ಮಂಡ್ಯ: ಗ್ರಾಮದ ಅಭಿವೃದ್ಧಿ ಮಾಡಿಕೊಡಿ ಎಂದು ಮನವಿ ಮಾಡಿಕೊಂಡ ಮಹಿಳೆಯ ಮುಂದೆ ಜೆಡಿಎಸ್ ಶಾಸಕ (JDS MLA) ಬೇಸರಗೊಂಡು ತಮ್ಮ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಕೆ.ಆರ್.ಪೇಟೆ (K.R Pete) ತಾಲೂಕಿನ ಸಿಂದಘಟ್ಟದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಹೆಚ್.ಟಿ ಮಂಜು (H.T Manju) ಮಹಿಳೆ ಮುಂದೆ ಈ ಅಸಾಹಾಯಕತೆ ತೋಡಿಕೊಂಡಿದ್ದಾರೆ. ನಾನು ಎಂಎಲ್‍ಎ ಆಗಿ 9 ತಿಂಗಳು ಆಗ್ತಿದೆ. ನನಗೆ ಇಲ್ಲಿಯವರೆಗೆ ಕೊಟ್ಟಿರೋದು ಕೇವಲ 50 ಲಕ್ಷ ರೂ. ಅನುದಾನ. ನನ್ನ ಕ್ಷೇತ್ರದಲ್ಲಿ 382 ಹಳ್ಳಿಗಳಿದೆ. ದೊಡ್ಡ ಹಳ್ಳಿಗೆ 50 ಸಾವಿರ ಕೊಡ್ತೀನಿ ಅಂದ್ರೆ, ಸಣ್ಣ ಹಳ್ಳಿ 25 ಸಾವಿರನಾದರೂ ಕೊಡಬೇಕು. ಆದರೆ ಪ್ರತಿಹಳ್ಳಿಗೆ 25 ಸಾವಿರ ಅನುದಾನ ಕೊಡೋಕು ದುಡ್ಡು ಸಾಲಲ್ಲ ಎಂದಿದ್ದಾರೆ.
Advertisement
Advertisement
ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿಗೆ ಹಣವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡೋಕು ಸರ್ಕಾರದಲ್ಲಿ ದುಡ್ಡಿಲ್ಲ. ಕ್ಷೇತ್ರದ ಅಭಿವೃದ್ದಿ ಮಾಡಲು ಸಾಧ್ಯವಾಗ್ತಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಇನ್ಮುಂದೆ ದೇಗುಲಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ- ನಿಯಮ ಮೀರಿದ್ರೆ ಸಿಗಲ್ಲ ಮಂಗಳಾರತಿ, ಪ್ರಸಾದ!