ಹುಲ್ಲು ಹಸಿರಾಗಿತ್ತು, ನೀರು ನೀಲಿಯಾಗಿತ್ತು ಅದಕ್ಕೆ ಕೇಸರಿ ಬಿಕಿನಿ ಹಾಕಿಸಿದೆ : ಸಿದ್ಧಾರ್ಥ್

Public TV
1 Min Read
Pathan

ಶಾರುಖ್ ಖಾನ್ (Shahrukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ‘ಪಠಾಣ್’ (Pathan) ಸಿನಿಮಾದ ಕೇಸರಿ ಬಿಕಿನಿ (Kesari Bikini) ವಿವಾದದ ಬಗ್ಗೆ ಈಗ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ಮೌನ ಮುರಿದಿದ್ದಾರೆ. ಆ ಹಾಡಿನಲ್ಲಿ ದೀಪಿಕಾ ಪಡುಕೋಣೆಗೆ ಯಾಕೆ ಕೇಸರಿ ಬಿಕಿನಿ ಹಾಕಿಸಿದೆ ಎನ್ನುವ ಕುರಿತು ಅವರು ಮಾತನಾಡಿದ್ದಾರೆ. ಅದಕ್ಕೆ ಬಲವಾದ ಕಾರಣವನ್ನೂ ಕೊಟ್ಟಿದ್ದಾರೆ.

pathan 2

ಈ ಹಾಡಿನ ಶೂಟಿಂಗ್ ನಡೆದದ್ದು ಸ್ಪೇನ್ ನಲ್ಲಿ. ಆಗ ಅಲ್ಲಿನ ವಾತಾವರಣಕ್ಕೆ ಹೊಂದುವಂತಹ ಬಣ್ಣ ಆಯ್ಕೆ ಮಾಡಿಕೊಳ್ಳಬೇಕಿತ್ತು. ಬಿಸಿಲಿತ್ತು. ಹುಲ್ಲು ಹಸಿರಾಗಿತ್ತು. ನೀರು ನೀಲಿಯಾಗಿತ್ತು. ಕೇಸರಿ ಬಣ್ಣ ಎದ್ದು ಕಾಣುತ್ತದೆ ಎನ್ನುವ ಕಾರಣಕ್ಕಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡರಂತೆ. ಅದರ ಹೊರತಾಗಿ ಬೇರೆ ಯಾವ ಆಲೋಚನೆಯೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

vivek with pathan

ಕೇಸರಿ ಬಿಕಿನಿ ಆರಿಸುವ ಧಾರ್ಮಿಕ ಭಾವನೆ, ಬೇರೆಯವರಿಗೆ ನೋವಾಗತ್ತೆ ಏನೂ ಯೋಚಿಸಲಿಲ್ಲ. ಒಬ್ಬ ನಿರ್ದೇಶಕನಾಗಿ ಯಾವ ಬಣ್ಣ ಹೈಲೈಟ್ ಆಗತ್ತೆ ಅಂತ ಮಾತ್ರ ಯೋಚನೆ ಮಾಡಿದೆ. ಆದರೆ, ಕೇಸರಿ ಬಿಕಿನಿ ಈ ರೀತಿಯಲ್ಲಿ ವಿವಾದ ಎಬ್ಬಿಸುತ್ತೆ ಎನ್ನುವ ಸಣ್ಣ ಅಂದಾಜು ಕೂಡ ನನಗೆ ಇರಲಿಲ್ಲ. ಸಿನಿಮಾದಲ್ಲಿ ಯಾರ ಭಾವನೆಯನ್ನೂ ಕೆರಳಿಸುವ ಕಥೆಯೂ ಇಲ್ಲ. ಆದರೂ, ವಿವಾದ ಮಾಡಲಾಯಿತು.

Pathan

ಸಿನಿಮಾ ಚೆನ್ನಾಗಿದ್ದರೆ, ಯಾರ ಮನಸ್ಸಿಗೂ ನೋವು ಮಾಡದೇ ಇದ್ದರೆ ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಪಠಾಣ್ ಸಿನಿಮಾ ಸಾಕ್ಷಿ. ಸಿನಿಮಾ ಬಗ್ಗೆ ನನಗೆ ನಂಬಿಕೆಯಿತ್ತು. ಬಾಯ್ಕಾಟ್ ನಡೆಯಲ್ಲ ಅನ್ನುವ ವಿಶ್ವಾಸವಿತ್ತು. ಕೊನೆಗೂ ಪ್ರೇಕ್ಷಕ ಗೆಲ್ಲಿಸಿದ ಎಂದು ಅವರು ಮಾತನಾಡಿದ್ದಾರೆ.

Share This Article