ಬೆಂಗಳೂರು: ಸೂಕ್ತ ತನಿಖೆ ನಡೆಸಿ ಗೌರಿ ಅವರ ಹಂತಕರನ್ನು ಬಂಧಿಸಬೇಕು ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ಹಂತಕರ ಪತ್ತೆ ಹಚ್ಚಬಹುದು ಎಂಬ ವಿಶ್ವಾಸವಿದೆ. ಗೌರಿ ಅವರು ತಮಗೆ ಜೀವ ಭಯ ಇದೆ. ರಕ್ಷಣೆ ಕೊಡಿ ಅಂತಾ ಕೇಳಲು ಗೃಹ ಸಚಿವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು. ಅಷ್ಟರಲ್ಲೇ ಈ ಘಟನೆ ನಡೆದು ಹೋಗಿದೆ ಎಂದು ಹೇಳಿದರು.
Advertisement
ಈ ಪ್ರಕರಣವನ್ನು ಸಿಎಂ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆ ಸೂಕ್ತವಲ್ಲ ಎಂದು ವಿಶೇಷ ತನಿಖಾ ದಳದ(ಎಸ್‍ಐಟಿ) ತನಿಖೆಗೆ ವಹಿಸಿದ್ದಾರೆ. ಹಂತಕರ ಸುಳಿವು ಸಿಕ್ಕಿದೆ. ಆದಷ್ಟು ಶೀಘ್ರದಲ್ಲೇ ಹಂತಕರ ಬಂಧನ ಆಗುವ ವಿಶ್ವಾಸವಿದೆ ಎಂದು ದೇವೇಗೌಡ ತಿಳಿಸಿದರು.