ದಿ ಕಾಶ್ಮೀರ್ ಫೈಲ್ಸ್: ಪ್ರತಿಭಟನೆ ಬಿಸಿ

Public TV
1 Min Read
the kashmir files 4

ತ್ತರ ಕನ್ನಡ ಜಿಲ್ಲೆ ಭಟ್ಕಳ್ ನಗರದಲ್ಲಿ ಭಾನುವಾರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರದರ್ಶನ ಮಾಡಲಿಲ್ಲ ಎನ್ನುವ ಕಾರಣಕ್ಕಾಗಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಪುಷ್ಪಾಂಜಲಿ ಥಿಯೇಟರ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬದಲು ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಅದನ್ನು ತಗೆದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶಿಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.

The Kashmir Files

ಮಧ್ಯಾಹ್ನ 2.30ಕ್ಕೆ ನಡೆಯಬೇಕಿದ್ದ ರಾಧೆ ಶ್ಯಾಮ್ ಸಿನಿಮಾ ಸ್ಥಗಿತಗೊಳಿಸಿ, ಆ ವೇಳೆಯಲ್ಲಿ  ದಿ ಕಾಶ್ಮೀರ್ ಫೈಲ್ಸ್ ಪ್ರದರ್ಶಿಸಬೇಕೆಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದವು. ಕೆಲ ಗಂಟೆಗಳ ಕಾಲ ಥಿಯೇಟರ್ ಮೇಲ್ವಿಚಾರಕರಿಗೂ ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ರಾತ್ರಿ 8.45ಕ್ಕೆ ಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಮೇಲ್ವಿಚಾರಕರು ಘೋಷಿಸಿದರು. ಆನಂತರವೇ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

the kashmir files 2

ದೇಶಾದ್ಯಂತ ಈ ಸಿನಿಮಾದ ಬಗ್ಗೆ ಚರ್ಚೆ ಆಗುತ್ತಿದೆ. ಹಲವು ಕಡೆ ವಿಶೇಷ ಪ್ರದರ್ಶನಗಳನ್ನೂ ಏರ್ಪಡಿಸಲಾಗಿದೆ. ಅಲ್ಲದೇ, ಭಾನುವಾರದಿಂದ ಬಿಡುಗಡೆಯಾದ ಥಿಯೇಟರ್ ಸಂಖ್ಯೆಯೂ ಹೆಚ್ಚಾಗಿದೆ.

Share This Article
Leave a Comment

Leave a Reply

Your email address will not be published. Required fields are marked *