‘ಜೈಲರ್‌’ ಬಳಿಕ ಹೆಚ್ಚಿದ ಬೇಡಿಕೆ- ‘ದಿ ಕೇರಳ ಸ್ಟೋರಿ’ ಡೈರೆಕ್ಟರ್ ಜೊತೆ ಶಿವಣ್ಣ ಸಿನಿಮಾ?

Public TV
1 Min Read
shivarajkumar 2

‘ಜೈಲರ್’ (Jailer) ಕಿಂಗ್ ಶಿವಣ್ಣಗೆ ಭರ್ಜರಿ ಬೇಡಿಕೆ ಶುರುವಾಗಿದೆ. ಬಹುಭಾಷೆಗಳಿಂದ ಶಿವರಾಜ್‌ಕುಮಾರ್‌ಗೆ (Shivarajkumar) ಬುಲಾವ್ ಬರುತ್ತಿದೆ. ಕಾಲಿವುಡ್‌ನಲ್ಲಿ (Kollywood) ಶಿವಣ್ಣ ಮಿಂಚಿದ್ದಾಯ್ತು, ಈಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಇದೀಗ ಬೆಂಗಳೂರಿಗೆ ಆಗಮಿಸಿದ ಶಿವಣ್ಣರನ್ನು ‘ದಿ ಕೇರಳ ಸ್ಟೋರಿ’ (The Kerala Story) ನಿರ್ದೇಶಕ ಸುದಿಪ್ತೋ ಸೇನ್ ಭೇಟಿಯಾಗಿದ್ದಾರೆ.

the kerala story

‘ದಿ ಕೇರಳ ಸ್ಟೋರಿ’ ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆ ಬಂಗಾರದ ಬೆಳೆ ತೆಗೆಯಿತು. ಈ ಸಿನಿಮಾದ ಸಕ್ಸಸ್ ನಂತರ ಹೊಸ ಚಿತ್ರಕ್ಕೆ ತಯಾರಿ ನಡೆಸುತ್ತಿರುವ ನಿರ್ದೇಶಕ ಸುದಿಪ್ತೋ ಸೇನ್ ಈಗ ಶಿವರಾಜ್‌ಕುಮಾರ್‌ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಒಂದು ಪಾತ್ರ ಮಾಡುವಂತೆ ಶಿವಣ್ಣಗೆ ಕೇಳಿಕೊಂಡಿದ್ದಾರೆ. ಸದ್ಯ ಶಿವಣ್ಣ ಜೊತೆಗೆ ಸುದಿಪ್ತೋ ಸೇನ್ ಇರುವ ಫೋಟೋವೊಂದು ವೈರಲ್ ಆಗಿದೆ. ಇದನ್ನೂ ಓದಿ:ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಜೊತೆ ಕಾಲ ಕಳೆದ ಮಹೇಶ್‌ ಬಾಬು ಪುತ್ರ

shivarajkumar actor

ಸದ್ಯ ಕಥೆ ಬಗ್ಗೆ ಶಿವಣ್ಣ ಜತೆಗೆ ಸುದಿಪ್ತೋ ಸೇನ್ (Sudipto Sen) ಮೊದಲ ಹಂತದ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಶಿವಣ್ಣ ಕೂಡ ಪಾಸಿಟಿವ್ ಆಗಿಯೇ ರೆಸ್ಪಾನ್ಸ್ ಮಾಡಿದ್ದಾರಂತೆ. ಆದರೆ ಇನ್ನೂ ಯಾವುದೂ ಅಧಿಕೃತಗೊಂಡಿಲ್ಲ. ಕಮರ್ಷಿಯಲ್ ಅಂಶಗಳು, ಡೇಟ್ಸ್ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಾಜೆಕ್ಟ್ ಬಗ್ಗೆ ಶಿವಣ್ಣ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ ಬಾಲಿವುಡ್ ಅಂಗಳದಲ್ಲಿ ಶಿವಣ್ಣ ಮಿಂಚೋದು ಪಕ್ಕಾ.

ಜೈಲರ್ (Jailer) ಸಿನಿಮಾದಲ್ಲಿ ಮಂಡ್ಯ ಮೂಲದ ಗ್ಯಾಂಗ್ ಸ್ಟಾರ್ ಆಗಿ ನಟಿಸಿದ್ದರು. ನಾಯಕನ ಮಗನ ಹುಡುಕಾಟಕ್ಕೆ ಸಾಥ್ ನೀಡೋ ಪಾತ್ರದಲ್ಲಿ ಶಿವಣ್ಣ ಜೀವತುಂಬಿದ್ದರು. ಈ ಬೆನ್ನಲ್ಲೇ ಮತ್ತಷ್ಟು ಸೌತ್ ಸಿನಿಮಾಗಳ ಆಫರ್ ಶಿವಣ್ಣಗೆ ಸಿಗುತ್ತಿದೆ.

Share This Article