ನವದೆಹಲಿ: ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ. ಅದು ಭಾರತ ಪ್ರಾಚೀನತೆಯ ಬೇರುಗಳನ್ನು ಹೊಂದಿದೆ ಎಂದು ಜೆಎನ್‌ಯು ಕುಲಪತಿ ಸಾಂತಿಶ್ರೀ ಧೂಲಿಪುಡಿ ಪಂಡಿತ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸೆಮಿನಾರ್‌ವೊಂದರಲ್ಲಿ ಮಾತನಾಡಿರುವ ಅವರು, ಕೇವಲ ಸಂವಿಧಾನಕ್ಕೆ ಬದ್ಧವಾಗಿರುವ ನಾಗರಿಕ ರಾಷ್ಟ್ರವಾಗಿ ಭಾರತವನ್ನು ಸೀಮಿತಗೊಳಿಸುವುದು ಅದರ ಇತಿಹಾಸ, ಪ್ರಾಚೀನ ಪರಂಪರೆ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಕಡೆಗಣಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ
Advertisement
Advertisement
ಭಾರತೀಯ ಸಾಂಸ್ಕೃತಿಕ ರಾಷ್ಟ್ರೀಯತೆಯು ಮಾನವಕೇಂದ್ರಿತ ಧರ್ಮಗಳಿಗಿಂತ ಬಹಳ ಭಿನ್ನವಾದ ಹಾದಿಯಲ್ಲಿದೆ. ಆದ್ದರಿಂದ ನಾವು ಭಾರತೀಯ ನಾಗರಿಕತೆಯ ಬಗ್ಗೆ ಮಾತನಾಡುವಾಗಲೆಲ್ಲಾ ಅದು ಅಭಿವೃದ್ಧಿ, ಪ್ರಜಾಪ್ರಭುತ್ವ, ವೈವಿಧ್ಯತೆ, ಭಿನ್ನಾಭಿಪ್ರಾಯವನ್ನು ಆಚರಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.
Advertisement
ಋಗ್ವೇದದಲ್ಲಿ ʼರಾಷ್ಟ್ರʼ ಎಂಬ ಪದದ ಉಲ್ಲೇಖವಿದೆ. ರಾಷ್ಟ್ರವು ಕೇವಲ ಭೌಗೋಳಿಕ ರಾಜಕೀಯ ಪರಿಕಲ್ಪನೆ ಮಾತ್ರವಲ್ಲ, ನಾಗರಿಕತೆಯ ಪರಿಕಲ್ಪನೆಯೂ ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲೂ ಅನೇಕ ರಾಷ್ಟ್ರಭಕ್ತರು ದೇಶಕ್ಕಾಗಿ ಹೋರಾಡಿದ್ದಾರೆ. ರಾಷ್ಟ್ರೀಯತೆಗೆ ಇವರೆಲ್ಲರ ಕೊಡುಗೆಯೂ ಇದೆ ಎಂದಿದ್ದಾರೆ. ಇದನ್ನೂ ಓದಿ: PFI ರ‍್ಯಾಲಿಯಲ್ಲಿ ಬಾಲಕನಿಂದ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ – ಪೊಲೀಸರಿಂದ ತನಿಖೆ