The Kerala Story ಬಂದ್ಮೇಲೆ ಇಸ್ಲಾಂಗೆ 32 ಸಾವಿರ ಮಹಿಳೆಯರ ಮತಾಂತರ – ಗಂಭೀರ ಆರೋಪ

Public TV
1 Min Read
The Kerala Story 5

ತಿರುವನಂತಪುರಂ: ಅದಾ ಶರ್ಮಾ (Adah Sharma) ಮುಖ್ಯಭೂಮಿಕೆಯ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ. ಭರ್ಜರಿ ಪ್ರದರ್ಶನವನ್ನೂ ಕಾಣುತ್ತಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದೆ. ಈಗಾಗಲೇ ಅನೇಕರಿಂದ ಆಕ್ಷೇಪಕ್ಕೆ ಒಳಗಾಗಿರುವ ಈ ಸಿನಿಮಾದ ಕುರಿತು ಮತ್ತೊಂದು ಪರಿಣಾಮಕಾರಿ ಅಂಶ ಬೆಳಕಿಗೆ ಬಂದಿದೆ.

The Kerala Story 4

ಕಳೆದ ವರ್ಷ ನವೆಂಬರ್‌ನಲ್ಲಿ ʻದಿ ಕೇರಳ ಸ್ಟೋರಿʼ ಟೀಸರ್‌ ಬಿಡುಗಡೆಯಾದ ನಂತರ ದೊಡ್ಡಮಟ್ಟದ ವಿವಾದ ಹುಟ್ಟುಹಾಕಿತ್ತು. ಟೀಸರ್‌ ಬಿಡುಗಡೆಯಾದ ನಂತರ ದಕ್ಷಿಣ ರಾಜ್ಯದಿಂದ 32 ಸಾವಿರ ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಜೊತೆಗೆ ಇಸ್ಲಾಮಿಕ್‌ ಸ್ಟೇಟ್ಸ್‌ನಿಂದ ಭಯೋತ್ಪಾದಕ ಸಂಘಟನೆಗಳಿಗೆ ಮಹಿಳೆಯರನ್ನ ನೇಮಕ ಮಾಡಿಕೊಳ್ಳಳಾಗಿದೆ ಎಂದು ಚಲನಚಿತ್ರ ನಿರ್ಮಾಪಕರೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ತಮಿಳು ನಾಡಿನಲ್ಲಿ ಪ್ರದರ್ಶನವಿಲ್ಲ

The Kerala Story

ಸಿನಿಮಾ ಬಿಡುಗಡೆಗೊಂಡ ನಂತರ ಈ ಚಿತ್ರವು ಕೇರಳದಲ್ಲಿ ಧಾರ್ಮಿಕ ಉಪದೇಶಗಳನ್ನ ಕೇಂದ್ರೀಕರಿಸಿದ್ದು, ಹಿಂದೂ ಮತ್ತು ಕ್ರಿಶ್ಚಿಯನ್‌ ಮಹಿಳೆಯರನ್ನ ತೀವ್ರಗಾಮಿಗೊಳಿಸಲು ಇಸ್ಲಾಂ ಧರ್ಮಗುರುಗಳು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯರನ್ನ ಇಸ್ಲಾಂಗೆ ಮತಾಂತರಿಸಿ ಅಫ್ಘಾನಿಸ್ತಾನ, ಯೆಮೆನ್ ಮತ್ತು ಸಿರಿಯಾದಂತಹ ದೇಶಗಳಿಗೆ ಕಳುಹಿಸಲಾಗಿದೆ ದೂರುಗಳು ಕೇಳಿಬರುತ್ತಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇಬ್ಬರ ತಲೆಗೆ ಒಟ್ಟು 11 ಲಕ್ಷ ಘೋಷಣೆಯಾಗಿದ್ದ ನಕ್ಸಲರ ಎನ್‍ಕೌಂಟರ್

The Kerala Story

ಈ ನಡುವೆ ʻದಿ ಕೇರಳ ಸ್ಟೋರಿʼ ಸಿನಿಮಾ ನೋಡುವಂತೆ ವಿಶ್ವ ಹಿಂದೂ ಪರಿಷತ್‌ (VHP) ಸದಸ್ಯ ಮಹಿಳೆಗೆ ಒತ್ತಾಯಿಸಿರುವ ಘಟನೆಯೊಂದ ರಾಜಸ್ಥಾನದಲ್ಲಿ ನಡೆದಿದ್ದು, ಇಲ್ಲಿನ ಮಂದಿರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆಯ ದೂರನ್ನು ಆಧರಿಸಿ ಮೂವರ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

The Kerala Story 1

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಚಲನಚಿತ್ರವನ್ನು ಹೊಗಳುವ ಮೂಲಕ ತಮ್ಮ ಸಮುದಾಯವನ್ನ ಅವಮಾನಿಸಿದ್ದಾರೆ ಎಂದು ಆರೋಪಿಸಿ ಮೂವರು ವ್ಯಕ್ತಿಗಳು ಆಕೆಗೆ ಕಿರುಕುಳ ನೀಡಿರುವುದಾಗಿ ಸಹಾಯಕ ಪೊಲೀಸ್‌ ಆಯುಕ್ತ ದೇರಾವರ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

Share This Article