– ಆಯ್ಕೆಯಾಗುತ್ತಾ ಕರ್ನಾಟಕ ಮೂಲದ ಬಾಲರಾಮ ಮೂರ್ತಿ?
ಮೈಸೂರು: ಉತ್ತರ ಪ್ರದೇಶದಲ್ಲಿರುವ (Uttar Pradesh) ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರ (Sri Rama Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಕೋಟ್ಯಾನುಕೋಟಿ ರಾಮನ ಭಕ್ತರು ರಾಮನಾಮ ಜಪಿಸುತ್ತಿದ್ದಾರೆ. ಈ ನಡುವೆ ಅಯೋಧ್ಯೆಯಲ್ಲಿ ಪ್ರತಿಷ್ಟಾಪನೆಗೊಳಿಸಲು ಕಳುಹಿಸಿರುವ ಬಾಲ ಶ್ರೀರಾಮನ ಮೂರ್ತಿ ಕೆತ್ತನೆಗೆ ಬಳಸಿರುವುದು ಮೈಸೂರಿನ ಕೃಷ್ಣ ಶಿಲೆ (Mysuru Krishna Stone) ಎಂಬ ವೀಶೇಷ ಸಂಗತಿಯೊಂದು ಬೆಳಕಿಗೆ ಬಂದಿದೆ.
Advertisement
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಜಮೀನಿನಲ್ಲಿ 6 ತಿಂಗಳ ಹಿಂದೆ ಸಿಕ್ಕ ಬೃಹತ್ ಕೃಷ್ಣಶಿಲೆಯಲ್ಲೇ ಬಾಲ ರಾಮನ ಮೂರ್ತಿ (Sri Rama Idol) ಕೆತ್ತಲಾಗಿದೆ. ಅಯೋಧ್ಯೆಯ ಟ್ರಸ್ಟಿಗಳು ಈ ಸ್ಥಳಕ್ಕೆ ಬಂದು ಕಲ್ಲು ಪರೀಕ್ಷೆ ಮಾಡಿ ಕಲ್ಲನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿನ ಮಣ್ಣನ್ನು ಕೂಡ ಕುಂಭದಲ್ಲಿ ತೆಗೆದು ಕೊಂಡು ಹೋಗಿ ರಾಮ ಮಂದಿರದ ಗರ್ಭಗುಡಿಯ ಒಳಗಿಟ್ಟಿದ್ದಾರೆ ಎಂದು ಕೃಷ್ಣಶಿಲೆ ಅರ್ಪಿಸಿದ ಗುತ್ತಿಗೆದಾರ ಶ್ರೀನಿವಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?
Advertisement
Advertisement
ಈ ಸಂಬಂಧ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿರುವ ಶ್ರೀನಿವಾಸ್, ಹಾರೋಹಳ್ಳಿಯಲ್ಲಿ ಜಮೀನು ಹದಗೊಳಿಸುತ್ತಿದ್ದ ವೇಳೆ ಆಕಾಶ ನೀಲಿ ಬಣ್ಣದ ಬೃಹತ್ ಗಾತ್ರದ ಬಂಡೆಯೊಂದು ಪತ್ತೆಯಾಯಿತು. ರಾಮಮಂದಿರ ಗುರುಗಳೊಂದಿಗೆ ಸಂಪರ್ಕದಲ್ಲಿದ್ದ ವಿಶ್ವಕರ್ಮ ಸಮುದಾಯದ ಸುರೇಂದ್ರ ಎಂಬವರು ಶ್ರೀರಾಮನ ಮೂರ್ತಿಗೆ ಪರಿಶುದ್ಧ ಶಿಲೆ ಸಿಕ್ಕರೆ ಕೊಡುವಂತೆ ತಿಳಿಸಿದ್ದರು. ಜಮೀನು ಹದಗೊಳಿಸುತ್ತಿದ್ದ ವೇಳೆ ಬೃಹತ್ ಗಾತ್ರದ ಬಂಡೆ ಪತ್ತೆಯಾಯಿದ ನಂತರ ಅದನ್ನು ಮೂರು ಭಾಗ ಮಾಡಿ ಮತ್ತೊಂದು ಸ್ಥಳದಲ್ಲಿ ಇರಿಸಲಾಯಿತು. ನಂತರ ಸುರೇಂದ್ರ ವಿಶ್ವಕರ್ಮ ಎಂಬವರು ಅದನ್ನು ಇಷ್ಟಪಟ್ಟು, ವೈಜ್ಞಾನಿಕ ಪರೀಕ್ಷೆ ಮಾಡಿಸಿದ ಬಳಿಕ ಶ್ರೀರಾಮ ಮತ್ತು ಸೀತಾಮಾತೆ ಮೂರ್ತಿ ನಿರ್ಮಾಣಕ್ಕೆ ಶಿಲೆಗಳನ್ನ ಅಯೋಧ್ಯೆಗೆ ಕಳುಹಿಸಿಕೊಟ್ಟರು.
Advertisement
ಮೊದಲು 2 ಶಿಲೆಗಳನ್ನು ಕಳುಹಿಸಿದ ಬಳಿಕ ಅಯೋಧ್ಯೆಯಿಂದ ಗುರುಗಳೊಬ್ಬರು ಬಂದಿದ್ದರು. ಅವರು ಶಿಲೆ ಪತ್ತೆಯಾದ ಜಾಗದಿಂದಲೇ ಹಿಡಿ ಮಣ್ಣನ್ನು ತೆಗೆದುಕೊಂಡು ಹೋದರು. ಅದನ್ನು ರಾಮನ ಗರ್ಭಗುಡಿಯಲ್ಲಿಡುವುದಾಗಿಯೂ ಹೇಳಿದರು. ಶ್ರೀರಾಮ-ಸೀತಾ ಮಾತೆ ಬಳಿಕ, ಲಕ್ಷ್ಮಣ, ಭರತ, ಶತ್ರುಜ್ಞ ವಿಗ್ರಹಗಳ ಕೆತ್ತನೆಗಳಿಗೂ ಕೃಷ್ಣಶಿಲೆಯನ್ನು ಕಳುಹಿಸಿಕೊಡಲಾಯಿತು. ಇದೆಲ್ಲ ನಮ್ಮ ಪೂರ್ವಜರ ಪುಣ್ಯವೆಂದೇ ನಾವು ಭಾವಿಸುತ್ತೇವೆ ಎನ್ನುತ್ತಾರೆ ಕ್ವಾರಿ ಕೆಲಸ ಮಾಡುವ ಗುತ್ತಿಗೆದಾರ ಶ್ರೀನಿವಾಸ್. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್
ಆಯ್ಕೆಯಾಗುತ್ತಾ ಕರ್ನಾಟಕದ ಬಾಲರಾಮ ಮೂರ್ತಿ?
ಜನವರಿ 22ರಂದು ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಶುಕ್ರವಾರ (ಇಂದು) ಬಾಲ ಶ್ರೀರಾಮ ಮೂರ್ತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು ಆಯ್ಕೆಗೆ ಮೂರು ಮೂರ್ತಿಗಳನ್ನ ಕೆತ್ತನೆ ಮಾಡಲಾಗಿದ್ದು, ರಾಮ ಮಂದಿರ ಟ್ರಸ್ಟ್ ಸಭೆಯ ಬಳಿಕ ಮೂರ್ತಿಯನ್ನ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಕರ್ನಾಟಕ ಶಿಲ್ಪಿಗಳು, ಓರ್ವ ರಾಜಸ್ಥಾನ ಮೂಲದ ಶಿಲ್ಪಿಯಿಂದ ನಿರ್ಮಾಣಗೊಂಡಿರುವ ಕರ್ನಾಟಕ ಮೂಲದ ಬಾಲರಾಮನ ಮೂರ್ತಿ ಸಹ ಇದೆ. ಈ ಮೂರ್ತಿ ಪ್ರತಿಷ್ಟಾಪನೆಗೆ ಆಯ್ಕೆಯಾಗುತ್ತಾ? ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ನಂಟು ಉಳಿಯುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.