ದಿ ಕೇರಳ ಸ್ಟೋರಿ (The Kerala Story) ಸಿನಿಮಾ ನೋಡಿದ ನಂತರ ಮಧ್ಯಪ್ರದೇಶದ (Madhya Pradesh) ಇಂದೋರ್ ನಗರದ ಯುವತಿಯೊಬ್ಬಳು ತನ್ನ ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಿಯತಮ ತನ್ನ ಮೇಲೆ ಅತ್ಯಾಚಾರ ಎಸಗಿ ಧರ್ಮ ಪರಿವರ್ತನೆಗೆ ಒತ್ತಡ ಹೇರಿದ್ದ ಎಂದು ಯುವತಿ ದೂರಿನಲ್ಲಿ (Complaint) ದಾಖಲಿಸಿದ್ದು, ಇದರನ್ವಯ ಪೊಲೀಸರು (Police) 23ರ ವಯಸ್ಸಿನ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮದುವೆ ಮಾಡಿಕೊಳ್ಳುವುದಾಗಿ ಹುಡುಗಿಯನ್ನು ನಂಬಿಸಿದ್ದ ವ್ಯಕ್ತಿಯು, ಹುಡುಗಿಯ ಜೊತೆಯಲ್ಲೇ ಸಹಜೀವನ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ. ಆನಂತರ ಧರ್ಮವನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದ ಎಂದು ಹುಡುಗಿ ಆರೋಪಿಸಿದ್ದಾಳೆ. ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಬಂದ ನಂತರ ಇಬ್ಬರ ಮಧ್ಯ ಜಗಳವೂ ಆಗಿತ್ತು ಎಂದು ಪೊಲೀಸರಿಗೆ ಹುಡುಗಿ ಮಾಹಿತಿ ನೀಡಿದ್ದಾಳೆ. ಇದನ್ನೂ ಓದಿ:‘ವಿಜಯ್ 69’ ಶೂಟಿಂಗ್ ವೇಳೆ ಬಾಲಿವುಡ್ ನಟ ಅನುಪಮ್ ಖೇರ್‌ಗೆ ಗಾಯ
ದಿ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿ ಬಂದ ನಂತರ ನಾವಿಬ್ಬರೂ ಜಗಳ ಮಾಡಿದೆವು. ಅವನು ನನಗೆ ಹೊಡೆದ. ಆನಂತರ ದೂರವಾದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಯುವತಿ. ಅಚ್ಚರಿಯ ಸಂಗತಿ ಅಂದರೆ, ಹುಡುಗ 12ನೇ ತರಗತಿವರೆಗೂ ಶಿಕ್ಷಣ ಪಡೆದಿದ್ದಾನೆ. ಹುಡುಗಿ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.