ಬೆಂಗಳೂರು: ಈ ಅಕ್ರಮ ಸಂಬಂಧ (Illicit Relationship) ದಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂಥದ್ದೇ ಒಂದು ವಿಚಿತ್ರ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಕೆಳ ಮನೆಯಲ್ಲಿದ್ದ ವಿವಾಹಿತೆ, ಮೇಲಿನ ಮನೆಯಲ್ಲಿದ್ದ ವಿವಾಹಿತನ ಜೊತೆಗೆ ಪರಾರಿಯಾಗಿದ್ದಾಳೆ.
Advertisement
ಕೆಳ ಮಹಡಿಯ ಗಂಡ, ಮೇಲಿನ ಮನೆಯಲ್ಲಿರುವ ಹೆಂಡತಿ ಬೆಂಗಳೂರಿನ ಜ್ಞಾನಭಾರತಿಯ ಪೊಲೀಸ್ ಠಾಣೆ (Jnanabharathi Police Station) ಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಹೆಂಡತಿ ಕಾಣ್ತಿಲ್ಲ ಅಂತಾ ಗಂಡ, ನನ್ನ ಗಂಡ ಕಾಣ್ತಿಲ್ಲ ಅಂತ ಹೆಂಡತಿ ಇಬ್ಬರೂ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ
Advertisement
Advertisement
ನವೀದ್ ಮತ್ತು ಝೀನತ್ ದಂಪತಿ 12 ವರ್ಷದ ಹಿಂದೆ ವಿವಾಹವಾಗಿದ್ದರೆ, ಮುಬಾರಕ್ ಮತ್ತು ಶಾಜಿಯಾ ದಂಪತಿ 8 ವರ್ಷದ ಹಿಂದೆ ವಿವಾಹವಾಗಿದ್ದರು. ಇಬ್ಬರು ದಂಪತಿಗಳಿಗೂ ಇಬ್ಬರು ಮಕ್ಕಳಿದ್ದಾರೆ. ಈ ಎರಡೂ ಕುಟುಂಬ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ನಗರ್ ನಲ್ಲಿ ಒಂದೇ ಕಟ್ಟಡದಲ್ಲಿ ವಾಸವಿತ್ತು. ಕೆಳ ಮಹಡಿಯಲ್ಲಿ ಮುಬಾರಕ್ ಮತ್ತು ಶಾಜಿಯಾ ಇದ್ದರೆ, ಎರಡನೇ ಮಹಡಿಯಲ್ಲಿ ನವೀದ್ ಮತ್ತು ಝೀನತ್ ವಾಸವಿದ್ದರು.
Advertisement
ಮುಬಾರಕ್ ಪತ್ನಿ ಶಾಜಿಯಾ ಜೊತೆಗೆ ಝೀನತ್ ಪತಿ ನವೀದ್ ಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಇದೀಗ ಕೇಳಿಬಂದಿದೆ. ಶಾಜಿಯಾ ಮತ್ತು ನವೀದ್ ಇಬ್ಬರೂ ಮನೆಬಿಟ್ಟು ಎಸ್ಕೇಪ್ ಆಗಿದ್ದಾರೆ. ಇದೀಗ ಎರಡೂ ಕಟುಂಬದವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k