ಚಿತ್ರದುರ್ಗ: ಮುರುಘಾಶ್ರೀ (Murugha Shree) ವಿರುದ್ಧದ 2ನೇ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದೂಡಿದೆ.
2ನೇ ಪೋಕ್ಸೋ ಪ್ರಕರಣದಲ್ಲಿನ ಬಾಡಿ ವಾರೆಂಟ್ (Body Warrant) ಅನ್ನು ನ್ಯಾಯಾಂಗ ಬಂಧನವಾಗಿ ವಿಸ್ತರಿಸಲು ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದರು. ಈ ಪ್ರಕರಣದ ಆರೋಪಿಯು ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದ್ದು, ನ್ಯಾಯಾಂಗ ಬಂಧನವನ್ನು ಸಹ ವಿಸ್ತರಿಸುವಂತೆ ಕೇಳಿದರು.
Advertisement
Advertisement
ಇದಕ್ಕೆ ಮುರುಘಾಶ್ರೀ ಪರ ವಕೀಲ, ಸಂದೀಪ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಈ ಕೇಸಿನ ವಿಚಾರಣೆಯನ್ನು ನವೆಂಬರ್ 15ಕ್ಕೆ ನ್ಯಾಯಾಲಯ ಮುಂದೂಡಿದೆ. ಇದನ್ನೂ ಓದಿ: ಪುತ್ತೂರಿನಲ್ಲಿ ಪುತ್ತಿಲ ಪರಿವಾರ- ಹಿಂಜಾವೇ ಮುಖಂಡರ ಮಧ್ಯೆ ಸಂಘರ್ಷ
Advertisement
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್, ಮೊದಲ ಪ್ರಕರಣಕ್ಕೆ ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್ 7 ಷರತ್ತು ವಿಧಿಸಿತ್ತು. ಈ ಷರತ್ತಿನ ಅನ್ವಯ ಚಿತ್ರದುರ್ಗ ಕೋರ್ಟಿಗೆ ದಾಖಲೆ ಸಲ್ಲಿಸಿದ್ದೇವೆ. 2 ಲಕ್ಷ ಬಾಂಡ್ ಹಾಗೂ ಇಬ್ಬರು ವ್ಯಕ್ತಿಗಳಿಂದ ಜಾಮೀನು ಶ್ಯೂರಿಟಿ ನೀಡಿದ್ದು, ಮುರುಘಾಶ್ರೀ ಪಾಸ್ ಪೆÇೀರ್ಟನ್ನು ಕೋರ್ಟಿಗೆ ಸಲ್ಲಿಸಿದ್ದೇವೆ. ಈ ಬಗ್ಗೆ ಕೋರ್ಟ್ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಅಲ್ಲದೇ ಸತತ 3 ದಿನ ಕೋರ್ಟಿಗೆ ರಜೆ ಹಿನ್ನೆಲೆಯಲ್ಲಿ ನವೆಂಬರ್ 15ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
Advertisement
ಎರಡನೇ ಕೇಸಿನಲ್ಲಿ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಬದಲಿಸಲು ಮನವಿ ಮಾಡಿದ್ದಾರೆ. ಆದರೆ ಹೈಕೋರ್ಟ್‍ನಲ್ಲಿ 2ನೇ ಪೋಕ್ಸೋ ಕೇಸ್ ರದ್ಧತಿಗೆ ನಾವು ಮನವಿ ಸಲ್ಲಿಸಿದ್ದು, ಹೈಕೋರ್ಟ್ 2ನೇ ಪೋಕ್ಸೋ ಕೇಸ್ ವಿಚಾರಣೆಗೆ ತಡೆ ನೀಡಿದೆ. ಹೀಗಾಗಿ ಈ ವೇಳೆ ಜಿಲ್ಲಾ ಕೋರ್ಟಿಗೆ ಮನವಿ ಸಲ್ಲಿಸಲಾಗದು. ಆದರೆ ಸರ್ಕಾರಿ ವಕೀಲ ಮನವಿ ಸಲ್ಲಿಸಿದ್ದಾರೆ. ಅದನ್ನು ಕೋರ್ಟ್ ಸ್ವೀಕರಿಸಿದೆ. ಇಂತಹ ವೇಳೆ ನಾವು ಆಕ್ಷೇಪಣೆ ಸಲ್ಲಿಸುವುದು ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ.
ಒಂದನೇ ಕೇಸಲ್ಲಿ ಹೈಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ನಾವು ಬಿಡುಗಡೆಗೆ ಕೋರಿದ್ದೇವೆ. ಆದರೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನವೆಂಬರ್ 15ಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ನವೆಂಬರ್ 15ಕ್ಕೆ ಮುರುಘಾಶ್ರೀ ಬಿಡುಗಡೆಯಾಗುವ ಭರವಸೆಯಿದೆ ಎಂದು ವಕೀಲ ಸಂದೀಪ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಪ್ರಕರಣದ ಬಗ್ಗೆ ಸರ್ಕಾರಿ ವಕೀಲ ಜಗದೀಶ್ ಸಹ ಮಾಧ್ಯಮಗಳಿಗೆ ಪೃತಿಕ್ರಿಯಿಸಿದರು. 2ನೇ ಪೋಕ್ಸೋ ಪ್ರಕರಣದಲ್ಲಿನ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ವಿಸ್ತರಿಸಲು ನಾವು ಮನವಿ ಮಾಡಿದ್ದೇವೆ. ಆದರೆ ಮೊದಲ ಪ್ರಕರಣದಲ್ಲಿ ಹೈಕೋರ್ಟ್ ಆದೇಶದಂತೆ, ಪ್ರತಿವಾದಿಗಳು ಇಂದು ಚಿತ್ರದುರ್ಗ ಕೋರ್ಟಿಗೆ ಎಲ್ಲಾ ದಾಖಲೆ ಸಲ್ಲಿಸಿದ್ದಾರೆ. ಇಬ್ಬರು ವ್ಯಕ್ತಿಗಳಿಂದ ಜಾಮೀನು ಶ್ಯೂರಿಟಿ ಸಹ ನೀಡಿದ್ದಾರೆ. ಅದರ ಪರಿಶೀಲನೆಗಾಗಿ ನವೆಂಬರ್ 15ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಅಲ್ಲದೇ ಮೊದಲ ಕೇಸಲ್ಲಿ ಜಾಮೀನು ಸಿಕ್ಕರೂ ಎರಡನೇ ಕೇಸಲ್ಲಿ ಬಾಡಿ ವಾರೆಂಟ್‍ನ್ನು ನ್ಯಾಯಾಂಗ ಬಂಧನವಾಗಿ ಬದಲಿಸಲು ನಾವು ಮನವಿ ಸಲ್ಲಿಸಲು ನಮಗೆ ಅವಕಾಶವಿದೆ. ಹೀಗಾಗಿ ಸಲ್ಲಿಸಿದ್ದು, ಕೋರ್ಟ್ ಪುರಸ್ಕರಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.