ನವದೆಹಲಿ: 2002ರ ಫೆ.27ರಂದು ನಡೆದ ಗುಜರಾತ್ ಗಲಭೆಯೇ (Gujarat riots) ದೇಶದ ಅತಿದೊಡ್ಡ ಗಲಭೆ ಎಂದು ಬಿಂಬಿಸಲಾಗುತ್ತಿದೆ. ಆದ್ರೆ ಅದಕ್ಕಿಂತಲೂ ಹಿಂದೆ 250ಕ್ಕೂ ಹೆಚ್ಚು ದೊಡ್ಡ ದೊಡ್ಡ ಗಲಭೆಗಳು ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ಮರಿಸಿದರು.
ಲೆಕ್ಸ್ ಫ್ರಿಡ್‌ಮನ್ ಪಾಡ್‌ಕಾಸ್ಟ್‌ನಲ್ಲಿ (Lex Fridman Podcast) ಮಾತನಾಡಿದ ಪ್ರಧಾನಿ ಮೋದಿ, 2002ರ ಗೋಧ್ರಾ ರೈಲು ದುರಂತ ಹಾಗೂ ಅದಕ್ಕಿಂತಲೂ ಹಿಂದೆ ಗುಜರಾತ್‌ನಲ್ಲಿ (Gujrat) ನಡೆದ ಗಲಭೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಇದನ್ನೂ ಓದಿ: ಭಾರತದ ಜೊತೆ ಪರೋಕ್ಷ ಯುದ್ಧ ಮಾಡ್ತಿದೆ – ಉಗ್ರರನ್ನು ರಫ್ತು ಮಾಡೋ ದೇಶ ಪಾಕಿಸ್ತಾನ ಎಂದ ಮೋದಿ
A wonderful conversation with @lexfridman, covering a wide range of subjects. Do watch! https://t.co/G9pKE2RJqh
— Narendra Modi (@narendramodi) March 16, 2025
2002ರ ಫೆ.27ರಂದು ನಡೆದ ಗೋಧ್ರಾ ಘಟನೆ (Godhra Incident) ನಿಜಕ್ಕೂ ಯಾರೂ ಊಹಿಸಲಾಗದ ದುರಂತ. ನಾನು ರಾಜ್ಯದ ಪ್ರತಿನಿಧಿಯಾಗಿ ಕೇವಲ 3 ದಿನಗಳಷ್ಟೇ ಆಗಿತ್ತು. ಆ ದಿನ ಬಜೆಟ್ ಅಧಿವೇಶನಕ್ಕಾಗಿ ವಿಧಾನ ಸಭೆಯಲ್ಲಿ ಕುಳಿತಿದ್ದೆ. ಆ ಸಂದರ್ಭದಲ್ಲೇ ಗೋಧ್ರಾ ರೈಲು ದುರಂತ ಸಂಭವಿಸಿತು. ಮಹಿಳೆಯರು, ಮಕ್ಕಳೆಂಬುದನ್ನು ನೋಡದೇ ಸುಮಾರು 59 ಮಂದಿಯನ್ನ ರೈಲಿನಲ್ಲೇ ಸಜೀವ ದಹನ ಮಾಡಲಾಗಿತ್ತು. ಇದು ಯಾರೂ ಊಹಿಸಲಾದ ದುರಂತ ಎಂದು ಸ್ಮರಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ
ಇದೇ ವೇಳೆ ಪ್ರಧಾನಿ ಮೋದಿ ತಾವು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಗುಜರಾತ್‌ನಲ್ಲಿ ನಡೆದ ಗಲಭೆಗಳ ಬಗ್ಗೆ ಪ್ರಸ್ತಾಪಿಸಿದರು. 2002ರ ಗುಜರಾತ್ ಗಲಭೆಯೇ ದೇಶದಲ್ಲಿ ನಡೆದ ಅತಿದೊಡ್ಡ ಗಲಭೆ ಎಂದು ಬಿಂಬಿಸಲಾಗುತ್ತಿದೆ. ಆದ್ರೆ ಅದಕ್ಕೂ ಮುನ್ನ ಕ್ಷುಲ್ಲಕ ಕಾರಣಗಳಿಗೆ ಕೋಮು ಗಲಭೆಗಳು ಸಂಭವಿಸಿದ ಉದಾಹರಣೆಗಳಿವೆ. 2002ಕ್ಕಿಂತ ಮೊದಲು ಗುಜರಾತ್ ರಾಜ್ಯ 250ಕ್ಕೂ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
#WATCH | “… For peace efforts, I myself visited Lahore. I even invited the Prime Minister for my oath-taking ceremony so that we have a new beginning. Every good initiative had a negative result. We hope they get wisdom soon and they walk the path of peace and happiness…… pic.twitter.com/bdO1lIl4iW
— ANI (@ANI) March 16, 2025
2002ಕ್ಕಿಂತಲೂ ಹಿಂದಿನ ಡೇಟಾವನ್ನ ನೋಡಿದ್ರೆ ಗುಜರಾತ್ ಗಲಭೆಗಿಂತಲೂ ಹಿಂದೆ ಅನೇಕ ಗಲಭೆಗಳು ನಡೆದಿರುವುದನ್ನು ನೋಡಬಹುದು. ಆಗ ನಿರಂತರವಾಗಿ ಕರ್ಫ್ಯೂ ಹೇರಲಾಗುತ್ತಿತ್ತು. ಗಾಳಿ ಪಟ ಹಾರಿಸುವ ಸ್ಪರ್ಧೆ ನಡೆಯುವಾಗ, ಸೈಕಲ್ ವಿಚಾರಗಳಿಗೆ ನಡೆದ ಗಲಾಟೆಗಳು ಕೋಮು ಘರ್ಷಣೆಯ ಸ್ವರೂಪ ಪಡೆದುಕೊಂಡಿದ್ದವು. 1969ರ ಗಲಭೆ ಸುಮಾರು 6 ತಿಂಗಳ ಕಾಲ ನಡೆದಿತ್ತು. ನಾನು ಮುಖವಾಣಿಗೆ ಬರುವುದಕ್ಕೆ ಮುನ್ನವೇ ಗುಜರಾತ್‌ನ ಗಲಭೆಗಳಿಗೆ ಸುದೀರ್ಘ ಇತಿಹಾಸವಿದೆ. ಆದ್ರೆ ಗೋಧ್ರಾ ರೈಲು ದುರಂತ ಜನರನ್ನ ಹಿಂಸಾಚಾರದತ್ತ ಕೊಂಡೊಯ್ಯುವ ಕೇಂದ್ರಬಿಂದುವಾಗಿತ್ತು ಎಂದು ಪ್ರಸ್ತಾಪಿಸಿದರು.
ಗೋಧ್ರಾ ದುರಂತ ನಡೆದ ಸಂದರ್ಭದಲ್ಲಿ ನಮ್ಮ ವಿರೋಧಿ ಸರ್ಕಾರ ಕೇಂದ್ರದಲ್ಲಿತ್ತು. ಹಾಗಾಗಿ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕುವ ಪ್ರಯತ್ನ ಮಾಡಿದರು. ಆದ್ರೆ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ ನ್ಯಾಯಾಂಗ ನನ್ನನ್ನ ನಿರಪರಾಧಿ ಎಂದು ಪರಿಗಣಿಸಿತು ಸ್ಮರಿಸಿದರು. ಇದನ್ನೂ ಓದಿ: ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ: ಚೌಹಾಣ್‌ಗೆ ಬೊಮ್ಮಾಯಿ ಪತ್ರ
2002ರ ಬಳಿಕ ದೊಡ್ಡ ಗಲಭೆಗಳು ನಡೆದಿಲ್ಲ:
ಮುಂದುವರಿದು.. ಮಾತನಾಡಿದ ಪ್ರಧಾನಿ ಮೋದಿ, 2002ರ ನಂತರ ಕಳೆದ 22 ವರ್ಷಗಳಲ್ಲಿ ಯಾವುದೇ ದೊಡ್ಡ ಗಲಭೆಗಳು ಗುಜರಾತ್‌ನಲ್ಲಿ ನಡೆದಿಲ್ಲ. ಅಭಿವೃದ್ಧಿಯತ್ತ ಗಮನಹರಿಸುವುದು ನಮ್ಮ ಸರ್ಕಾರದ ಮಂತ್ರವಾಗಿದೆ. ನಾವು ತುಷ್ಟೀಕರಣ ರಾಜಕೀಯದಿಂದ ದೂರವಿರುವ ಕಾರಣ ಇಡೀ ರಾಜ್ಯ ಶಾಂತಿಯುತವಾಗಿದೆ. ಈಗ ಗುಜರಾತ್ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರಮಿಸುತ್ತಿದೆ ಎಂದು ಮೋದಿ ಶ್ಲಾಘಿಸಿದರು.