ಜೈಪುರ: ನೈಜ ಘಟನೆ ಆಧಾರಿತ ದಿ ಕಾಶ್ಮೀರ್ ಫೈಲ್ಸ್ ಸ್ಕ್ರೀನಿಂಗ್ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ರಾಜಸ್ಥಾನದ ಕೋಟಾ ನಗರದಲ್ಲಿ ಕ್ರಿಮಿನಲ್ ಪ್ರೋಸಿಜರ್ ಕೋಡ್‍ನಡಿಯಲ್ಲಿ ಸೆಕ್ಷನ್ 144ಅನ್ನು ಜಾರಿಗೊಳಿಸಲಾಗಿದೆ.
ಇಂದಿನಿಂದ (ಮಾ.22) ಏಪ್ರಿಲ್ 21ರವರೆಗೆ ನಗರದಲ್ಲಿ 144 ಸೆಕ್ಷನ್ ಮುಂದುವರಿಯುತ್ತದೆ ಎಂದು ಕೋಟಾ ಜಿಲ್ಲಾ ಅಧಿಕಾರಿ ಸುತ್ತಲೆಯನ್ನು ಹೊರಡಿಸಿದ್ದಾರೆ. ಆದೇಶದ ಪ್ರಕಾರ ಸಿನಿಮಾವನ್ನು ವೀಕ್ಷಿಸಲು ಯಾವುದೇ ಗುಂಪು ಸೇರುವಂತಿಲ್ಲ.
Advertisement
Rajasthan | Section 144 will be imposed in Kota from tomorrow, March 22, till April 21, in view of maintaining law & order with the screening of ‘The Kashmir Files’: Kota District Collector & District Magistrate pic.twitter.com/iSJXC1ud8B
— ANI (@ANI) March 21, 2022
ಪ್ರತಿಭಟನೆ ಹಾಗೂ ಗಲಭೆಯನ್ನು ತಡೆದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮುನ್ನೆಚ್ಚರಿಕೆಯಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸೆಕ್ಷನ್ 144 ಅನ್ನು ಉಲ್ಲಂಘಿಸಿದರೆ ಗರಿಷ್ಠ ಮೂರು ವರ್ಷಗಳ ಕಾಲ ಶಿಕ್ಷೆಯಾಗುತ್ತದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
Advertisement
Advertisement
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ನೈಜಘಟನೆ ಆಧಾರಿತ ಸಿನೆಮಾ ದಿ ಕಾಶ್ಮೀರ್ ಫೈಲ್ಸ್ ವಿವಾದವನ್ನು ಉಂಟು ಮಾಡಿದೆ. 1990ರಲ್ಲಿ ಕಾಶ್ಮೀರದಲ್ಲಿ ಪಂಡಿತರು ಅನುಭವಿಸುವ ತೊಂದರೆ, ದೌರ್ಜನ್ಯದ ಕುರಿತು ಈ ಚಿತ್ರವನ್ನು ಕೇಂದ್ರಿಕರಿಸಲಾಗಿದೆ. ಈ ಸಿನೆಮಾಕ್ಕೆ ಬಿಜೆಪಿ ಸರ್ಕಾರವು ಹಲವು ರಾಜ್ಯಗಳಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದೆ. ಇದನ್ನೂ ಓದಿ: ಜಸ್ಟ್ ಮಿಸ್ – ಬಿಟ್ಟಾ ಕರಾಟೆಯಿಂದ ಪಾರಾಗಿ ಇಂದಿಗೂ ಜೀವಂತವಿದ್ದಾರೆ ವ್ಯಕ್ತಿ