ಬೀದರ್: ತಜ್ಞರು ಕೊಟ್ಟಿರುವ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮಗಳನ್ನು ತಗೆದುಕೊಳ್ಳುತ್ತೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಹೇಳಿದ್ದಾರೆ.
Advertisement
ಬೀದರ್ ನಲ್ಲಿ ಲಸಿಕೆ ಅಭಿಯಾನದ ಬಳಿಕ ಲಾಕ್ಡೌನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊರೊನಾಗೆ ಸಂಬಂಧಿಸಿದಂತೆ ಯಾವ ರೀತಿಯ ಕಠಿಣ ಕ್ರಮಗಳನ್ನು ತಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ಆದರೆ ಇದಕ್ಕೆ ನಮ್ಮ ಎಲ್ಲ ನಾಗರಿಕರು ಜಾಗೃತಿಯಿಂದ ಇರಬೇಕು. ಅದರ ಜೊತೆಗೆ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
Advertisement
Advertisement
ಇಂದು ಇಡೀ ಭಾರತದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ನಾನು ಕೂಡಾ ಇಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. ಮಕ್ಕಳಲ್ಲಿ ಉತ್ಸಾಹ, ವಿಶ್ವಾಸವನ್ನು ನೋಡಿ ನನಗೆ ಸಂತೋಷವಾಗುತ್ತಿದೆ ಎಂದರು. ಇದನ್ನೂ ಓದಿ: 15 ರಿಂದ 18 ವರ್ಷದ ಮಕ್ಕಳ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ
Advertisement
ಈ ಲಸಿಕೆಯಿಂದ ಎಲ್ಲ ಮಕ್ಕಳು ಇದರ ಉಪಯೋಗ ಪಡೆದುಕೊಂಡು ಕೊರೊನಾದಿಂದ ಸುರಕ್ಷಿತವಾಗಿ ಇರಬೇಕು ಎಂದು ತಿಳಿಸಿದರು.