Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸರ್ಕಾರ ಗಾಳಿಯೊಂದನ್ನ ಬಿಟ್ಟು ಎಲ್ಲಾ ಬೆಲೆ ಏರಿಕೆ ಮಾಡಿದೆ: ವಿಜಯೇಂದ್ರ ಕಿಡಿ

Public TV
Last updated: March 31, 2025 3:43 pm
Public TV
Share
4 Min Read
BY Vijayendra 1
SHARE

– ಏ.2ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ
– ಏ.5ರಂದು ರಾಜ್ಯಾದ್ಯಂತ ಹೋರಾಟ
– ಏ.7ರಿಂದ ನಾಲ್ಕು ಹಂತದಲ್ಲಿ ಪ್ರತಿಭಟನೆ

ಬೆಂಗಳೂರು: ಸರ್ಕಾರ ಗಾಳಿಯೊಂದನ್ನ ಬಿಟ್ಟು ಎಲ್ಲಾ ಬೆಲೆ ಏರಿಕೆ ಮಾಡಿದೆ. ಸಾಮಾನ್ಯ ಜನ, ರೈತರನ್ನ ಈ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಕಾಂಗ್ರೆಸ್‌ಗೆ (Congress) ಜನ ಆಶೀರ್ವಾದ ಮಾಡಿದ್ದಾರೆ. ಆದರೆ ಈ ಸರ್ಕಾರ ಮತದಾರರಿಗೆ ವರದಾನ ಆಗೋ ಬದಲು ಶಾಪಗ್ರಸ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.

ಬೆಲೆ ಏರಿಕೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಲೆ ಏರಿಕೆ ಅಂದರೆ ಎಲ್ಲಾ ಏರಿಕೆ ಮಾಡಿದೆ. ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಹಾಲಿನ ದರ ಮೂರು ಬಾರಿ ಏರಿಕೆ ಮಾಡಿದ್ದಾರೆ. ಈಗ ಮತ್ತೆ ಏರಿಕೆ ಆಗಿದೆ. ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ವೆಚ್ಚವನ್ನು ಜಾಸ್ತಿ ಮಾಡಿದ್ದಾರೆ. ಹೊರ ರೋಗಗಳ ಶುಲ್ಕ, ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ ಜಾಸ್ತಿ ಆಗಿದೆ. ಲ್ಯಾಬ್ ಶುಲ್ಕ ಜಾಸ್ತಿ ಆಗಿದೆ. ಬಡವರಿಗೂ ಬರೆ ಎಳೆಯೋ ಕೆಲಸ ಈ ಸರ್ಕಾರ ಮಾಡಿದೆ. ನೋಂದಣಿ-ಮುದ್ರಾಂಕ ಶುಲ್ಕ ಜಾಸ್ತಿ ಆಗಿದೆ. ಪ್ರೊಫೆಷನಲ್ ಟ್ಯಾಕ್ಸ್ ಜಾಸ್ತಿ ಮಾಡಿದ್ದಾರೆ. ಬಸ್ ಟಿಕೆಟ್ ದರ ಏರಿಕೆ ಆಗಿದೆ. ಬೀಜಗಳ ಬೆಲೆ ಜಾಸ್ತಿ ಮಾಡಿದ್ದಾರೆ. ನೀರಿನ ದರ ಜಾಸ್ತಿ ಮಾಡಿದ್ದಾರೆ. ಈ ಸರ್ಕಾರ ಜನರಿಗೆ, ಮತದಾರರಿಗೆ ಶಾಪ ಕೊಡುವ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು

Siddaramaiah 4

ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ರಾಜ್ಯ ಸರ್ಕಾರ ಬಡವರಿಗೆ ಬರೆ ಎಳೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಬೆಲೆ ಏರಿಕೆ ನಿರ್ಧಾರ ವಾಪಸ್ ಪಡೆಯಲು ಹೋರಾಟ ನಡೆಸಲಿದ್ದೇವೆ. ಏ.2ರಂದು ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಅಹೋರಾತ್ರಿ ಧರಣಿ ಪ್ರಾರಂಭವಾಗಲಿದೆ. ಹಾಲಿ ಮಾಜಿ ಶಾಸಕರು, ಪರಿಷತ್ ಸದಸ್ಯರು, ಪದಾಧಿಕಾರಿಗಳು ಭಾಗಿಯಾಗುತ್ತಾರೆ. ಏ.2ರಂದು ಅಹೋರಾತ್ರಿ ಧರಣಿ ಪ್ರಾರಂಭವಾಗಲಿದೆ. ಏ.5ರಂದು ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಎಲ್ಲಾ ಜಿಲ್ಲೆಗಳಲ್ಲಿ ರಸ್ತೆಗೆ ಇಳಿದು ಹೋರಾಟ ಮಾಡಲಿದೆ ಎಂದರು. ಇದನ್ನೂ ಓದಿ: ಮೋದಿ ಖಾಸಗಿ ಕಾರ್ಯದರ್ಶಿಯಾಗಿ ಯುವ ಐಎಫ್‌ಎಸ್‌ ಅಧಿಕಾರಿ ನಿಧಿ ತಿವಾರಿ ನೇಮಕ

ಸಿಎಂ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಮುಸ್ಲಿಂಮರಿಗೆ ಒಲೈಕೆ ಮಾಡೋ ನಿಟ್ಟಿನಲ್ಲಿ ಹಿಂದುಗಳಿಗೆ ಅಪಮಾನ ಮಾಡಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲಿ ಗುತ್ತಿಗೆಯಲ್ಲಿ  ಮುಸ್ಲಿಂಮರಿಗೆ ಮೀಸಲಾತಿ ಇಲ್ಲ. ಮುಸ್ಲಿಂಮರಿಗೆ ಮೀಸಲಾತಿ ಕಾನೂನಿನ ವಿರೋಧ. 4% ಮೀಸಲಾತಿ ಕಾನೂನು, ಸಂವಿಧಾನ ವಿರೋಧಿ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಧನ ಸಹಾಯ ಮಾಡುತ್ತಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಆತ್ಮ ರಕ್ಷಣೆಗೆ ಹಣ ಖರ್ಚು ಮಾಡುತ್ತಿದ್ದಾರೆ. ಇಮಾಮ್‌ಗಳಿಗೆ ಸಂಬಳ ಜಾಸ್ತಿ ಮಾಡಿದ್ದಾರೆ. ಬಿಜೆಪಿ ಮುಸ್ಲಿಂಮರ ವಿರೋಧಿಗಳಲ್ಲ. ಯಾಕೆ ಬರೀ ಮುಸ್ಲಿಂಮರಿಗೆ ಅನುಕೂಲ ಮಾಡಿಕೊಡುತ್ತಿದ್ದೀರಾ? ಪ್ರಧಾನಿ ಮೋದಿ ಅವರು ಎಲ್ಲಾ ಜಾತಿ-ಧರ್ಮಗಳಿಗೆ ಯೋಜನೆಗಳು ಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆ ಎಲ್ಲಾ ಜಾತಿ-ಧರ್ಮಗಳಿಗೆ ಕೊಟ್ಟದ್ದಾರೆ. ಮುಸ್ಲಿಂಮರಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಿಲ್ಲ ಅನ್ನೋದು ಬಿಟ್ಟರೆ ಇನ್ನೆಲ್ಲ ಮಾಡಿದೆ. ಹಿಂದೂಗಳಿಗೆ ಮಾಡಿರೋ ಅಪಮಾನ ಬಿಜೆಪಿ ಖಂಡಿಸುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: 300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

ಹಾಲುಮತ ಸಮುದಾಯ, ನೇಕಾರ, ಕುಂಬಾರ, ಸವಿತಾ ಸಮಾಜ, ಈಡಿಗರು, ಗಾಣಿಗರು, ಎಲ್ಲಾ ಸಮುದಾಯಗಳನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕಾಯಕ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದು ಹಿಂದುಳಿದ ಸಮುದಾಯ ಮರೆತಿದ್ದಾರೆ. ಅಲ್ಪಸಂಖ್ಯಾತ ಹಿಂದೆ ಸಿಎಂ ಹೊರಟಿದ್ದಾರೆ. ಇದನ್ನ ಬಿಜೆಪಿ ವಿರೋಧಿಸುತ್ತದೆ. ಎಸ್‌ಸಿಎಸ್‌ಪಿ – ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗೆ ಎಸ್‌ಸಿಎಸ್‌ಪಿ – ಟಿಎಸ್‌ಪಿ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಸ್‌ಸಿ-ಎಸ್ಟಿ ಜನರಿಗೆ ಮೀಸಲು ಇಟ್ಟ ಸುಮಾರು 38 ಸಾವಿರ ಕೋಟಿ ಹಣವನ್ನ ಬೇರೆ ಕಡೆ ವರ್ಗಾವಣೆ ಮಾಡಿಕೊಂಡಿದ್ದಾರೆ. ದುರುಪಯೋಗ ಮಾಡಿದ್ದಾರೆ. ಅಂಬೇಡ್ಕರ್ ಹೆಸರನ್ನ ಪದೇ ಪದೇ ಉಲ್ಲೇಖ ಮಾಡುತ್ತಾರೆ, ದುರುಪಯೋಗ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಅವರು ಎಸ್‌ಸಿ-ಎಸ್ಟಿ ಜನರನ್ನ ವೋಟ್ ಬ್ಯಾಂಕ್ ಮಾಡಿಕೊಂಡು ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಂದೂ-ಮುಸ್ಲಿಮರು ಅನ್ಯೋನ್ಯತೆಯಿಂದ ಬಾಳಲಿ, ಸಿಎಂ ಆರೋಗ್ಯ ಸುಧಾರಿಸಲೆಂದು ವಿಶೇಷ ಪ್ರಾರ್ಥನೆ: ಜಮೀರ್

ಏಪ್ರಿಲ್ 7 ರಂದು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಮೈಸೂರಿನಿಂದ ಜನ ಜಾಗೃತಿ ಹೋರಾಟ ಪ್ರಾರಂಭ ಆಗಲಿದೆ. ಕೇಂದ್ರ ಸಚಿವ ಜೋಷಿ ಅವರು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಸೋಮಣ್ಣ, ಶೋಭಾ ಕರಂದ್ಲಾಜೆ ಅವರನ್ನು ಕೇಳಿದ್ದೇನೆ. ಏ.7ರಿಂದ 4 ಹಂತದಲ್ಲಿ ಹೋರಾಟ ನಡೆಯಲಿದೆ. ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ಹೋರಾಟ ನಡೆಯಲಿದೆ. ಮೊದಲ ಹಂತದಲ್ಲಿ ಏ.7ರಂದು ಮೈಸೂರು, ಚಾಮರಾಜನಗರ ಜಿಲ್ಲೆ, ಏ.8ರಂದು ಮಂಡ್ಯ, ಹಾಸನ, ಏ.9ರಂದು ಕೊಡಗು, ಮಂಗಳೂರು, ಏ.10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!

2ನೇ ಹಂತದ ಹೋರಾಟ ಏ.13ರಿಂದ ಶಿವಮೊಗ್ಗದಿಂದ ಪ್ರಾರಂಭವಾಗಲಿದೆ. ಏ.13ರಂದು ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಹೋರಾಟ ನಡೆಯಲಿದ್ದು, ಪ್ರತಿ ಜಿಲ್ಲೆಯಲ್ಲಿ ಹೋರಾಟ ನಡೆಯಲಿದೆ. ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನರ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ. ಮುಸ್ಲಿಮರನ್ನ ಒಲೈಕೆ ಮಾಡೋದು, ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ 4 ಹಂತದಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ 2-3 ಕಿಲೋಮೀಟರ್ ಪಾದಯಾತ್ರೆ ಬಳಿಕ ಸಮಾವೇಶ ಇರಲಿದೆ. ಈ ಹೋರಾಟ ಬಿಜೆಪಿ ಮಾತ್ರ ಮಾಡಲಿದೆ. ಜೆಡಿಎಸ್ ಜೊತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೆ ಶಾಕ್‌ – ಟ್ರಾನ್ಸ್‌ಫಾರ್ಮರ್‌, ಜನರೇಟರ್ ಪರಿಶೀಲನೆ & ರಿನೀವಲ್ ಶುಲ್ಕ 3 ಪಟ್ಟು ಏರಿಕೆ!

TAGGED:bengalurubjpBY Vijayendracongressprice hikeಕಾಂಗ್ರೆಸ್ಬಿಜೆಪಿಬಿವೈ ವಿಜಯೇಂದ್ರಬೆಂಗಳೂರುಬೆಲೆ ಏರಿಕೆ
Share This Article
Facebook Whatsapp Whatsapp Telegram

Cinema Updates

Ajith Kumar Car Rase Accident
ರೇಸ್ ವೇಳೆ ನಟ ಅಜಿತ್ ಕಾರ್ ಟಯರ್ ಸ್ಫೋಟ!
1 hour ago
TAAPSEE PANNU 2
ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ತಾಪ್ಸಿ ಪನ್ನು- ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
8 hours ago
prashanth neel
ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?
9 hours ago
sreeleela 1
ಬಾಲಿವುಡ್ ಚಿತ್ರಕ್ಕಾಗಿ ಸಂಭಾವನೆ ಇಳಿಸಿಕೊಂಡ್ರಾ ‘ಕಿಸ್ಸಿಕ್’ ಬೆಡಗಿ?
9 hours ago

You Might Also Like

Justice Not Revenge Indian Army Shares New Operation Sindoor Video
Latest

ಪಾಕ್ ಉಗ್ರ ನೆಲೆ ಧ್ವಂಸದ ಮತ್ತೊಂದು ವಿಡಿಯೋ ವೈರಲ್ – ಪ್ರತೀಕಾರವಲ್ಲ ಇದು ನ್ಯಾಯ ಎಂದ ಸೇನೆ!

Public TV
By Public TV
51 minutes ago
RCB
Cricket

RCB, ಗುಜರಾತ್‌, ಪಂಜಾಬ್‌ ಪ್ಲೇ-ಆಫ್‌ಗೆ ಎಂಟ್ರಿ – ಡೆಲ್ಲಿ ವಿರುದ್ಧ ನೋ ಲಾಸ್‌ನಲ್ಲಿ ಟೈಟಾನ್ಸ್‌ ಪಾಸ್‌

Public TV
By Public TV
1 hour ago
Lashkar terrorist
Bengaluru City

‌ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

Public TV
By Public TV
1 hour ago
TravisHead
Cricket

ಹೈದರಾಬಾದ್‌ಗೆ ಸನ್‌ ಸ್ಟ್ರೋಕ್‌ – ಟ್ರಾವಿಸ್‌ ಹೆಡ್‌ಗೆ ಕೊರೊನಾ ಪಾಸಿಟಿವ್‌!

Public TV
By Public TV
2 hours ago
jairam ramesh Rahul gandhi
Latest

ʻಆಪರೇಷನ್‌ ಸಿಂಧೂರʼವನ್ನ ಬಿಜೆಪಿ ರಾಜಕೀಯಗೊಳಿಸುತ್ತಿದೆ – ಕಾಂಗ್ರೆಸ್‌ ಆರೋಪ

Public TV
By Public TV
2 hours ago
koppala couple parents boycotted for marrying a married woman
Crime

ವಿವಾಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷಗಳಿಂದ ಕುಟುಂಬಕ್ಕೆ ಬಹಿಷ್ಕಾರ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?