ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತೀಯ ಬಹುತೇಕ ಭಾಷೆಗಳಲ್ಲಿ ಬಿಡುಗಡೆಯಾಗಿ ಕೋಟಿ ಕೋಟಿ ಜನರನ್ನು ತಲುಪಿದೆ. ಇದೇ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ಸೈನ್ ಲಾಂಗ್ವೇಜ್ ನಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಕಿವಿ ಕೇಳದವರಿಗೆ ಮತ್ತು ಮಾತು ಬಾರದವರಿಗಾಗಿ ಈ ಪ್ರಯೋಗವನ್ನು ಮಾಡಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಹಾಗಾಗಿ ಈ ಸಿನಿಮಾ ಎಲ್ಲರಿಗೂ ತಲುಪಿದಂತಾಗಿದೆ ಎಂದಿದ್ದಾರೆ ನಿರ್ದೇಶಕರು.
Advertisement
ದಿ ಕಾಶ್ಮೀರ ಫೈಲ್ಸ್ ಮೊದಲು ಹಿಂದಿಯಲ್ಲಿ ಬಿಡುಗಡೆ ಆಗಿತ್ತು. ನಾನಾ ರಾಜ್ಯಗಳಲ್ಲಿ ರಿಲೀಸ್ ಆಗಿ ಯಶಸ್ಸು ಗಳಿಸಿತ್ತು. ಬಾಕ್ಸ್ ಆಫೀಸಿನಲ್ಲಿ ಭರ್ಜರಿಗೆ ಗೆಲುವು ಸಾಧಿಸಿತ್ತು. ಅನೇಕ ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯತಿ ಘೋಷಣೆ ಮಾಡುವ ಮೂಲಕ ಎಲ್ಲರಿಗೂ ತಲುಪುವಂತೆ ಆಯಾ ರಾಜ್ಯ ಸರಕಾರಗಳು ಕ್ರಮ ತಗೆದುಕೊಂಡಿದ್ದವು. ಇದೀಗ ವಿಶೇಷ ಚೇತನರಿಗೂ ಈ ಸಿನಿಮಾ ತಲುಪಿಸುವ ಕೆಲಸ ಆಗಿದೆ. ಇದನ್ನೂ ಓದಿ:ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?
Advertisement
Advertisement
ಕಾಶ್ಮೀರದಲ್ಲಿ ಪಂಡಿತರ ಮೇಲಿನ ನರಮೇಧದ ಕುರಿತಾಗಿ ಈ ಸಿನಿಮಾ ಮಾಡಿದ್ದು, ಪಂಡಿತರ ಮೇಲಿನ ಹತ್ಯೆಯನ್ನು ಎಳೆಎಳೆಯಾಗಿ ಈ ಸಿನಿಮಾ ಬಿಚ್ಚಿಟ್ಟಿತ್ತು. ಹಾಗಾಗಿ ಕೆಲ ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ಅಡೆತಡೆಗಳು ಎದುರಾದವು. ಇದೆಲ್ಲವನ್ನೂ ಎದುರಿಸಿಕೊಂಡೇ ಸಿನಿಮಾ ಗೆದ್ದಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.