ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಕೇಂದ್ರ ಸರಕಾರ ‘ವೈ’ ಶ್ರೇಣಿಯ ಭದ್ರತೆಯನ್ನು ನೀಡಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದ ನಂತರ ಅವರ ಜೀವಕ್ಕೆ ಅಪಾಯವಿದೆ ಎನ್ನುವ ಕಾರಣಕ್ಕಾಗಿ ಈ ಭದ್ರತೆಯನ್ನು ನೀಡಲಾಗಿದ್ದು, ವಿವೇಕ್ ಎಲ್ಲಿಗೆ ಹೋದರೂ ಹಿಂದೆಯೇ ಭದ್ರತಾ ಸಿಬ್ಬಂದಿ ಹೋಗುತ್ತದೆ. ಇಂಥದ್ದೊಂದು ವಿಡಿಯೋವನ್ನು ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ವಿವೇಕ್ ಅಗ್ನಿಹೋತ್ರಿ ಮನೆಯಿಂದ ಆಚೆ ಕಾಲಿಟ್ಟರೆ, ಅವರು ಎಲ್ಲಿಗೆ ಹೋದರೂ, ಹಿಂದೆಯೇ ಭದ್ರತಾ ಸಿಬ್ಬಂದಿ ಹೋಗಲೇಬೇಕು. ಹಾಗಾಗಿ ವಿವೇಕ್ ವಾಕಿಂಗ್ ಮಾಡುವಾಗಲೂ ಅವರು ಜೊತೆಯಲ್ಲೇ ಇದ್ದಾರೆ. ಆ ವಿಡಿಯೋವನ್ನು ವಿವೇಕ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಇವರಿಗೆ ‘ವೈ’ ಭದ್ರತೆ ಕೊಡುವುದಕ್ಕೆ ಅಂತಹ ಘನಂದಾರಿ ಕೆಲಸವನ್ನು ಏನು ಮಾಡಿದ್ದಾರೆ ಎಂದು ಕೇಳಿದ್ದಾರೆ.
Advertisement
Advertisement
ಇನ್ನೂ ಕೆಲವರು ನಮ್ಮ ತೆರಿಗೆ ಹಣ ಎಲ್ಲಿ ಖಾಲಿ ಆಗುತ್ತಿದೆ ಅಂತ ಕಣ್ತುಂಬಿಕೊಳ್ಳಿ. ಜನರ ತೆರಿಗೆ ಹಣದಲ್ಲಿ ಇಂಥವರು ಭದ್ರತೆ ಇಟ್ಟುಕೊಂಡು ಶೋಕಿ ಮಾಡುತ್ತಾರೆ ಎಂದು ಕಾಲೆಳೆದಿದ್ದಾರೆ. ಈ ಕುರಿತು ವಿವೇಕ್ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ, ಭದ್ರತೆಯೊಂದಿಗೆ ವಾಕ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ನಂತರ ವಿವೇಕ್ ಅಗ್ನಿಹೋತ್ರಿ ಕುರಿತಾಗಿ ಅನೇಕರು ಪರ ಮತ್ತು ವಿರೋಧದ ಮಾತುಗಳನ್ನು ಆಡಿದ್ದರು. ಇನ್ನೂ ಈ ಸಿನಿಮಾ ಬಗ್ಗೆ ಚರ್ಚೆ ಆಗುತ್ತಲೇ . ಕೆಲವರು ಸೋಷಿಯಲ್ ಮೀಡಿಯಾ ಮೂಲಕ ವಿವೇಕ್ ಅವರಿಗೆ ಬೆದರಿಕೆಯನ್ನೂ ಹಾಕಿದ್ದರು. ಈ ಎಲ್ಲವನ್ನೂ ಪರಿಗಣಿಸಿ ಕೇಂದ್ರ ಸರಕಾರ ಅವರಿಗೆ ವೈ ಶ್ರೇಣಿಯ ಭದ್ರತೆಯನ್ನು ನೀಡಿದೆ.