ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪುಚುಕ್ಕೆ ತರಲು ಮಾಡಿದ ಸುಳ್ಳು ಆರೋಪಕ್ಕೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ ಎಂದು ಸಿಎಂ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಸಚಿವ ಎಂ.ಬಿ.ಪಾಟೀಲ್ (M.B.Patil) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳು ಮುಡಾ ವಿಚಾರವಾಗಿ ಎಐಸಿಸಿ ಅಧ್ಯಕ್ಷರು, ಖರ್ಗೆ ಜೊತೆ ಚರ್ಚೆ ಮಾಡುತ್ತಾರೆ. ಸುಳ್ಳು ಆರೋಪ ಹೊರಿಸಿ ಸರ್ಕಾರದ ಮೇಲೆ ಕಪ್ಪುಚುಕ್ಕೆ ಹಾಕೋದು. ಇದರ ಜೊತೆಗೆ ಹಲವು ವಿಚಾರದ ಕುರಿತು ಚರ್ಚೆ ಮಾಡುತ್ತಾರೆ. ಅದರ ಕುರಿತು ಹೈಕಮಾಂಡ್ ಕೂಡ ಕೆಲ ಸಲಹೆ ಕೊಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ
- Advertisement
ನಿನ್ನೆಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಬಗ್ಗೆ ಸಿಎಂ ಮಾತನಾಡಿದ್ದಾರೆ. ಡಿಸಿಎಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 3/1 ಶಾಸಕರು ಹೋಗಬೇಕು ಅಂದರೆ 80 ಕ್ಕೂ ಹೆಚ್ಚು ಶಾಸಕರು ಹೋಗಬೇಕು. ಸರ್ಕಾರ ಸರಳ ಬಹುಮತದಿಂದ ಕುಸಿಯಲು ಆಪರೇಷನ್ ಕಮಲ ಮಾಡಿದರು. 60 ಶಾಸಕರು ಬೇಕು. ಸರ್ಕಾರ ಬೀಳಿಸುವುದು ಅಷ್ಟು ಸುಲಭವಲ್ಲ. ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿದರೂ ಸರ್ಕಾರವನ್ನ ಏನು ಮಾಡೋಕೆ ಆಗಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
- Advertisement
ನಿನ್ನೆಯ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡುವ ಬಗ್ಗೆ ಸಲಹೆ ಬಂದಿದೆ. ಹೀಗಾಗಿ ಇಂದು ವರಿಷ್ಠರನ್ನು ಸಿಎಂ, ಡಿಸಿಎಂ ಭೇಟಿಯಾಗಿ ಅನುಮತಿ ಕೇಳಿದ್ದಾರೆ. ಆ ನಂತರ ಗವರ್ನರ್‌ರನ್ನು ವಾಪಸ್ಸು ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳ ಒತ್ತಾಯ ಮಾಡಲು ಶಾಸಕರು ದೆಹಲಿಗೆ ತೆರಳುವ ಬಗ್ಗೆ ನಿರ್ಣಯ ಮಾಡಲಾಗುತ್ತದೆ. ರಾಜ್ಯಪಾಲರ ಸಂವಿಧಾನದ ರಕ್ಷಣೆ ಮಾಡಬೇಕು. ಅವರೇ ಇದಕ್ಕೆ ಹೆಡ್. ಇಲ್ಲಿ ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ. ಸಿದ್ದರಾಮಯ್ಯ ವಿಚಾರದಲ್ಲಿ ಅಬ್ರಹಾಂ ಮನವಿ ಇಟ್ಕೊಂಡು ರಾತ್ರಿ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಅದು ಕೂಡ ಕೇವಲ 9 ಗಂಟೆಗಳ ಮಧ್ಯದಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ
ಈ ಕೇಸ್‌ನಲ್ಲಿ ಯಾರೂ ಕೂಡ ತನಿಖೆ ಮಾಡಿಲ್ಲ. ಶಶಿಕಲಾ ಜೊಲ್ಲೆ, ಕುಮಾರಸ್ವಾಮಿ, ರೆಡ್ಡಿ ಹಾಗೂ ಮುರುಗೇಶ್ ನಿರಾಣಿ ಕೇಸ್‌ನಲ್ಲಿ ಹಲವು ತನಿಖೆ ಆಗಿತ್ತು. ಆದರೆ ಇವರ ಕೇಸ್‌ನಲ್ಲಿ ಯಾವುದೇ ಪ್ರಾಸಿಕ್ಯೂಷನ್ ಕೊಡೋದಕ್ಕೆ ಆಗಿಲ್ಲ. ಆದರೆ ಸಿದ್ದರಾಮಯ್ಯ ವಿಚಾರದಲ್ಲಿ ಮಾತ್ರ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ ಎಂದು ಸಚಿವರು ಬೇಸರಿಸಿದ್ದಾರೆ.