ಬೆಂಗಳೂರು: ಅಯೋಧ್ಯೆಯಲ್ಲಿ (Ayodhye) ರಾಮವೈಭವಕ್ಕೆ ಸಜ್ಜಾಗುತ್ತಿದೆ. ಜನವರಿ 22 ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅಯೋಧ್ಯೆ ನಗರಿಯ ಸಂಭ್ರಮದಲ್ಲಿ ಕರುನಾಡು ಭಾಗಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಮನೆ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಲಿದೆ.
ಸಂಘರ್ಷ ಸವಾಲಿನ ಮಧ್ಯೆ ಪುರುಷೋತ್ತಮ ಶ್ರೀರಾಮನ (Ramamandir) ಸಂಭ್ರಮದ ತೇರಿಗೆ ಮುಹೂರ್ತ ನಿಗದಿಯಾಗಿದೆ. ಮುಂದಿನ ವರ್ಷ ಜನವರಿ 22ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾನ ಪ್ರಭೆ ಪ್ರಜ್ವಲಿಸಲಿದೆ. ಭವ್ಯ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಈಗ ಶ್ರೀರಾಮ ಭಕ್ತರಿಗೆ ಹಬ್ಬವಿದ್ದಂತೆ. ಕರುನಾಡಿನ ಪ್ರತಿ ಮನೆ ಮನೆಗೂ ಅಯೋಧ್ಯೆಯ ಶ್ರೀರಾಮನ ಸನ್ನಿಧಾನದಿಂದಲೇ ಮಂತ್ರಾಕ್ಷತೆ ತಲುಪಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ಮಾಡುತ್ತಿದೆ. ಬೆಂಗಳೂರಿನ ವಿವಿಪುರಂನ ಆಂಜನೇಯನ ದೇಗುಲದಲ್ಲಿ ಕಲಶದಲ್ಲಿ ಮಂತ್ರಾಕ್ಷತೆ, ರಾಮನ ಭಾವಚಿತ್ರ ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:
ಡಿಸೆಂಬರ್ 22ರೊಳಗೆ ಮಂತ್ರಾಕ್ಷತೆಯನ್ನು ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿ ಗ್ರಾಮ ಗ್ರಾಮಗಳಿಗೆ ತಲುಪಿಸುವ ಕಾರ್ಯ ನಡೆಯಲಿದೆ. ಇನ್ನು ಪ್ರಾಣ ಪ್ರತಿಷ್ಠಾಪನೆಯ ದಿನ ಸೂರ್ಯಾಸ್ತವಾದ ಮೇಲೆ ಪ್ರತಿ ಮನೆಯಲ್ಲಿ ದೀಪ ಬೆಳಗಿ ದೀಪೋತ್ಸವ ಆಚರಿಸಲು ಸಂಘಟನೆ ಮನವಿ ಮಾಡಿ ಕರಪತ್ರ ಹಂಚಲಿದೆ. ಪ್ರತಿ ಮನೆಗೂ ಆಯೋಧ್ಯೆಯ ಮಂತ್ರಾಕ್ಷತೆ ತಲುಪುವಂತೆ ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧಾರ ಮಾಡಿದೆ. ರಾಮ ಸಂಭ್ರಮಕ್ಕೆ ಎಲ್ಲಡೆ ಪಸರಿಸಲು ಈ ವಿಶಿಷ್ಠ ಪ್ರಯತ್ನವನ್ನು ಮಾಡುತ್ತಿದೆ.