ಹಾವೇರಿ: ಹಾವು ಕಡಿದು ಅಲೆಮಾರಿ ಜನಾಂಗದ ಐದು ವರ್ಷದ ಬಾಲಕಿ ಮೃತಪಟ್ಟ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯ ಹೊರವಲಯದಲ್ಲಿರೋ ಟೆಂಟ್ ನಲ್ಲಿ ನಡೆದಿದೆ.
ಒಲಿವ್ವ ಸುಂಕಣ್ಣ ಮೋತಿ (5) ಮೃತ ಬಾಲಕಿ. ಗುಡಿಸಲಿನಲ್ಲಿ ಮಲಗಿದ್ದ ಒಲಿವ್ವ ಸುಂಕಣ್ಣ ಮೋತಿಗೆ ಭಾನುವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ವಿಷಪೂರಿತ ಹಾವು ಕಡಿದಿದೆ. ಹಾವು ಕಡಿದಿರುವ ವಿಷಯ ಪಾಲಕರಿಗೆ ಬೆಳಿಗ್ಗೆ 4ಗಂಟೆಗೆ ಗೊತ್ತಾದ ತಕ್ಷಣ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.
Advertisement
Advertisement
ಒಲಿವ್ವ ಗುಡಿಸಲಿನಲ್ಲಿ ನಿದ್ದೆಮಾಡುತ್ತಿದ್ದ ವೇಳೆ ಹಾವು ಕಡಿದು ಮೃತಪಟ್ಟಿದ್ದು, ಪುತ್ರಿಯನ್ನು ಕಳೆದುಕೊಂಡ ಅಲೆಮಾರಿ ಪಾಲಕರು ತೀವ್ರ ದುಖಿಃತರಾಗಿದ್ದಾರೆ. ಗುಡಿಸಲಿಗೆ ಬಾಲಕಿಯ ಶವವನ್ನು ತಗೆದುಕೊಂಡು ಬಂದಿರುವ ಅಲಮಾರಿಳ ದುಖಃದ ಕಟ್ಟೆ ಒಡೆದಿದೆ. ಇದನ್ನೂ ಓದಿ: ಕೆಲವು ಶಾಲೆಯಲ್ಲಿ ಹಿಜಬ್ ಯೂನಿಫಾರ್ಮ್ ಇದೆ, ಪರೀಕ್ಷೆಯಲ್ಲಿ ಹೇಗೆ ಮಾನಿಟರ್ ಮಾಡ್ತೀರಾ?: ದಿನೇಶ್ ಗುಂಡೂರಾವ್
Advertisement
ಅಲೆಮಾರಿ ಬುಡುಗಜಂಗಮರ ಗುಡಿಸಲಿಗಳಿಲ್ಲ ಮೂಲಸೌಲಭ್ಯ, ಹಾವು ಕಡಿದು ಮೂರು ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ ಮೂವರು ಹಾವು ಕಡಿದು ಸಾವನ್ನಪ್ಪಿದ್ದಾರೆ. ಈಗಲಾದರೂ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತು ಅಲೆಮಾರಿ ಬುಡುಗಜಂಗಮ ಗುಡಿಸಲುವಸಿಗಳಿಗೆ ಮನೆ ನಿರ್ಮಿಸಿಕಡಬೇಕು. ಮೃತಪಟ್ಟಿರುವ ಬಾಲಕಿಯ ಕುಟುಂಬದವರಿಗೆ ಸೂಕ್ತಪರಿಹಾರ ಕೊಡಬೇಕೆಂದು ಶೆಟ್ಟಿ ವಿಭೂತಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ