ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಕಥೆಯೇ ಬೋಗಸ್ ಎಂದು ಹಲವರು ವಾದ ಮಾಡಿದ್ದರು. ಅವರು ಹೇಳಿದ ಪ್ರಮಾಣದಲ್ಲಿ ಮಹಿಳೆಯರು ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿಲ್ಲ ಎಂದು ಚರ್ಚೆ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಟೀಮ್ ಮಾಧ್ಯಮಗೋಷ್ಠಿ ನಡೆಸಿ, ಅಲ್ಲಿಗೆ ಸಂತ್ರಸ್ತರನ್ನು ಕರೆತಂದಿದ್ದರು. ಒಬ್ಬೊಬ್ಬರ ಕಥೆಯನ್ನು ಸಿನಿಮಾ ಟೀಮ್ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿತು.
Advertisement
ದಿ ಕೇರಳ ಸ್ಟೋರಿಯ ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿ ಒಟ್ಟು 32 ಸಾವಿರ ಯುವತಿಯರ ಮತಾಂತರ ಮಾಡಲಾಗಿದೆ ಎಂದು ಹೇಳಿತ್ತು. ಅಂಕಿ ಸಂಖ್ಯೆಯ ಕುರಿತು ವ್ಯಾಪಕ ಟೀಕೆ ಬಂದ ಬೆನ್ನಲ್ಲೇ ಸಂಖ್ಯೆಯ ವಿಚಾರವನ್ನು ಸಿನಿಮಾದಿಂದಲೇ ಕೈ ಬಿಡಲಾಯಿತು. ಆದರೆ, ಸಾಕಷ್ಟು ಸಂಖ್ಯೆಲ್ಲಿ ಮತಾಂತರ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಎರಡು ದಿನಗಳ ಹಿಂದೆ ನಡೆದ ಮಾಧ್ಯಮ ಗೋಷ್ಠಿಗೆ 26 ಯುವತಿಯರನ್ನು ಕರೆತಂದಿದ್ದರು ನಿರ್ದೇಶಕ ಸುದೀಪ್ತೋ ಸೇನ್. ಇದನ್ನೂ ಓದಿ:ಮಳೆ ಆರ್ಭಟಕ್ಕೆ ಮನೆಗೆ ನೀರು ನುಗ್ಗಿ ಜಗ್ಗೇಶ್ ಕಾರು ಮುಳುಗಡೆ
Advertisement
Advertisement
ಸಂತ್ರಸ್ತೆ (Victim) ಯುವತಿಯೊಬ್ಬಳು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ , ‘ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ (Adah Sharma) ಮಾಡಿದ ಪಾತ್ರಕ್ಕೂ ನನ್ನ ಜೀವನಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಅದಾ ಶರ್ಮಾ ಮಾಡಿದ ಪಾತ್ರ ನೂರಕ್ಕೂ ನೂರು ನನ್ನನ್ನೇ ಹೋಲುತ್ತದೆ. ಮನೆಯಲ್ಲಿ ಕೆಳಗೆ ಪೂಜೆ ನಡೆಯುತ್ತಿದ್ದರೆ, ಟೆರೇಸ್ ಮೇಲೆ ನಾನು ನಮಾಜ್ ಮಾಡುತ್ತಿದ್ದೆ. ಅಷ್ಟರ ಮಟ್ಟಿಗೆ ಪರಿವರ್ತನೆ ಮಾಡಿದ್ದರು’ ಎಂದು ಹೇಳಿಕೊಂಡರ.
Advertisement
ದಿ ಕೇರಳ ಸ್ಟೋರಿ ಸಾಕಷ್ಟು ಸದ್ದು ಮಾಡುತ್ತಿದೆ. ವಿವಾದ, ನಿಷೇಧದ ನಡುವೆಯೂ ಇಂದು ಅದು 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಶನಿವಾರಕ್ಕೆ 183 ಕೋಟಿ ರೂಪಾಯಿಗೂ ಅಧಿಕ ಬಾಕ್ಸ್ ಆಫೀಸ್ ಬಾಚಿದೆ. ಇನ್ನೂ ಸಾಕಷ್ಟು ಕಡೆ ತುಂಬಿದ ಪ್ರದರ್ಶನವನ್ನು ಚಿತ್ರ ಕಾಣುತ್ತಿದೆ.