ಕನ್ನಡದ ‘ರಣವಿಕ್ರಮ’ (Ranavikrama) ಬ್ಯೂಟಿ ಅದಾ ಶರ್ಮಾ (Adah Sharma) ಅವರು ಇತ್ತೀಚಿಗೆ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದರು. ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದ ನಟಿ ಈಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಅಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ. ಈ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದ ಬೆಡಗಿ ಅದಾಗೆ ಅನಾರೋಗ್ಯ ಕಾಡ್ತಿದೆ. ಫುಡ್ ಅಲರ್ಜಿಯಿಂದ ಆರೋಗ್ಯ ವ್ಯತ್ಯಾಸವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ವೈದ್ಯರು ಈಗ ಆಕೆಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಜೊತೆಗಿನ ಮದುವೆ ಬಗ್ಗೆ ತರುಣ್ ಸ್ಪಷ್ಟನೆ
- Advertisement
- Advertisement
ಅದಾ ಶರ್ಮಾ ನಟನೆಯ ಮುಂಬರುವ ಸಿನಿಮಾ ‘ಕಮಾಂಡೋ’ ಪ್ರಚಾರಕ್ಕಾಗಿ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಭಾವನಾ ರೆಡ್ಡಿ ಎಂಬ ಖಡಕ್ ಪೊಲೀಸ್ ಆಧಿಕಾರಿಯಾಗಿ ಅದಾ ಜೀವ ತುಂಬಿದ್ದರು. ಇನ್ನೇನು ಪ್ರಚಾರ ಕಾರ್ಯ ಶುರು ಮಾಡಬೇಕು. ಈ ಸಂದರ್ಭದಲ್ಲಿ ಅದಾ ಆರೋಗ್ಯ ಕೈಕೊಟ್ಟಿದೆ. ಹಾಗಾಗಿ ಚಿತ್ರದ ಪ್ರಚಾರ ಕಾರ್ಯವನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ. ಆತಂಕದಲ್ಲಿದ್ದ ಅದಾ ಅಭಿಮಾನಿಗಳು, ಆಕೆಯ ಸದ್ಯ ಹೆಲ್ಡ್ ಅಪ್‌ಡೇಟ್ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.
ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ (Puneeth Rajkumar) ನಾಯಕಿಯಾಗಿ ಅದಾ ಶರ್ಮಾ ನಟಿಸಿದ್ದರು. ಈ ಚಿತ್ರ ಫ್ಯಾನ್ಸ್‌ಗೆ ಮನರಂಜನೆ ನೀಡಿತ್ತು. ದಿ ಕೇರಳ ಸ್ಟೋರಿ ಬಿಗ್ ಬ್ರೇಕ್ ನಂತರ ಒಳ್ಳೆಯ ಕಥೆಗಳು ನಟಿಗೆ ಅರಸಿ ಬರುತ್ತಿದೆ.