ಹಿಜಬ್ ವಿವಾದ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ದೇಶದ್ರೋಹಿ PFI, SDPI ಸಂಘಟನೆಗಳು: ಎಂ.ಪಿ.ರೇಣುಕಾಚಾರ್ಯ

Public TV
2 Min Read
MP Renukacharya 1

ದಾವಣಗೆರೆ: ಹಿಜಬ್ ವಿವಾದ ತಂದಿದ್ದು ಬಿಜೆಪಿ ಅಲ್ಲ. ಅದನ್ನು ಎಳೆದು ತಂದಿದ್ದು ಕಾಂಗ್ರೆಸ್, ದೇಶದ್ರೋಹಿ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು. ಕೋರ್ಟ್ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಅದರೂ ಕೂಡ ಬಂದ್, ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದಾವಣಗೆರೆಯ ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಅವರು ಕೋರ್ಟ್ ಆದೇಶವಿದ್ದರೂ ಹಿಜಬ್ ಬಗ್ಗೆ ಮಾತನಾಡುತ್ತಿದ್ದಾರೆ. ಹಿಜಬ್ ವಿವಾದ ಸೃಷ್ಟಿ ಮಾಡಿದ್ದು ನಾವಲ್ಲ. ಕೆಲ ದೇಶದ್ರೋಹಿ ಸಂಘಟನೆಗಳು. ಕಾಂಗ್ರೆಸ್ ಮುಖಂಡರಾದ ಯುಟಿ ಖಾದರ್, ಜಮೀರ್ ಅಹಮದ್ ಅಂತವರು ಹಿಜಬ್ ಎಳೆದು ತಂದರು ಎಂದು ಆರೋಪಿಸಿದರು. ಇದನ್ನೂ ಓದಿ:ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು

Yadgiri hijab

ಹಿಜಬ್ ವಿವಾದವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಕೆಮಾಡಿಕೊಂಡಿದೆ. ಈಗ ಹಿಜಬ್ ಮುಗಿದ ಅಧ್ಯಾಯ. ಈ ನೆಲದ ಕಾನೂನನ್ನು ಗೌರವಿಸಬೇಕು. ಆದರೆ ಕೆಲ ದೇಶದ್ರೋಹಿ ಸಂಘಟನೆಗಳು ಹಿಜಬ್ ವಿಚಾರವಾಗಿ ರಾಜ್ಯ ಬಂದ್‍ಗೆ ಕರೆ ಕೊಟ್ಟವು ಎಂದು ಕಿಡಿಕಾರಿದರು.

ಇದೇನು ಪಾಕಿಸ್ತಾನ್ ಮಾಡಿಕೊಂಡು ಬಿಟ್ಟಿದ್ದೀರಾ, ಬಾಂಗ್ಲಾ ಮಾಡಿಕೊಂಡಿದ್ದೀರಾ ಅದನ್ನು ಸಹಿಸುವುದಿಲ್ಲ. ಹಿಜಬ್‍  ಬಹಿಷ್ಕಾರ ಮಾಡಿ ಎಂದು ನಾವು ಹೇಳಿಲ್ಲ.  ಹಿಜಬ್‍  ಕಾಂಗ್ರೆಸ್ಸಿಗರು ಸೃಷ್ಟಿ ಮಾಡಿದ್ದು ಎಂದರು.

MP Renukacharya

ಮದರಸಾಗಳು ದೇಶದ್ರೋಹದ ಪಾಠ ಮಾಡುತ್ತಿವೆ. ಮದರಸಾಗಳು ಯಾಕೆ ಬೇಕು ಅಲ್ಲಿ ಏನ್ ಬೋಧನೆ ಮಾಡುತ್ತಾರೆ ಎನ್ನುವುದು ತಿಳಿಯಲಿ. ಮದರಸಾಗಳಲ್ಲಿ ಮುಗ್ಧ ಮಕ್ಕಳ ಮೇಲೆ ಪ್ರಚೋಧನಾಕಾರಿ ಪಾಠ ಮಾಡ್ತಾರೆ. ಆಗ ಅವರು ದೇಶದ ವಿರುದ್ಧ ತಿರುಗಿ ಬೀಳುತ್ತಾರೆ. ನಮ್ಮ ದೇಶದಲ್ಲೇ ಇದ್ದುಕೊಂಡು, ಭಾರತ್ ಮಾತಾಕಿ ಜೈ ಎಂದು ಆ ಮಕ್ಕಳು ಹೇಳೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ರೇಣುಕಾಚಾರ್ಯ ಕುಟುಂಬದ ಮೇಲೆ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಆರೋಪದ ಬಗ್ಗೆ ಮಾತನಾಡಿದ ಅವರು, ನಾನು ಯಾವುದೇ ನಕಲಿ ಪ್ರಮಾಣ ಪತ್ರ ಪಡೆದಿಲ್ಲ. ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ. ನಾನು ಸರ್ಕಾರಿ ಸೌಲಭ್ಯ ಪಡೆದಿದ್ದೇನೆಂದು ಕಾಂಗ್ರೆಸ್ ವಕ್ತಾರಾ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ನನ್ನ ಮಗಳನ್ನು ವಿನಾಃ ಕಾರಣ ಎಳೆ ತಂದಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಕಾಂಗ್ರೆಸ್ ರಾಜ್ಯದಲ್ಲಿ ಮುಳುಗುವ ಹಡಗು. ಈಗ ಒಂದು ವಿಚಾರ ಬೇಕು ಎಂದು ಇದನ್ನು ಎಳೆತಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ವಿನಾಃ ಕಾರಣ ಗೊಂದಲ ಸೃಷ್ಟಿ ಮಾಡಬೇಡಿ. ನಾನೇ ನಕಲಿ ಪ್ರಮಾಣ ಪತ್ರ ಪಡೆದಿದ್ದರೇ ತನಿಖೆ ಮಾಡಲಿ ಸಾಬೀತು ಮಾಡಲಿ. ಇಲ್ಲಿನ ಮಾಜಿ ಶಾಸಕರು ಜಾತ್ಯತೀತರಲ್ಲಾ. ನನ್ನ ವಿರುದ್ಧ ಪ್ರತಿಭಟನೆ ಮಾಡಲಿ ನಾನು ಬೇಡ ಎನ್ನುವುದಿಲ್ಲ. ನಾನು ಯಾವುದೇ ಪ್ರಮಾಣ ಪತ್ರ ಪಡೆದಿಲ್ಲ. ಈ ಮೂವರಿಗೂ ಸೋಮವಾರ ಪತ್ರ ಬರೆಯುತ್ತೇನೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *