ಬೆಂಗಳೂರು: ರಾಜ್ಯದಲ್ಲಿ ಅಭೂತಪೂರ್ವ ಗೆಲುವು ಕಂಡ ಕಾಂಗ್ರೆಸ್ (Congress) ಗೆ ಲೋಕಸಭಾ ಚುನಾವಣೆ (Loksabha Election) ಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿ ಹೊಂದಿದೆ.
ದಕ್ಷಿಣ ಭಾರತದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದು, ಎಐಸಿಸಿ ನಾಯಕರಿಗೂ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮೇಲೆ ದೊಡ್ಡಮಟ್ಟದ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆವರೆಗೆ ಗ್ಯಾರಂಟಿ ಯೋಜನೆಗೆ ಯಾವುದೇ ಅಡ್ಡಿ ಆಗಬಾರದು ಅನ್ನೋದು ಕೈ ನಾಯಕರ ಲೆಕ್ಕಾಚಾರ. ಈ ಮಧ್ಯೆ ಯಾವುದೇ ವಿವಾದಗಳು ತಲೆ ಎತ್ತದಂತೆ ನೋಡಿಕೊಳ್ಳಲು ಸಹ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.
ಪಠ್ಯ ಪುಸ್ತಕ ಹಾಗೂ ಗೋಹತ್ಯೆ ವಿವಾದದಲ್ಲಿ ಆತುರಕ್ಕೆ ಬಿದ್ದ ಸಚಿವರುಗಳು ಮಾತನಾಡಿದ್ದಾರೆ. ಕಾಂಗ್ರೆಸ್ ಸಚಿವರ ಹಾಗೂ ಕೆಲವು ನಾಯಕರ ನಡೆಯಿಂದ ಪಕ್ಷದ ಹಿರಿಯರು ಗರಂ ಆಗಿದ್ದು, ಎಐಸಿಸಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಪ್ಲೀಸ್ ಗಪ್ ಚುಪ್ ಎಂಬ ಸಂದೇಶ ಕಾಂಗ್ರೆಸ್ ಪಾಳಯಕ್ಕೆ ರವಾನಿಸಿದ್ದಾರಂತೆ. ಈ ವರ್ಷ ಕಳೆಯುವವರೆಗೆ ವಿವಾದದಿಂದ ದೂರ ಇರಲು ಶಾಸಕರು, ಸಚಿವರ ಕಿವಿ ಹಿಂಡುವಂತೆ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಗೆ ಎಐಸಿಸಿ (AICC) ಸೂಚನೆ ನೀಡಿದೆ. ಇದನ್ನೂ ಓದಿ: ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತಾಡ್ತಾರೆ ಅಷ್ಟೇ: ವಿನಯ್ ಕುಲಕರ್ಣಿ
ಪಠ್ಯ ಪುಸ್ತಕ ಪರಿಷ್ಕರಣೆ ಆದರೂ ಮುಂದಿನ ಸಾಲಿನಿಂದಲೇ ಜಾರಿಯಾಗಬೇಕು. ಯಾವುದೇ ಕಾಯ್ದೆ ತಿದ್ದುಪಡಿ ಆದರೂ ಲೋಕಸಭಾ ಚುನಾವಣೆ ಮುಗಿಯಬೇಕು ಎಂಬ ಸಂದೇಶ ಕೈ ಪಾಳಯಕ್ಕೆ ತಲುಪಿದೆ. ಒಟ್ಟಾರೆ ಸಚಿವರ ಮಾತಿನಿಂದ ಎದ್ದ ವಿವಾದಕ್ಕೆ ಹೈಕಮಾಂಡ್ ಮಟ್ಟದಿಂದಲೇ ಪರಿಹಾರ ಸೂತ್ರ ಕೊಡಿಸಲು ರಾಜ್ಯ ಕಾಂಗ್ರೆಸ್‍ನ ಹಿರಿಯರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.