– ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು ಇಂಡಿಯಾ ಕೂಟ ನಾಯಕರ ತೀರ್ಮಾನ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಕೊರತೆ ಕಾರಣದಿಂದಾಗಿ ಸರ್ಕಾರ ರಚನೆ ಮಾಡುವ ಚಿಂತನೆಯನ್ನು ‘ಇಂಡಿಯಾ’ ಮೈತ್ರಿಕೂಟ (INDIA Bloc) ಕೈಬಿಟ್ಟಿದೆ.
ಫಲಿತಾಂಶ ಕುರಿತು ಚರ್ಚೆಗೆ ಇಂಡಿಯಾ ಒಕ್ಕೂಟದ ನಾಯಕರು ಸಭೆ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿವಾಸದಲ್ಲಿ ನಾಯಕರ ಸಭೆ ನಡೆಯಿತು. ಇದನ್ನೂ ಓದಿ: ಮೋದಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ: ‘ಇಂಡಿಯಾ’ ಮೈತ್ರಿಕೂಟ ನಾಯಕರ ಸಭೆಯಲ್ಲಿ ಖರ್ಗೆ ಮಾತು
ಬೇರೆಯವರನ್ನು ಸೆಳೆದು, ಅವರ ಆಣತಿಯಂತೆ ಕುಣಿಯುವುದು ಬೇಡ. ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿಯೇ ಇರಲಿ, ಬೇರೆಯವರ ಹಸ್ತಕ್ಷೇಪ ಬೇಡ. ಸರ್ಕಾರ ಮಾಡಲು ಸಾಕಷ್ಟು ಸವಾಲುಗಳಿವೆ. ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು ಇಂಡಿಯಾ ಒಕ್ಕೂಟ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಹಾಗೂ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯಾಗಿ 2014 ರಿಂದ ಮಾಡಿರುವ ತಪ್ಪುಗಳನ್ನ ಒತ್ತಿ ಹೇಳೋಣ. ಮೋದಿಯ ದುರಾಡಳಿತದ ಬಗ್ಗೆ ಜನರಿಗೆ ತಿಳಿಸುವತ್ತ ಕಾರ್ಯಾನಿರ್ವಹಿಸುವುದು. ಸದನದಲ್ಲಿ ಬಿಜೆಪಿಯ ಧ್ವನಿ ಅಡಗಿಸುವ ಕೆಲಸ ಮಾಡಬೇಕು ಮೈತ್ರಿಕೂಟದ ನಾಯಕರು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಮೋದಿಯೇ ಪ್ರಧಾನಿಯಾಗಲಿ: ಎನ್‌ಡಿಎ ಸಭೆಯಲ್ಲಿ ‘ನಮೋ’ ನಾಯಕತ್ವಕ್ಕೆ ಬಹುಪರಾಕ್
ಸಭೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾವೆಲ್ಲರೂ ಸೇರಿ ಒಂದೇ ಧ್ವನಿಯಲ್ಲಿ ಹೇಳುತ್ತಿದ್ದೇವೆ. ನಾವು ಸಂವಿಧಾನ ಅಡಿ ಬರುವ ಎಲ್ಲ ಮತದಾರ ಬಂಧುಗಳಿಗೆ ಧನ್ಯವಾದ ತಿಳಿಸುತ್ತೇವೆ. ಪ್ರಜಾಪ್ರಭುತ್ವ ರಕ್ಷಣೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.