ಮಿಲ್ಕಿ ಬ್ಯೂಟಿಗೆ ‘ಟೊಮೆಟೊ’ ಎಂದು ಕರೆದ ಲವರ್ : ತಮನ್ನಾ ಕೆನ್ನೆ ಕೆಂಪು ಕೆಂಪು

Public TV
1 Min Read
Tamannaah 3

ಕ್ಷಿಣದ ಹೆಸರಾಂತ ನಟಿ ತಮನ್ನಾ ಇದೀಗ ಸಿನಿಮಾಗಳಿಗಿಂತಲೂ ಲವ್ ಕಾರಣಕ್ಕಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಹಿಂದೆ ತಮನ್ನಾ ಹೆಸರು ಹಲವಾರು ಕಲಾವಿದರ ಜೊತೆ ತಳುಕು ಹಾಕಿಕೊಂಡಿತ್ತು. ಇನ್ನೇನು ಮದುವೆ ಆಗಲಿದ್ದಾರೆ ಎನ್ನುವಲ್ಲಿಗೆ ಪ್ರಚಾರ ಪಡೆದಿತ್ತು. ಲವರ್, ಎಕ್ಸ್ ಲವರ್ ಅಂತೆಲ್ಲ ಪಟ್ಟಿ ಮಾಡುವಷ್ಟರ ಮಟ್ಟಿಗೆ ತಮನ್ನಾ ಡೇಟಿಂಗ್ ವಿಚಾರದಲ್ಲಿ ಸದ್ದು ಮಾಡಿದ್ದರು. ಈಗ ಮತ್ತೆ ಅದೇ ಕಾರಣಕ್ಕಾಗಿ ತಮನ್ನಾ ಸುದ್ದಿಗೆ ಸಿಕ್ಕಿದ್ದಾರೆ.

Tamannaah 2

ಹಲವಾರು ದಿನಗಳಿಂದ ತಮನ್ನಾ ಹೆಸರು ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಳುಕು ಹಾಕಿಕೊಂಡಿದೆ. ವೆಬ್ ಸೀರಿಸ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಇಬ್ಬರೂ ಮೊನ್ನೆಯಷ್ಟೇ ಗೋವಾದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಅಲ್ಲದೇ, ಜೊತೆಗಿರುವ ಅನೇಕ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

Tamannaah 1

ಹೀಗಾಗಿ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದೆ ಎನ್ನುವ ಸುದ್ದಿಯೂ ಹರಿದಾಡುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರ ಹಿನ್ನೆಲೆಯಾಗಿ ಇವರ ಪ್ರೇಮ ಮದುವೆವರೆಗೂ ಬಂದಿದೆ ಎನ್ನುತ್ತಾರೆ ಆಪ್ತರು. ಹಾಗಾಗಿಯೇ ತನ್ನ ಲವರ್ ಅನ್ನು ಪ್ರೀತಿಯಿಂದ ವಿಜಯ್ ವರ್ಮಾ, ‘ಟೊಮೆಟೊ’ ಎಂದು ಕರೆಯುತ್ತಾರಂತೆ. ತಮನ್ನಾ ಅವರ ಪಾಲಿನ ಟೊಮೆಟೊ ಆಗಿ ಬದಲಾಗಿದ್ದಾರೆ.

Tamannaah 4

ಸಿನಿಮಾ ರಂಗಕ್ಕೆ ತಮನ್ನಾ ಬಂದು ಒಂದೂವರೆ ದಶಕ ಕಳೆದರೂ, ಇನ್ನೂ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ. ಈಗಲೂ ಬಹುಬೇಡಿಕೆಯ ನಟಿಯರ ಪಟ್ಟಿಯಲ್ಲಿರುತ್ತಾರೆ. ಕೇವಲ ತೆಲುಗು ಸಿನಿಮಾಗಳಲ್ಲಿ ಮಾತ್ರವಲ್ಲ, ಬಾಲಿವುಡ್ ಚಿತ್ರರಂಗಕ್ಕೂ ಅವರು ಹಾರಿದ್ದಾರೆ. ತಮಿಳಿನಲ್ಲೂ ನಟಿಸಿದ್ದಾರೆ. ಕನ್ನಡದ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಇಂತಹ ಮಿಲ್ಕಿ ಬ್ಯೂಟಿಗೆ ಹೊಸದೊಂದು ಹೆಸರನ್ನು ಬಾಯ್ ಫ್ರೆಂಡ್ ನಾಮಕರಣ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *