– ಸಂತ್ರಸ್ತೆಯನ್ನು ಭೇಟಿಯಾದ ಬಿಜೆಪಿ ನಿಯೋಗ
– ಹಿಂದೂ ಜೊತೆ ಬಂದಿದ್ದೀಯಾ ಅಂತ ಸಾಯುವ ಹಾಗೆ ಹೊಡೆದರು
– ಹೆಣ್ಣುಮಗಳಿದ್ದಾಳೆ ಬಿಟ್ಟುಬಿಡಿ ಅಂದ್ರೂ ಬಿಡಲಿಲ್ಲ
ಹಾವೇರಿ: ನನಗೆ ಒಬ್ಬಳು ಮಗಳಿದ್ದಾಳೆ, ನನ್ನನ್ನ ಬಿಟ್ಟುಬಿಡಿ ಅಂತ ಕಾಲಿಗೆ ಬಿದ್ದು ಬೇಡಿಕೊಂಡೆ, ಅತ್ತು ಕರೆದು ಗೋಳಾಡಿದೆ, ಆದರೂ ಬಿಡದೇ ಅತ್ಯಾಚಾರ ಮಾಡಿದ್ರು, ಸಾಯುವ ಹಾಗೆ ಹೊಡದರು. ದೂರು ಕೊಟ್ಟಮೇಲೆ ಕೇಸ್ ವಾಪಸ್ ತೆಗದುಕೊ ದುಡ್ಡು ಕೊಡ್ತೀವಿ ಅಂತಾ ಹೇಳಿದ್ರು… ಹಾವೇರಿ (Haveri) ಜಿಲ್ಲೆಯ ಹಾನಗಲ್‌ನಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ನೋವಿನ ನುಡಿಗಳು ಕೇಳಿಬಂದಿದ್ದು ಹೀಗೆ…
ಹಾನಗಲ್ ಗ್ಯಾಂಗ್‌ರೇಪ್‌ಗೆ ಒಳಗಾದ ಸಂತ್ರಸ್ತೆಯನ್ನು ಮಾಜಿ ಸಚಿವ ಬಿ.ಸಿ ಪಾಟೀಲ್ (BC Patil) ನೇತೃತ್ವದ ಬಿಜೆಪಿ ನಿಯೋಗ ಭೇಟಿ ಮಾಡಿತ್ತು. ಈ ವೇಳೆ ಸಂತ್ರಸ್ತೆ ತನಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
Advertisement
Advertisement
ಆರೋಪಿಗಳ ಕಡೆಯವರು ನಮಗೆ ದುಡ್ಡು ಕೊಡ್ತೀವಿ ಕೇಸ್ ವಾಪಾಸ್ ತಗೊಳ್ಳಿ ಅಂದರು. ಆದ್ರೆ ನಾನು ಒಪ್ಪಲಿಲ್ಲ, ದೂರು ಕೊಡ್ತೀನಿ ಎಂದು ಹೇಳಿ, ಧೈರ್ಯದಿಂದ ಮುಂದೆ ಬಂದೆನೆಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ICICI ಬ್ಯಾಂಕ್ ಉದ್ಯೋಗಿಗಳಿಬ್ಬರು ಸ್ಥಳದಲ್ಲೇ ಸಾವು
Advertisement
ಕಹಿ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ:
ನಾವು ರೂಮಿನಲ್ಲಿ ಕುಳಿತಿದ್ದಾಗ ನೀರು ಬರುತ್ತಾ ನೋಡ್ತೀವಿ ಅಂತ ಆ ಹುಡುಗರು ಬಂದರು. ಹಿಂದೂ ಜೊತೆ ಬಂದಿದ್ದೀಯಾ ಅಂತಾ ತುಂಬಾ ಹೊಡೆದರು. ಅದಕ್ಕೂ ಮುನ್ನ ನಾನು ಆ ಹುಡುಗರನ್ನು ನೋಡಿಯೇ ಇರಲಿಲ್ಲ. ರೂಮಿನಲ್ಲಿ ಹೊಡೆದು, ಪುನಃ ಹೊಳೆ ಹತ್ರ ಕರಕೊಂಡು ಬಂದು ಮತ್ತೆ ಹೊಡೆದರು. ಸಿಕ್ಕ-ಸಿಕ್ಕ ಜಾಗಕ್ಕೆ ಸಾಯುವ ರೀತಿ ಹೊಡೆದರು.
Advertisement
ಹೊಡೆದು ನನ್ನನ್ನ ಕಾಡಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು. ನನ್ನನ್ನ ಬಿಟ್ಟು ಬಿಡಿ, ನಿಮ್ಮ ಕಾಲಿಗೆ ಬೀಳ್ತೀನಿ, ನನಗೆ ಒಬ್ಬಳು ಮಗಳಿದ್ದಾಳೆ ಅಂತ ಬೇಡಿಕೊಂಡರೂ ಬಿಡಲಿಲ್ಲ. ನನ್ನ ಮೇಲೆ ಅತ್ಯಾಚಾರ ಎಸಗಿದರು. ಅಲ್ಲಿಂದ ಬೈಕ್‌ನಲ್ಲಿ ಬೇರೆಡೆಗೆ ಕರೆದೊಯ್ದು ಮತ್ತೆ ಅತ್ಯಾಚಾರ ಎಸಗಿದರು. ಆ ಮೇಲೆ ರಸ್ತೆಗೆ ಕರೆದುಕೊಂಡು ಬಂದರು. ಇದನ್ನೂ ಓದಿ: ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ – ಭಾರತ ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಬೆಳ್ಳಿಯಪ್ಪ
ಅಲ್ಲಿಂದ ಕಾರಿನಲ್ಲಿ ಕರೆದುಕೊಂಡು ದಾಸನಕೊಪ್ಪ ಹಿಂಭಾಗದ ಬಸ್ ನಿಲ್ದಾಣದಲ್ಲಿ ಬಿಟ್ಟರು. 500 ರೂ. ಕೈಗೆ ಕೊಟ್ಟು, ಬ್ರೆಡ್ ತಂದುಕೊಟ್ಟರು. ಶಿರಸಿ ಬಸ್ ಹತ್ತಿಸಿ ಕಳುಹಿಸಿದರು. ವೀಡಿಯೋ ಎಲ್ಲಾ ಡಿಲೀಟ್ ಮಾಡ್ತೀವಿ ಅಂದಿದ್ದರು, ಆದ್ರೆ ವೀಡಿಯೋ ವೈರಲ್ ಆಗಿದೆ. ನಾನು ಮೊದಲ ದಿನ ಭಯದಿಂದ ಕುಟುಂಬದವರಿಗೆ ಏನೂ ಹೇಳಿರಲಿಲ್ಲ. ಬಳಿಕ ವಿಷಯ ನನ್ನ ಅಣ್ಣ ಮತ್ತು ಗಂಡನಿಗೆ ತಿಳಿಯಿತು. ನಂತರ ದೂರು ನೀಡಲು ಮುಂದಾದೆ. ಆ ಮೇಲೆ ಜಡ್ಜ್ ಮುಂದೆ ಎಲ್ಲಾ ಹೇಳಿದೆ.
ನನಗೆ ಈಗ 26 ವರ್ಷ ಮನೆಗೆಲಸ ಮಾಡುಕೊಂಡಿದ್ದೇನೆ. ನನಗೆ ಯಾರ ಭಯವೂ ಇಲ್ಲ. ಆದ್ರೆ ಅವರಿಗೆ ಮಾತ್ರ ಶಿಕ್ಷೆ ಆಗಬೇಕು. ಕೇಸ್ ವಾಪಸ್ ತೆಗೆದುಕೊಳ್ಳಿ ಹಣ ಕೊಡುತ್ತೇವೆ ಎಂದು ಹೇಳಿದ್ದರು. ಆದ್ರೆ ನನಗೆ ಅನ್ಯಾಯ ಆಗಿದೆ, ದೂರು ಕೊಡ್ತೀನಿ ಎಂದು ದೂರು ನೀಡಿದೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.