ಬೆಂಗಳೂರು: ರಾಜ್ಯದಲ್ಲಿ ರಾಜ್ಯಪಾಲರೇ (Governor) ವಿರೋಧ ಪಕ್ಷದ ನಾಯಕನ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಅರ್ಕಾವತಿ ಡಿನೋಟಿಫಿಕೇಶನ್ ಕೇಸ್ ಕೆಂಪಣ್ಣ ಆಯೋಗದ ವರದಿ ರಾಜ್ಯಪಾಲರು ಕೇಳಿದ ಬಗ್ಗೆ ಮಾತನಾಡಿ, ರಾಜ್ಯಪಾಲರ ನಡೆ ನೋಡಿದರೆ ಇವರೇ ವಿರೋಧ ಪಕ್ಷದ ನಾಯಕರ ರೀತಿ ಆಡುತ್ತಿದ್ದಾರೆ. ಆರ್‌ಟಿಐ ಆಕ್ಟಿವಿಸ್ಟ್‌ಗಳು ಅರ್ಜಿ ಹಾಕೋದು ಮಾಹಿತಿ ಕೇಳುತ್ತಾರೆ. ಆ ರೀತಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದೇಹವನ್ನ ಪೀಸ್ ಪೀಸ್ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?
ರಾಜ್ಯಪಾಲರು ತಮಗೆ ಬಂದ ಪ್ರತಿಯೊಂದು ಅರ್ಜಿಗೂ ಸರ್ಕಾರಕ್ಕೆ ಬರೆಯೋದಕ್ಕೆ ಶುರು ಮಾಡಿದ್ದಾರೆ. ಈ ರೀತಿ ರಾಜ್ಯಪಾಲರು ನಡೆದುಕೊಳ್ಳಬಾರದು. ಅದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ಪ್ರಮುಖ ಕೇಸುಗಳ ಮೇಲೆ ಆದ್ಯತೆ ಕೊಡಬೇಕಾಗಿತ್ತು. ತನಿಖೆ ಮಾಡಿ ಪೊಲೀಸ್ ಅಧಿಕಾರಿಗಳ ಪ್ರಾಸಿಕ್ಯೂಶನ್ ಕೇಳಿದಾಗ ಅಂತಹದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಅದನ್ನು ಬಿಟ್ಟು ರಾಜ್ಯದಲ್ಲಿ ಏನೋ ನಡೆಯುತ್ತಿದೆ ಎನ್ನುವ ರೀತಿ ರಾಜ್ಯಪಾಲರು ಪತ್ರ ಬರೆಯುತ್ತಿರುವುದು ಖಂಡನೀಯ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ತುಪ್ಪ ಉತ್ಪಾದನೆಯ ಗುಣಮಟ್ಟ ಪರಿಶೀಲನೆಗೆ ನಿರ್ಧಾರ: ದಿನೇಶ್ ಗುಂಡೂರಾವ್
ರಾಜ್ಯಪಾಲರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ನನಗೆ ಆಶ್ಚರ್ಯ ಆಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೇವೆ. ಕೇಂದ್ರ ಸರ್ಕಾರ ಈಗ ರಾಜ್ಯಪಾಲರನ್ನು ಉಪಯೋಗಿಸಿಕೊಂಡು ಇಲ್ಲಿ ರಾಜಕೀಯ ಮಾಡಲು ಶುರು ಮಾಡಿದ್ದಾರೆ. ಈ ರೀತಿ ರಾಜ್ಯಪಾಲರು ಪತ್ರ ಬರೆಯುತ್ತಾರಾ ಎಂದು ವಿರೋಧ ಪಕ್ಷದ ನಾಯಕರು ಮಾಹಿತಿ ಕೇಳಲಿ. ಆದರೆ ರಾಜ್ಯಪಾಲರು ಕೇಳುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿ ಆತ್ಮಹತ್ಯೆ – ಕೆಲಸದ ಒತ್ತಡ ಕಾರಣ?