– ಇದೊಂದು ನೈಸರ್ಗಿಕ ಪ್ರಕ್ರಿಯೆ ಎಂದ ಸಚಿವೆ ಹೆಬ್ಬಾಳ್ಕರ್
ಬಳ್ಳಾರಿ: ಇಲ್ಲಿನ ಬಾಣಂತಿಯರ ಸರಣಿ ಸಾವು ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಆದರೆ, ಸಾವಿಗೆ ಜವಾಬ್ದಾರಿ ಹೊತ್ತು ವ್ಯವಸ್ಥೆ ಸರಿಪಡಿಸಬೇಕಾದವರೇ ಈಗ ನುಣುಚಿಕೊಳ್ಳುವಂತೆ ಕಾಣ್ತಿದೆ. ಈ ವಿಚಾರವಾಗಿ ಪರಸ್ಪರ ರಾಜಕೀಯ ಕೆಸರೆರಚಾಟ ಶುರುವಾಗಿದೆ.
ಬಳ್ಳಾರಿ ಬಾಣಂತಿಯರ ಸರಣಿ ಸಾವಿಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸುವ ಕೆಲಸವನ್ನು ಸರ್ಕಾರ ಎರಡು ವಾರ ಕಳೆದ್ರೂ ಮಾಡಿಲ್ಲ. ಇಷ್ಟರಲ್ಲಿ ವರದಿ ಬರಬೇಕಿತ್ತು. ಆದ್ರೆ, ಇನ್ನೂ ಬಂದಿಲ್ಲ. ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣದ ಸರ್ಕಾರ, ಕಳೆದ ಆರು ವರ್ಷದಲ್ಲಿ ರಾಜ್ಯದಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಲೆಕ್ಕ ನೀಡಿದೆ. ಇದನ್ನೂ ಓದಿ: Tumakuru | ವರ್ಕ್ ಫ್ರಮ್ ಹೋಂ ಆಮಿಷವೊಡ್ಡಿ ಮಹಿಳೆಗೆ 14.15 ಲಕ್ಷ ವಂಚನೆ
Advertisement
Advertisement
ಯಾವ್ಯಾವ ವರ್ಷ ಎಷ್ಟೆಷ್ಟು ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂಬ ಲೆಕ್ಕವನ್ನು ಸಿಎಂ ಕಚೇರಿ ಕೊಟ್ಟಿದೆ. ಈ ಮೂಲಕ, ನಮ್ಮ ಅವಧಿಯಲ್ಲೇ ಕಡಿಮೆ ಸಾವು ಎಂದು ಬೆನ್ನು ತಟ್ಟಿಕೊಳ್ಳಲು ನೋಡಿದೆ. ಹಿಂದೆಯೂ ಸಾವಾಗಿದೆ… ಈಗಲೂ ಸಾವಾಗಿದೆ ಅಂತಾ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದೊಂದು ನೈಸರ್ಗಿಕ ಪ್ರಕ್ರಿಯೆ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿಕೊಂಡಿದ್ದಾರೆ. ಆದರೆ, ಈ ಸಾವುಗಳಿಗೆ ಹೊಣೆ ಯಾರು? ಸರ್ಕಾರನಾ? ಅಧಿಕಾರಿಗಳಾ? ಎಂಬ ಬಗ್ಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ. ಅಂದ ಹಾಗೇ, ರಾಜ್ಯದ ಪ್ರಮುಖ ಹೆರಿಗೆ ಆಸ್ಪತ್ರೆ ವಾಣಿವಿಲಾಸ ಮತ್ತು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳ ಲೆಕ್ಕ ಆತಂಕ ಮೂಡಿಸುವಂತಿದೆ.
Advertisement
ರಾಜ್ಯದಲ್ಲಿ ಬಾಣಂತಿಯರ ಸಾವಿನ ಲೆಕ್ಕ
* 2019-20 – 662
* 2020-21- 714
* 2021-22- 595
* 2022-23- 527
* 2023-24- 518
* 2024-25- 348
* 6 ವರ್ಷಗಳಲ್ಲಿ 3364 ಸಾವು
Advertisement
ಬಾಣಂತಿಯರ ಸಾವಿನ ಲೆಕ್ಕ
* ವಾಣಿ ವಿಲಾಸ – 403 ಹಸುಗೂಸು (11 ತಿಂಗಳಲ್ಲಿ)
* ವಾಣಿ ವಿಲಾಸ – 60 ಬಾಣಂತಿಯರು (11 ತಿಂಗಳಲ್ಲಿ)
* ಬೆಳಗಾವಿ ಜಿಲ್ಲೆ – 322 ಹಸುಗೂಸು (ಆರು ತಿಂಗಳಲ್ಲಿ)
* ಬೆಳಗಾವಿ ಜಿಲ್ಲೆ – 29 ಬಾಣಂತಿಯರು (ಆರು ತಿಂಗಳಲ್ಲಿ)
* ಬೆಳಗಾವಿ ಬಿಮ್ಸ್ – 172 ಹಸುಗೂಸು (ಆರು ತಿಂಗಳಲ್ಲಿ)
* ಬೆಳಗಾವಿ ಬಿಮ್ಸ್ – 6 ಬಾಣಂತಿಯರು (ಆರು ತಿಂಗಳಲ್ಲಿ)
ಬೆಳಗಾವಿ ಜಿಲ್ಲೆಯಲ್ಲಿ ಬಾಣಂತಿಯರು, ಶಿಶುಗಳ ಸಾವುಗಳ ಪ್ರಕರಣ ಸಂಬಂಧ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನೇತೃತ್ವದ ನಿಯೋಗ ಬಿಮ್ಸ್‌ಗೆ ಭೇಟಿ ನೀಡಿ ಪರಿಶೀಲಿಸಿತು, ವೈದ್ಯರಿಂದ ಮಾಹಿತಿ ಪಡೆಯಿತು. ಬಳಿಕ ಮಾತಾಡಿದ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ನಾವೇನು ರಾಜಕಾರಣ ಮಾಡ್ತಿಲ್ಲ, ಇನ್ನಾದ್ರೂ ಸಚಿವರು ಎಚ್ಚೆತ್ತುಕೊಳ್ಳಬೇಕು ಅಂದ್ರು. ನಿರ್ಲಕ್ಷ್ಯದಿಂದ ಈ ಸಾವುಗಳಾಗಿದ್ರೆ ಇದು ಸರ್ಕಾರಿ ಪ್ರಾಯೋಜಿತ ಸಾವು ಆಗುತ್ತದೆ ಎಂದು ಸಿ.ಟಿ ರವಿ ಎಚ್ಚರಿಕೆ ನೀಡಿದ್ರು. ಆದ್ರೆ, ರಾಜ್ಯದಲ್ಲಿ ಯಾರೂ ಸಾಯದೇ ಇರಲ್ಲ, ಯಾವುದೇ ಅಂಕಿ ಅಂಶಗಳನ್ನು ಹೇಳಿ ರಾಜಕೀಯ ಮಾಡೋದು ಬೇಡ ಎಂದು ಆರೋಗ್ಯ ಸಚಿವರು ಹೇಳಿದ್ರು. 2021ರಲ್ಲಿ 300 ಸಾವಾಗಿತ್ತು.
ಅದನ್ನು ಬಿಜೆಪಿ ಸರ್ಕಾರದ ವೈಫಲ್ಯ ಅಂತಾ ಹೇಳೋಕೆ ಆಗುತ್ತಾ ಅಂತಾ ಸಚಿವೆ ಹೆಬ್ಬಾಳ್ಕರ್ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!