ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ – ತಪ್ಪಿದ ಭಾರೀ ದುರಂತ

Public TV
1 Min Read
LPG Cylinder 2

ಯಾದಗಿರಿ: ಅಡುಗೆ ಅನಿಲದ‌ ಸಿಲಿಂಡರ್‌ಗಳನ್ನ (LPG Cylinder) ಹೊತ್ತು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಪರಿಣಾಮ ನೂರಾರು ಸಿಲಿಂಡರ್ ಗಳು‌ ರಸ್ತೆ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಬಳಿಯ ಹುನಗುಂದ- ಸುರಪುರ ರಾಜ್ಯ ಹೆದ್ದಾರಿಯಲ್ಲಿ (Hunagunda Surapua State Highway) ನಡೆದಿದೆ.

LPG Cylinder

ಲಾರಿ ಪಲ್ಟಿಹೊಡೆಯುತ್ತಿದ್ದಂತೆ, ಸಿಲಿಂಡರ್‌ಗಳು ಗೋಲಿಗಳಂತೆ ಉರುಳಿಹೋಗಿವೆ. ಅದೃಷ್ಟವಶಾತ್ ಭಾರೀ ದುರಂತ‌ವೊಂದು ತಪ್ಪಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡದಿದ್ದರೆ ಲೈಸೆನ್ಸ್ ರದ್ದು; ಸಚಿವ ಪರಮೇಶ್ವರ್ ಎಚ್ಚರಿಕೆ

LPG

ಲಾರಿ ಪಲ್ಟಿಯಾದ ಸಂದರ್ಭದಲ್ಲಿ ನೂರಾರು ಅಡುಗೆ ಅನಿಲ ಸಿಲಿಂಡರ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳನ್ನ ನೋಡಿ ಜನರು ಕೆಲಕಾಲ ಭಯಭೀತರಾಗಿದ್ರು. ಕೆಂಭಾವಿ ಪಟ್ಟಣದ ಶ್ರೀನಿಧಿ ಗ್ಯಾಸ್ ಏಜೆನ್ಸಿಗೆ ಸೇರಿದ ಸಿಲಿಂಡರ್ ತೆಗೆದುಕೊಂಡು ಹೋಗುತ್ತಿದ್ದಾಗ ಲಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಕೆಂಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಿಲಯನ್ಸ್ ಫೌಂಡೇಶನ್ ನಿಂದ 5,000 ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ!

Share This Article