– ಸಂವಿಧಾನದ ಬಗ್ಗೆ ಪೇಜಾವರ ಶ್ರೀಗಳು ಹೇಳಿಕೆ ನೀಡಿಲ್ಲ ಎಂದ ಎಂ.ಬಿ.ಪುರಾಣಿಕ್
ಉಡುಪಿ: ಸಂವಿಧಾನ ಕುರಿತ ಪೇಜಾವರ ಶ್ರೀ (Pejawar Swamiji) ನೀಡಿದ್ದಾರೆ ಎನ್ನಲಾದ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಾನು ಸಂವಿಧಾನ ಕುರಿತು ಮಾತನಾಡಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದರೂ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ವಿಶ್ವಹಿಂದೂ ಪರಿಷತ್ (Vishwa Hindu Parishad) ಮುಂದಾಗಿದೆ.
ಉಡುಪಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡರು, ಪೇಜಾವರ ಶ್ರೀ ದೀನ-ದಲಿತ ಹಿಂದೂಗಳ ಸೇವೆ ಮಾಡುತ್ತಿದ್ದಾರೆ. ಶ್ರೀಗಳಿಗೆ ಮಾಡಿದ ಅವಮಾನ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಅವರಿಗೆ ನೋವಾದರೆ ಇಡೀ ಹಿಂದೂ ಸಮಾಜಕ್ಕೆ ನೋವಾದಂತೆ. ಮಠಗಳು ಹಿಂದೂ ಸಮಾಜದ ಅವಿಭಾಜ್ಯ ಅಂಗ. ಪೇಜಾವರ ಶ್ರೀಗಳ ಮಾತುಗಳನ್ನು ತಿರುಚಲಾಗಿದೆ, ಇದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಕನ್ನಡಿಗರಿಗೆ ದ್ರೋಹ: ರಾಜ್ಯಸಭೆ ಸಂಸದ ಜಿ.ಸಿ ಚಂದ್ರಶೇಖರ್ ಆಕ್ರೋಶ
ಶ್ರೀಗಳು ಸಂವಿಧಾನ ಬದಲು ಮಾಡುವ ಹೇಳಿಕೆ ನೀಡಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ, ಇದರಿಂದ ರಾಜ್ಯಾದ್ಯಂತ ಸಂಚಲನ ಉಂಟಾಗಿದೆ. ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ. ಹಿಂದು ನಾಯಕರು ಮಾತನಾಡಿದರೆ ಸುಮೋಟೊ ಕೇಸು ದಾಖಲಿಸುತ್ತೀರಿ. ಬಿಜಾಪುರದ ಹೋರಾಟ ಸೇರಿದಂತೆ ರಾಜ್ಯಾದ್ಯಂತ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಲಾಗಿದೆ. ಹಿಂದುಗಳ ಬಗ್ಗೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಬೇಸರ ಹೊರಹಾಕಿದ್ದಾರೆ.
ಶ್ರೀಗಳ ಬಗ್ಗೆ ಅಪಚಾರ ಮಾಡುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಆಗಬೇಕು. ಸ್ವಾಮಿಗಳನ್ನು ಟಾರ್ಗೆಟ್ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಪೇಜಾವರ ಶ್ರೀಗಳಿಗೆ ಅವಮಾನ ಆದರೂ ಸರ್ಕಾರ ಸುಮ್ಮನೆ ಕುಳಿತಿದೆ. ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿದ್ದೇವೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಕೊಟ್ಟಿದ್ದೇವೆ. ಕಾನೂನು ತಜ್ಞರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಸಂಸತ್ ಭವನ ಮೇಲಿನ ದಾಳಿಗೆ 23 ವರ್ಷ – ಹುತಾತ್ಮಕರಿಗೆ ಮೋದಿ ಸೇರಿ ಗಣ್ಯರಿಂದ ನಮನ