ನವದೆಹಲಿ: ಹಿಂದೂ (Hindu) ಹೆಸರನ್ನು ನೀಡಿದವರು ವಿದೇಶಿಯರು ಎಂದು ಕಾಂಗ್ರೆಸ್ (Congress) ಸಂಸದ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಹೇಳಿದ್ದಾರೆ.
ಇಂಡಿಯಾ ಎಂಬ ಹೆಸರು ಪ್ರಧಾನಿ ಮೋದಿಗೆ ಭಯ ತಂದಿದೆ. ಇಂಡಿಯಾ (INDIA) ಎಂಬ ಮೈತ್ರಿಕೂಟ ರಚನೆಯಾದ ದಿನದಿಂದ ಪ್ರಧಾನಿ ಮೋದಿಯವರಿಗೆ (PM Narendra Modi) ಇಂಡಿಯಾ ಎಂಬ ಹೆಸರಿನ ಮೇಲೆ ದ್ವೇಷ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ
Advertisement
#WATCH | Congress MP Adhir Ranjan Chowdhury says, "The Hindu name is also given by foreign countries…I think the PM himself is afraid of the name India. Since the day INDIA named alliance was formed PM Modi's hatred toward the name India has increased…If they are so against… pic.twitter.com/vD0vUAXc3P
— ANI (@ANI) September 5, 2023
Advertisement
ಸದ್ಯ ರಾಷ್ಟ್ರಪತಿಗಳ ನಿವಾಸವಾಗಿರುವ ರಾಷ್ಟ್ರಪತಿ ಭವನ (Rashtrapati Bhavan) ಈ ಹಿಂದೆ ಬ್ರಿಟಿಷ್ ವೈಸ್‌ರಾಯ್ ಮನೆಯಾಗಿತ್ತು. ಮೋದಿಯವರು ಬ್ರಿಟಿಷರ ವಿರೋಧಿಯಾಗಿದ್ದರೆ ರಾಷ್ಟ್ರಪತಿ ಭವನವನ್ನು ಏನು ಮಾಡುತ್ತಾರೆ ಎಂದು ಅಧೀರ್ ರಂಜನ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬದಲಾಗುತ್ತಾ ದೇಶದ ಹೆಸರು – ‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್ ಆಫ್ ಭಾರತ್’ ಅಂತ ಮರುನಾಮಕರಣ?
Advertisement
ಬಿಜೆಪಿ (BJP) ಕೇಂದ್ರ ಸರ್ಕಾರವು ದೇಶದ ಹೆಸರನ್ನು`ಇಂಡಿಯಾ’ ಬದಲಿಗೆ `ರಿಪಬ್ಲಿಕ್ ಆಫ್ ಭಾರತ್’ (Republic Of Bharat) ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ವಿಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದರೆ ಬಿಜೆಪಿ ನಾಯಕರು ವಿಪಕ್ಷಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
Advertisement
Web Stories