– ಮುಖ್ಯಶಿಕ್ಷಕಿ ವರ್ತನೆಗೆ ಪೋಷಕರು, ವಿಹೆಚ್‌ಪಿ ಮುಖಂಡರ ಆಕ್ರೋಶ
ಶಿವಮೊಗ್ಗ: ಬುಧವಾರ ನಾಡಿನೆಲ್ಲೆಡೆ ರಾಖಿ (Rakhi) ಹಬ್ಬದ ಸಂಭ್ರಮ. ಅಣ್ಣ ತಂಗಿಯರ ನಡುವೆ ಸಹೋದರ ಭ್ರಾತೃತ್ವ ಗಟ್ಟಿಯಾಗುವ ಸಲುವಾಗಿ ಈ ರಾಖಿ ಹಬ್ಬ ಆಚರಿಸುತ್ತಾರೆ. ಆದರೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರದ (Sagara) ಖಾಸಗಿ ಶಾಲೆಯಲ್ಲಿ ರಾಖಿ ಕಟ್ಟಿಕೊಂಡಿದ್ದೇ ರಾದ್ಧಾಂತಕ್ಕೆ ಕಾರಣವಾಗಿದೆ.
ಸಾಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಮಕ್ಕಳು ಬುಧವಾರ ರಾಖಿ ಕಟ್ಟಿಕೊಂಡು ತರಗತಿಗೆ ಬಂದಿದ್ದರು. ರಾಖಿ ಕಟ್ಟಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕಿ ಕೋಲನ್ ದೇವಿ ಥೆರೆಸಾ ಅವರು ತರಗತಿಯಿಂದ ಹೊರಗೆ ನಿಲ್ಲಿಸಿ, ಕ್ಷಮಾಪಣೆ ಪತ್ರ (Apology Letter) ಬರೆದುಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕಿಯ ಈ ವರ್ತನೆ ಪೋಷಕರು ಹಾಗು ವಿಶ್ವ ಹಿಂದು ಪರಿಷತ್ ಮುಖಂಡರನ್ನು ಕೆರಳಿಸಿದೆ. ಇದನ್ನೂ ಓದಿ: ಕಿಡ್ನಿ ವೈಫಲ್ಯ – ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ
ಶಾಲೆಗೆ ತೆರಳಿದ ಪೋಷಕರು ಹಾಗು ವಿಹೆಚ್‌ಪಿ ಕಾರ್ಯಕರ್ತರು ಮುಖ್ಯ ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಾಗರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಲಿನಿಂದ ಹೊಡೆದು ಯುವಕನ ಹತ್ಯೆಗೈದ ದುಷ್ಕರ್ಮಿಗಳು – ಸಿಸಿ ಟಿವಿಯಲ್ಲಿ ಕೃತ್ಯ ಸೆರೆ
Web Stories