ಬಾಲಿವುಡ್ ನಟಿ ಅದಾ ಶರ್ಮಾ (Adah Sharma) ಅವರು ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಸೂಪರ್ ಸಕ್ಸಸ್ ನಂತರ ಕೈ ತುಂಬಾ ಅವಕಾಶಗಳು ಅರಸಿ ಬರುತ್ತಿದೆ. ಈ ನಡುವೆ ಮದುಮಗಳಾಗಿ ನಟಿ ಮಿಂಚ್ತಿದ್ದಾರೆ. ಈ ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದಾ.? ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಅದಾ ಶರ್ಮಾ?
ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರೋ ಈ ಮುದ್ದು ಮುಖದ ಚೆಲುವೆ ಅದಾ, ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗಿ ನಟಿಸಿದ್ದ ಅದಾ ಶರ್ಮಾ ಇತ್ತೀಚಿಗೆ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಿ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ರು. ಮೀನಾಕ್ಷಿ ಎಂಬ ಪಾತ್ರದ ಮೂಲಕ ಮನೆ ಮಾತಾದರು. ಲವ್ ಜಿಹಾದ್ ಕುರಿತ ಈ ಕಥೆಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ರು. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು
‘ದಿ ಕೇರಳ ಸ್ಟೋರಿ’ ಸಕ್ಸಸ್ ನಂತರ ಬಂಪರ್ ಆಫರ್ಸ್‌ಗಳು ನಟಿ ಅದಾಗೆ ಅರಸಿ ಬರುತ್ತಿದೆ. ಈ ಚಿತ್ರದ ಯಶಸ್ಸಿನಿಂದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಹೀಗಿರುವಾಗ ವೈವಾಹಿಕ ಜೀವನಕ್ಕೆ ಅದಾ ಕಾಲಿಡುವ ತಾಲೀಮು ನಡೆಸುತ್ತಿದ್ದಾರೆ. ಹಸಿರು ಬಣ್ಣದ ಸೀರೆಯುಟ್ಟು ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಮದುಮಗಳಾಗಿ ಬೈಕ್ ಮೇಲೆ ಕುಳಿತು ಪೋಸ್ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಅಯ್ಯೋ.. ಅದಾ ಶರ್ಮಾ ಮದುವೆಯಾಗುತ್ತಿದ್ದಾರಾ.? ಅಂತಾ ಗಾಬರಿಯಾಗಬೇಡಿ. ಜಾಹಿರಾತು ಶೂಟ್‌ವೊಂದಕ್ಕಾಗಿ ನಟಿ ಅದಾ ಮದುಮಗಳ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಮದುಮಗಳ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆ್ಯಡ್ ಶೂಟ್‌ಗೆ ಎಂದು ತಿಳಿದ ಮೇಲೆ ಮೇಲ್ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]