– ಇನ್ನೂ ಖರೀದಿಯಾಗಿಲ್ಲ ಗೇಲ್, ಮಾಲಿಂಗ, ಬ್ರಾವೋ
ಲಂಡನ್: ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮುಂದಿನ ವರ್ಷ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ‘ದಿ ಹಂಡ್ರೆಡ್’ ಟೂರ್ನಿಯ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದಿ ಹಂಡ್ರೆಡ್ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. 21 ವರ್ಷದ ರಶೀದ್ ಖಾನ್ ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 81 ವಿಕೆಟ್ ಪಡೆದಿದ್ದಾರೆ. ಅವರನ್ನು ಟ್ರೆಂಟ್ ರಾಕೆಟ್ಸ್ ಭಾನುವಾರ ಖರೀದಿಸಿದೆ. ಈ ಮೂಲಕ ರಶೀದ್ ಅವರೊಂದಿಗೆ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಆಡಲಿದ್ದಾರೆ.
Advertisement
Advertisement
ಮತ್ತೊಂದೆಡೆ ಯಾವುದೇ ತಂಡಗಳು ಟಿ-20ಯ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ಲಸಿತ್ ಮಾಲಿಂಗ, ಡ್ವೇನ್ ಬ್ರಾವೋ, ಕಿರೋನ್ ಪೋಲಾರ್ಡ್, ಕಗಿಸೊ ರಬಾಡಾ ಅವರನ್ನು ಖರೀದಿಸಲು ಮುಂದಾಗಲಿಲ್ಲ. ಈ ಬೆಳವಣಿಗೆ ಭಾರೀ ಅಚ್ಚರಿಕೆ ಮೂಡಿಸಿದೆ.
Advertisement
ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಆಂಡ್ರೆ ರಸ್ಸೆಲ್ ಅವರನ್ನು ನಾರ್ದರ್ನ್ ಬ್ರೇವ್ಸ್ ಮತ್ತು ಆಸ್ಟ್ರೇಲಿಯಾದ ಸೀಮಿತ ಓವರ್ ಗಳ ನಾಯಕ ಆರನ್ ಫಿಂಚ್ ಅವರನ್ನು ಉತ್ತರ ಸೂಪರ್ ಚಾರ್ಜರ್ಸ್ ಖರೀದಿಸಿದೆ. ಸೂಪರ್ ಚಾರ್ಜರ್ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್‍ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವೇಲ್ಸ್ ಫೈರ್ ತಂಡವು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ಮಣೆ ಹಾಕಿದೆ.
Advertisement
ಹರಾಜಿನಲ್ಲಿ ಒಟ್ಟು 570 ಆಟಗಾರರಿದ್ದಾರೆ:
ಭಾನುವಾರ ಒಟ್ಟು 570 ಆಟಗಾರರು ಪ್ಲೇಯರ್ ಹರಾಜಿಗೆ ಸೇರಿಕೊಂಡಿದ್ದರು. ಅವರಲ್ಲಿ 239 ವಿದೇಶಿ ಮತ್ತು 331 ದೇಶೀಯ ಆಟಗಾರರಿದ್ದರು. ಮೊದಲ ಸುತ್ತಿನಲ್ಲಿ ಒಟ್ಟು 96 ಆಟಗಾರರನ್ನು ಖರೀದಿಸಲಾಗಿದೆ. ‘ದಿ ಹಂಡ್ರೆಡ್’ ಮಾದರಿಯನ್ನು ಮುಂದಿನ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಇಂಗ್ಲೆಂಡ್ ಏಕದಿನ ತಂಡದ ಅನೇಕ ಆಟಗಾರರು ಎಂಟು ತಂಡಗಳನ್ನು ಸ್ಥಳೀಯ ಐಕಾನ್‍ಗಳಾಗಿ ಸೇರಿಕೊಂಡಿದ್ದಾರೆ.