ಮಡಿಕೇರಿ: ಬೆಂಗಳೂರಿನ (Bengaluru) ಕೋಗಿಲು ಬಡಾವಣೆಯಲ್ಲಿದ್ದ ಅರ್ಹ ಸಂತ್ರಸ್ತರಿಗೆ ಶೀಘ್ರದಲ್ಲೇ ವಸತಿ ಸೌಲಭ್ಯ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದ್ರೆ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ (Cauvery River) ತಟದಲ್ಲಿರುವ ಸಂತ್ರಸ್ತರ ಬದುಕು ಇಂದಿಗೂ ಅತಂತ್ರವಾಗಿಯೇ ಇದೆ.

ಹೌದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್ ಪೋನ್ನಣ್ಣ (A.S Ponnanna) ಅವರ ಕ್ಷೇತ್ರದಲ್ಲಿ ಜನ ಈ ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವುದರಿಂದ ತಟದಲ್ಲಿರುವ ಜನ ಅಲೆದಾಡಬೇಕಾಗಿದೆ. ಇದನ್ನೂ ಓದಿ: ಗಣಿ ನಾಡು ಬಳ್ಳಾರಿಯಲ್ಲಿ `ರಕ್ತಸಿಕ್ತ’ ರಾಜಕೀಯ – ಜನಾರ್ದನ ರೆಡ್ಡಿ ಮನೆಯಲ್ಲಿ ಮತ್ತೊಂದು ಬುಲೆಟ್ ಪತ್ತೆ!

ಕಾವೇರಿ ನದಿ ತಟದಲ್ಲಿರುವ ಜನ 2018ರಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಕ್ಕಿ ಮನೆ ಮಠ ಕಳೆದುಕೊಂಡರು. ಅಂದಿನಿಂದ ಈವರೆಗೆ ಶಾಶ್ವತ ಪರಿಹಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಪ್ಲಾಸ್ಟಿಕ್ ಟಾರ್ಪಾಲ್, ಶೀಟ್‌ಗಳಿಂದ ತಾತ್ಕಾಲಿಕ ಶೆಡ್‌ಗಳನ್ನ ನಿರ್ಮಾಣ ಮಾಡಿಕೊಂಡು ಶಾಶ್ವತ ಸೂರಿಗಾಗಿ ಕಾಯುತ್ತಿದ್ದಾರೆ. ಆದ್ರೆ ಅದಿನ್ನೂ ಕನಸಾಗಿಯೇ ಉಳಿದಿದೆ. ಜಿಲ್ಲಾಡಳಿತವಾಗಲಿ ರಾಜಕೀಯ ಮುಖಂಡರಾಗಲಿ, ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಜನ ಆಡಳಿತ ವರ್ಗದ ವಿರುದ್ಧ ಹಿಡಿ ಶಾಪ ಹಾಕ್ತಿದ್ದಾರೆ. ಇದನ್ನೂ ಓದಿ: ಅಕ್ರಮ ಒತ್ತುವರಿದಾರರ ಸುಳ್ಳಿನ ಕಂತೆ – 2021ರಲ್ಲಿ ಇಲ್ಲದ ಮನೆಗಳು 2023ರಲ್ಲಿ ಪ್ರತ್ಯಕ್ಷ!

ಆದ್ರೆ ಕರಡಿಗೋಡು, ಗುಹ್ಯ, ಕೂಡುಗದ್ದೆ ಗ್ರಾಮಗಳಲ್ಲಿ ನೆಲೆಸಿರುವ ನದಿ ತಟದ ನಿವಾಸಿಗಳು ಪ್ರತಿ ವರ್ಷ ಮಳೆಗಾಲ ಬಂದಾಗೆಲ್ಲಾ ಆಶ್ರಯ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ಮಾತ್ರ ತಪ್ಪಿಲ್ಲ. ಇದನ್ನೂ ಓದಿ: ಮೋದಿ ಹೊಗಳುಭಟ್ಟರ ಸಮೀಕ್ಷಾ ವರದಿಯಲ್ಲಿ ಯಾವ ವಿಶ್ವಾಸಾರ್ಹತೆ ಇರಲು ಸಾಧ್ಯ? – EVM ಸರ್ವೆಗೆ ಸಿಎಂ ಕಿಡಿ

