ದುಬೈ: ಐಪಿಎಲ್ ಮಿನಿ ಹರಾಜಿನಲ್ಲಿ (IPL 2024 Auctio) ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್ ಸ್ಟಾರ್ಕ್ (Mitchell Starc) ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
Advertisement
2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಮಾರಾಟವಾಗಿದ್ದು ಇತಿಹಾಸವಾಗಿತ್ತು. ಆಸೀಸ್ ತಂಡದ ನಾಯಕ 20.50 ಕೋಟಿ ರೂ.ಗೆ ಮಾರಾಟವಾಗಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದರು. ಆದ್ರೆ 2023ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ತಂಡದ ಪಾಲಾಗಿ ದಾಖಲೆ ಬರೆದರು. ಇದನ್ನೂ ಓದಿ: IPL 2024 Auction: ದುಬಾರಿ ಆಟಗಾರ – 20.50 ಕೋಟಿ ರೂ.ಗೆ ಬಿಕರಿಯಾದ ಪ್ಯಾಟ್ ಕಮ್ಮಿನ್ಸ್
Advertisement
Advertisement
ತೀವ್ರ ಪೈಪೋಟಿಯಿಂದ ಕೂಡಿದ್ದ ಬಿಡ್‌ನಲ್ಲಿ ಸ್ಟಾರ್ಕ್ ಅವರನ್ನ ಖರೀದಿಸಲು ಗುಜರಾತ್ ಟೈಟಾನ್ಸ್ (Gujarat Taitans) ಹಾಗೂ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ನಡುವೆ ಹಣಾಹಣಿ ನಡೆದಿತ್ತು. ಅಲ್ಲದೇ ಪ್ರೇಕ್ಷರಕ ಎದೆ ಬಡಿತವೂ ಹೆಚ್ಚಾಗಿತ್ತು, ಹರಾಜು ನಡೆಸಿಕೊಡುತ್ತಿದ್ದ ಮಹಿಳೆ ಮಲ್ಲಿಕಾ ಸಾಗರ್ ಬಿಡ್ ಕೂಗಿ ಕೂಗಿ ಸುಸ್ತಾಗಿದ್ದರು. ತನ್ನ ಪರ್ಸ್‌ನಲ್ಲಿ 38.15 ಕೋಟಿ ರೂ. ಉಳಿಸಿಕೊಂಡಿದ್ದ ಗುಜರಾತ್ ಟೈಟಾನ್ಸ್ 24.50 ಕೋಟಿ ರೂ.ವರೆಗೂ ಬಿಡ್ ಮಾಡಿತ್ತು. ಆದ್ರೆ ಪಟ್ಟು ಬಿಡದ ಕೆಕೆಆರ್ ಜೋಳಿಗೆಯಲ್ಲಿ 32.70 ಕೋಟಿ ರೂ. ಇದ್ದರೂ 24.75 ಕೋಟಿ ರೂ.ಗೆ ಸ್ಟಾರ್ಕ್ ಅವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
Advertisement
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಜಿದ್ದಾ-ಜಿದ್ದಿಯಲ್ಲಿ ಹೈದರಾಬಾದ್ ತಂಡ 20.50 ಕೋಟಿ ರೂ.ಗೆ ಬಿಡ್ ಮಾಡಿ ಪ್ಯಾಟ್‌ಕಮ್ಮಿನ್ಸ್ ಅವರನ್ನ ಖರೀದಿಸಿತು. ಇದನ್ನೂ ಓದಿ: IPL 2024 Auction: ಚೆನ್ನೈ ಪಾಲಾದ ಕನ್ನಡಿಗ ರಚಿನ್ – ಕಿವೀಸ್ ಫ್ಲೇವರ್ ಆಯ್ತು ಸೂಪರ್ ಕಿಂಗ್ಸ್!