ಮೈಸೂರು: ಗುರುವಾರ ಸಂಜೆ ವೈದ್ಯ ದಂಪತಿಯ ಪುತ್ರನ ಅಪಹರಣ ಪ್ರಕರಣ ಈಗ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.
ಕುವೆಂಪು ನಗರದ ಬಿಇಎಂಎಲ್ ಲೇಔಟ್‍ನಲ್ಲಿ ವಾಸ ಇರುವ ವೈದ್ಯ ದಂಪತಿಯ 12 ವರ್ಷದ ಪುತ್ರನನ್ನು ಗುರುವಾರ ಸಂಜೆ 8 ಗಂಟೆ ವೇಳೆಗೆ ಅಪಹರಣ ಮಾಡಲಾಗಿತ್ತು. ಬಾಲಕ ಮನೆ ಮುಂದೆ ಸೈಕಲ್ ಓಡಿಸುತ್ತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತರು ಬಾಲಕನನ್ನು ಸೈಕಲ್‍ನಿಂದ ಬೀಳಿಸಿ ಕಾರಿನಲ್ಲಿ ಕರೆದೊಯ್ದಿದ್ದರು. ಈ ಅಪಹರಣದಿಂದ ಆ ಭಾಗದ ಜನ ಶಾಕ್‍ಗೆ ಒಳಗಾಗಿದ್ದರು. ಈ ಬಗ್ಗೆ ಪೋಷಕರು ಕುವೆಂಪು ನಗರ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ಅಪಹರಣಕಾರರ ಬಂಧನಕ್ಕೆ ಬಲೆ ಬೀಸಿದರು.
Advertisement
Advertisement
ಒಂದು ಕಡೆ ಪೊಲೀಸರು ಹುಡುಕಾಟ ನಡೆಸುವ ವೇಳೆಯೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಪಹರಣಕಾರರೇ ಆ ಬಾಲಕನನ್ನು ಮನೆಯ ಮುಂದೆ ತಂದು ಬಿಟ್ಟು ಹೋಗಿದ್ದಾರೆ. ಈ ಮೂಲಕ ಪೋಷಕರು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಅಪಹರಣಕಾರರು ಸುಖಾ ಸುಮ್ಮನೆ ಕಿಡ್ನಾಪ್ ಮಾಡಿ ಹಾಗೇ ಬಿಟ್ಟು ಹೋಗಿದ್ದಾರೆ ಎಂಬುದು ನಂಬಲು ಕಷ್ಟವಾಗುತ್ತಿದೆ.
Advertisement
Advertisement
ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪಹರಣಕ್ಕೆ ಒಳಗಾದ ಬಾಲಕ, ನನಗೆ ಕಿಡ್ನ್ಯಾಪ್ ಮಾಡಿದಾಗ ಮೊದಲಿಗೆ ಹೆದರಿಕೆಯಾಯಿತು. ತದ ನಂತರ ನನಗೆ ಹೆದರಿಕೆಯಾಗಲಿಲ್ಲ. ನಮ್ಮ ಬಗ್ಗೆ ನಿಮ್ಮ ಅಪ್ಪ ಅಮ್ಮನಿಗೆ ತಿಳಿಸಿದರೆ ಎತ್ತಾಕೊಂಡು ಹೋಗಿ ಮರ್ಡರ್ ಮಾಡುತ್ತೇವೆಂದು ಹೆದರಿಸಿದರು. ಅವರನ್ನು ನಾನು ಈ ಮೊದಲು ನೋಡಿಯೇ ಇಲ್ಲ. ಹಳದಿ ಬಣ್ಣದ ನಂಬರ್ ಪ್ಲೇಟ್ ಕಾರಿನಲ್ಲಿ ನನ್ನನ್ನ ಎತ್ತು ಹಾಕಿಕೊಂಡರು. ಕಾರಿನ ಎರಡು ನಂಬರ್ ಮಾತ್ರ ಕಾಣಿಸಿತ್ತು. ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!
ಕಾರಿನೊಳಗೆ ಶೂಟ್ ಮಾಡುವ ಸೈನ್ ಇತ್ತು. ಕಾರಿನ ಹಿಂಭಾಗ ಸೀಟ್‍ನಲ್ಲಿ ಕೂರಿಸಿದರು. ರಿಂಗ್ ರೋಡ್‍ನ ಸರ್ಕಲ್ ನಾಲ್ಕು ಸುತ್ತು ಹಾಕಿಸಿದರು. ಮೈಸೂರಿನ 20 ಕಿ.ಮೀ ಅಂತರದಲ್ಲೇ ಸುತ್ತಾಡಿಸುತ್ತಿದ್ದರು. ತಿನ್ನಲು ಬಿಸ್ಕಟ್, ನೀರು ಮತ್ತು ಚಾಕ್ ಲೇಟ್ ನೀಡಿದರು. ನಾನು ಬೇಡ ಅಂದೇ. ಕಾರಿನಲ್ಲಿ ಒಬ್ಬ ಕುಂಟ ಇದ್ದ. ಕಾರಿನಲ್ಲಿ ಡೀಸೆಲ್ ಖಾಲಿಯಾಗಿದೆ. ಮ್ಯಾಕ್ಸಿಮಮ್ 5 ಕಿ.ಮೀ ಹೋಗಬಹುದು ಎನ್ನುತ್ತಿದ್ದರು. ನಾನು ನಿದ್ದೆ ಕಣ್ಣಿನಲ್ಲಿರುವಾಗ ಯಾರೋ ವಿಂಡ್ ಶೀಲ್ಡ್‌ನಲ್ಲಿ ಮಾತನಾಡುತ್ತಿದ್ದರು. ನಂತರ ಮನೆ ಮುಂದೆ ತಂದು ಬಿಟ್ಟು ಹೋದರು ಎಂದು ವಿವರಿಸಿದ್ದಾನೆ.
ಅಪಹರಣಕ್ಕೆ ಬಳಸಿದ ಕಾರಿನಲ್ಲಿ ಡಿಸೇಲ್ ಕಡಿಮೆ ಇದ್ದ ಕಾರಣ ಇನ್ನೂ ಬಾಲಕನನ್ನು ಸುತ್ತಿಸಲು ಸಾಧ್ಯವಿಲ್ಲ ಎಂದು ಅಪಹರಣಕಾರರು ಬಾಲಕನನ್ನು ಮನೆಗೆ ಬಿಟ್ಟಿದ್ದಾರೆ ಎನ್ನುವುದು ಈ ವೀಡಿಯೋವಿನ ಅರ್ಥ. ಆದರೆ, ಇದನ್ನು ನಂಬಲು ಸಾಧ್ಯವಾ? ಡಿಸೇಲ್ ಫುಲ್ ಮಾಡಿಸಿಕೊಳ್ಳದೇ ಅಪಹರಣಕ್ಕೆ ಪ್ಲಾನ್ ಮಾಡುತ್ತಾರಾ? ಒಂದು ವೇಳೆ ಡೀಸೆಲ್ ಖಾಲಿಯಾಗಿದ್ದು ನಿಜವೇ ಆಗಿದ್ದರೆ ಆ ಬಾಲಕನನ್ನು ತಂದು ಮನೆಯ ಮುಂದೆ ಬಿಡುತ್ತಿದ್ರಾ? ಇಂತಹ ಅನುಮಾನಗಳು ಸಹಜವಾಗಿಯೆ ಹುಟ್ಟಿಕೊಂಡಿವೆ.