ಕನ್ನಡದ ಕಿರುತೆರೆಯಲ್ಲಿ ಹಲವು ವರ್ಷಗಳ ಕಾಲ ಸಕ್ರಿಯವಾಗಿದ್ದ ನಟಿ ಜ್ಯೋತಿ ರೈ (Jyothi Rai) ಆಗಾಗ್ಗೆ ತನ್ನ ಮೈಮಾಟವನ್ನ ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.
ತೆಲುಗು ಸಿನಿಮಾ ನಿರ್ದೇಶಕ ಸುಕು ಪೂರ್ವಜ್ ಜೊತೆ 2ನೇ ಮದ್ವೆಯಾಗಿರುವ ನಟಿ ಜ್ಯೋತಿ ರೈ, ಈಗ ಜ್ಯೋತಿ ಪೂರ್ವಜ್ (Jyoti Poorvaj) ಆಗಿ ಬದಲಾಗಿದ್ದಾರೆ. ಇದೀಗ ಅವರು ʻಕಿಲ್ಲರ್ʼ (Killer Movie) ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್ ಕೂಡ ಸಖತ್ ವೈರಲ್ ಆಗಿದೆ. ಈ ನಡುವೆ ಮೇಕಪ್ ರೂಮ್‌ನಲ್ಲಿ ತೆಗೆದ ಹಾಟ್ ಫೋಟೋವನ್ನ ಹಂಚಿಕೊಂಡಿರುವ ನಟಿ ಪಡ್ಡೆ ಹುಡುಗರ ಎದೆಗೆ ಕೊಳ್ಳಿ ಇಟ್ಟಿರೋದಂತೂ ನಿಜ. ಇದನ್ನೂ ಓದಿ: ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ ನಿಧನ- ಭಾವುಕ ಪೋಸ್ಟ್ ಹಂಚಿಕೊಂಡ ದಚ್ಚು
ಕೇವಲ ಮೂರು ಫೋಟೋ ಹಂಚಿಕೊಂಡು ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ನಟಿಯ ಮಾದಕ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅಲ್ಲದೇ ಕೆಲವು ಅಭಿಮಾನಿಗಳು ಮೇಡಂ ನೀವು ಗಾರ್ಜಿಯಸ್ ಅಂತ ಕಾಮೆಂಟ್ ಮಾಡಿದ್ರೆ, ಎದೆಯ ಮೇಲಿನ ಟ್ಯಾಟೂ ಮಸ್ತ್ ಆಗಿದೆ ಅಂತ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್
ಪ್ರೀತಿ, ಪ್ರಣಯ, ಸೇಡು ಮತ್ತು ಕೃತಕ ಬುದ್ಧಿಶಕ್ತಿಯ ಅಂಶಗಳನ್ನು ಒಳಗೊಂಡಿರುವ ಸೈನ್ಸ್ ಫಿಕ್ಷನ್ ಎಳೆ ಹೊಂದಿರುವ ‘ಕಿಲ್ಲರ್’ ಒಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ. ಜ್ಯೋತಿ ರೈ ಅವರಿಲ್ಲಿ ಲೇಡಿ ರೋಬೋ ಆಗಿಯೂ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ.
ಕನ್ನಡದ ‘ಜೋಗುಳ’, ‘ಕನ್ಯಾದಾನ’, ‘ಕಸ್ತೂರಿ ನಿವಾಸ’, ‘ಗೆಜ್ಜೆ ಪೂಜೆ’, ‘ಕನ್ಯಾದಾನ’, ‘ಕಸ್ತೂರಿ ನಿವಾಸ’, ‘ಕಿನ್ನರಿ’ ಮುಂತಾದ ಹಿಟ್ ಧಾರಾವಾಹಿಗಳಲ್ಲಿ ಜ್ಯೋತಿ ನಟಿಸಿದ್ದಾರೆ. ಈಚೆಗೆ ಅವರು ನಟಿಸಿದ್ದ ‘ನೈಟ್ ರೋಡ್’ ಕನ್ನಡ ಸಿನಿಮಾ ತೆರೆಕಂಡಿತ್ತು. ಇದೀಗ ಅವರು ಕಿಲ್ಲರ್ ಚಿತ್ರದಲ್ಲಿ ಲೇಡಿ ರೋಬೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್ ನ್ಯೂಸ್
View this post on Instagram
ನಿರ್ಮಾಪಕಿಯಾದ ಜ್ಯೋತಿ
ʻಕಿಲ್ಲರ್ʼ ಚಿತ್ರವನ್ನು ಪೂರ್ವಜ್ ಅವರೇ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ ಕೂಡ. ನಿರ್ಮಾಣವನ್ನು ಜ್ಯೋತಿ ಪೂರ್ವಜ್, ಪ್ರಜಾಯ್ ಕಾಮತ್, ಪದ್ಮನಾಭ ರೆಡ್ಡಿ ಮಾಡಿದ್ದಾರೆ. ತಾರಾಗಣದಲ್ಲಿ ಚಂದ್ರಕಾಂತ್ ಕೊಲ್ಲು, ವಿಶಾಲ್‌ರಾಜ್, ಅರ್ಚನಾ ಅನಂತ್, ಗೌತಮ್ ಚಕ್ರದಾರ್ ಕೊಪ್ಪಿಸೆಟ್ಟಿ ಮುಂತಾದವರು ನಟಿಸಿದ್ದಾರೆ. ಇದನ್ನೂ ಓದಿ: 47ನೇ ವಯಸ್ಸಲ್ಲಿ ಖ್ಯಾತ ನಟಿಯನ್ನು ಮದುವೆಯಾಗಲಿದ್ದಾರೆ ನಟ ವಿಶಾಲ್ – ಯಾರು ಗೊತ್ತಾ ಆ ಬೆಡಗಿ?