ಕಾಂತಾರ ಸಿನಿಮಾ ಈವರೆಗೂ ಅಂದಾಜು 350 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕವೊಂದರಲ್ಲಿ ಅದು 150 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ. ಇನ್ನೇನು ಸದ್ಯದಲ್ಲೇ ಬಾಲಿವುಡ್ ನಲ್ಲೂ 100 ಕೋಟಿ ಕ್ಲಬ್ ಸೇರಲಿದೆ ಎನ್ನುತ್ತಿವೆ ಮಾಹಿತಿಗಳು. ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗಿನ ನಂತರ ಮಲಯಾಳಂನಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಗಳಿಕೆ ಮಾಡಿದೆ. ಈವರೆಗೂ ಕೆಜಿಎಫ್ 1 ಸಿನಿಮಾ ಮಾಡಿದ ಗಳಿಕೆಗಿಂತಲೂ ಕಾಂತರ ಕಲೆಕ್ಷನ್ ಹೆಚ್ಚು ಎನ್ನುವುದು ಅಲ್ಲಿನ ಮಾಹಿತಿ.
Advertisement
ಮಲಯಾಳಂನಲ್ಲಿ ಈ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ವಿತರಣೆ ಮಾಡಿದ್ದು, ಅಂದಾಜು 20 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕಾಂತಾರ ಸಿನಿಮಾದ ಒಟ್ಟು ಬಜೆಟ್ ಕೇರಳವೊಂದರಲ್ಲೇ ವಾಪಸ್ಸಾಗಿ, ಮೂರ್ನಾಲ್ಕು ಕೋಟಿ ರೂಪಾಯಿ ಲಾಭ ತಂದಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇನ್ನೂ ಈ ಸಿನಿಮಾ ತುಂಬಿದ ಗೃಹದಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಮತ್ತಷ್ಟು ದುಡ್ಡು ಹರಿದು ಬರಲಿದೆ. ಇದನ್ನೂ ಓದಿ:ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್
Advertisement
Advertisement
ತೆಲುಗಿನಲ್ಲೂ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಅಲ್ಲಿಯೂ 40 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆಯಂತೆ. ಅಲ್ಲು ಅರ್ಜುನ್ ತಂದೆ ಈ ಸಿನಿಮಾವನ್ನು ತೆಲುಗಿನಲ್ಲಿ ವಿತರಿಸಿದ್ದು, ಭಾರೀ ಲಾಭವನ್ನೇ ಮಾಡಿಕೊಂಡಿದ್ದಾರಂತೆ. ಹಾಗಾಗಿಯೇ ರಿಷಬ್ ಶೆಟ್ಟಿಗೆ ಅವರು ಓಪನ್ನಾಗಿಯೇ ಆಹ್ವಾನ ನೀಡಿದ್ದು, ಮುಂದಿನ ತಮ್ಮ ಬ್ಯಾನರ್ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದಾರಂತೆ.
Advertisement
ಕನ್ನಡ ಸಿನಿಮಾವೊಂದರು ದೇಶದ ಬಹುತೇಕ ಭಾಷೆಗಳಲ್ಲಿ ಯಶಸ್ಸು ಕಂಡಿದ್ದು ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಚೆನ್ನಾಗಿಯೇ ದುಡ್ಡು ಮಾಡಿತ್ತು. ನಂತರದ ಸ್ಥಾನ ಕಾಂತಾರ ಚಿತ್ರಕ್ಕೆ ಸಿಕ್ಕಿದೆ. ಅಲ್ಲದೇ, ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದೆ.