2014 – 52,679 ಕೋಟಿ ರೂ., 2015 – 65,896 ಕೋಟಿ ರೂ., 2016 – 65,876 ಕೋಟಿ ರೂ., 2017 – 30,659 ಕೋಟಿ ರೂ., 2018 – 50,000 ಕೋಟಿ ರೂ. ವರ್ಗಾವಣೆಯಾಗಿದೆ.

TAGGED:Gold MarketgovernmentmoneyMoney MarketPublic TVrbiReserve Fundಆರ್‍ಬಿಐಗೋಲ್ಡ್ ಮಾರ್ಕೆಟ್ಪಬ್ಲಿಕ್ ಟಿವಿಮನಿ ಮಾರ್ಕೆಟ್ಮೀಸಲು ನಿಧಿಸರ್ಕಾರಹಣ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Rahul Gandhi
Latest

ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ

Public TV
By Public TV
1 minute ago
pm modi parliament
Latest

ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ

Public TV
By Public TV
1 minute ago
Yadagiri Bus Fire
Bengaluru City

ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು – 7 ಮಂದಿ ಸಜೀವ ದಹನ

Public TV
By Public TV
23 minutes ago
Dharmasthala Temple
Dakshina Kannada

ಧರ್ಮಸ್ಥಳ ದೇವರ ದರ್ಶನ ಸಮಯದಲ್ಲಿ ಬದಲಾವಣೆ

Public TV
By Public TV
26 minutes ago
Bengaluru Sarjapura Murder
Bengaluru City

ಕುಡಿದ ಮತ್ತಲ್ಲಿ ಕಿರಿಕ್ – ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನ ಕೊಲೆ

Public TV
By Public TV
26 minutes ago
karnataka trekking SOP
Bengaluru City

ರಾಜ್ಯದಲ್ಲಿ ಟ್ರೆಕ್ಕಿಂಗ್‌ಗೆ ಹೊಸ ಗೈಡ್‌ಲೈನ್ಸ್ – ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ: ಈಶ್ವರ್ ಖಂಡ್ರೆ

Public TV
By Public TV
39 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?