ಶ್ರೀನಗರ: ಕಾಶ್ಮೀರದಲಿನ ಈಗಿನ ಪರಿಸ್ಥಿತಿ 1990ರ ದಿನಗಳಿಗಿಂತಲೂ ಅಪಾಯಕಾರಿಯಾಗಿದೆ. ಜನಸಾಮಾನ್ಯರ ಪಾಡು ಘನಘೋರವಾಗಿದೆ. ಮತ್ತೆ ಹಿಂದೂಗಳನ್ನು ಹುಡುಕಿ, ಹುಡುಕಿ ಕೊಲ್ಲಲಾಗುತ್ತಿದೆ. ಸರಣಿ ಹತ್ಯೆಗಳಿಗೆ ಭಯಬಿದ್ದು ಈಗ ಮತ್ತೆ ಅನೇಕ ಕುಟುಂಬಗಳು ಕಣಿವೆನಾಡಿನಿಂದ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಕಳೆದ ಮೂರು ದಿನಗಳಲ್ಲಿ ಮೂವರು ಹಿಂದೂಗಳ ಕೊಲೆಯಾಗಿದೆ. ಬುದ್ಗಾಂನಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಗುಂಡಿಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಕುಲ್ಗಾಂ ಜಿಲ್ಲೆಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರ ಮೇಲೆ ಗುಂಡು ಹಾರಿಸಲಾಗಿದೆ. ಓರ್ವ ಸಾವನ್ನಪ್ಪಿದ್ರೆ, ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಸರಣಿ ಹತ್ಯೆಗಳನ್ನು ಖಂಡಿಸಿ ಜಾತಿ ಧರ್ಮ ಮರೆತು ಕಣಿವೆ ನಾಡಿನ ಮಂದಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ 6 ವರ್ಷ ಕಳೆದ್ರೂ ಫಸ್ಟ್ ನೈಟ್ ಆಗಿಲ್ಲ – ಪತಿಯ ಮನೆ ತೊರೆಯುವಂತೆ ಪತ್ನಿಗೆ ಕೋರ್ಟ್ ಆರ್ಡರ್
Advertisement
Advertisement
1990ರ ಜನವರಿ-ಮಾರ್ಚ್ ತಿಂಗಳಲ್ಲಿ ಕಾಶ್ಮೀರಿ ಪಂಡಿತರು, ಅಲ್ಪಸಂಖ್ಯಾತರ ಮೇಲೆ ದಾಳಿನಡೆಸಿ 32 ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಮತ್ತೆ ಅಂತಹದ್ದೆ ಪರಿಸ್ಥಿತಿ ನಿರ್ಮಾಣವಾದಂತೆ ಭಾಸವಾಗುತ್ತಿದೆ ಇದಕ್ಕೆ ಕಾರಣ 2022ರ ಮೊದಲ ಐದು ತಿಂಗಳಲ್ಲಿ ಒಟ್ಟು 16 ಮಂದಿಯ ಹತ್ಯೆ ನಡೆದಿರುವುದು. ಕಾಶ್ಮೀರಿ ಪಂಡಿತರು, ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿರುವ ಕಿಡಿಗೇಡಿಗಳು ಕಳೆದ ಮೂರು ದಿನಗಳಲ್ಲಿ ಮೂವರು ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ. ಕಳೆದ 22 ದಿನಗಳಲ್ಲಿ 9 ಜನರ ಕೊಲೆ ನಡೆದಿದ್ದು, ಜನವರಿಯಿಂದ ಈವರೆಗೂ 16 ಮಂದಿಯ ಹತ್ಯೆ ನಡೆದಿರುವುದು ಆತಂಕ ಮೂಡಿಸಿದೆ. ಇದರಿಂದಾಗಿ ಕೇವಲ 2 ದಿನಗಳಲ್ಲಿ 150ಕ್ಕೂ ಹೆಚ್ಚು ಕುಟುಂಬ ವಲಸೆ ಆರಂಭಿಸಿದೆ, ಈವರೆಗೂ 1,800ಕ್ಕೂ ಹೆಚ್ಚು ಹಿಂದೂಗಳ ಮಹಾವಲಸೆಯತ್ತ ಮುಖಮಾಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ