ನಿನ್ನೆಯಷ್ಟೇ ನಟ, ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನಾಮಕರಣ ಶಾಸ್ತ್ರ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಇವರ ಪತ್ನಿ ಚೆನ್ನಮ್ಮ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇವರ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ನಿಖಿಲ್ ಅವರ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದರು.
ಮಧ್ಯಾಹ್ನ ಶುಭ ಮುಹೂರ್ತದ ವೇಳೆ ನಿಖಿಲ್ ಮತ್ತು ರೇವತಿ ದಂಪತಿಯ ಪುತ್ರನಿಗೆ ಅವ್ಯನ್ ದೇವ್ ಎಂದು ಹೆಸರಿಟ್ಟರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ತಮ್ಮ ಮಗನ ಪೂರ್ತಿ ಹೆಸರನ್ನು ಅವ್ಯನ್ ದೇವ್ ಎನ್.ಕೆ ಎಂದು ಹೇಳಿದರು. ಅಂದರೆ, ಅವ್ಯನ್ ದೇವ್ ನಿಖಿಲ್ ಕುಮಾರಸ್ವಾಮಿ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್
ಅವ್ಯನ್ ದೇವ್ ಎಂದು ಹೆಸರು ಕೇಳುತ್ತಿದ್ದಂತೆಯೇ ಇದರ ಅರ್ಥವೇನು ಅನ್ನುವುದರ ಹುಡುಕಾಟ ಕೂಡ ನಡೆಯಿತು. ಇಂತಹ ಹೆಸರನ್ನು ಆಯ್ಕೆ ಮಾಡಿದ್ದು ಯಾರು? ಎನ್ನುವ ಕುತೂಹಲ ಕೂಡ ಮೂಡಿತ್ತು. ಅದಕ್ಕೂ ನಿಖಿಲ್ ತೆರೆ ಎಳೆದಿದ್ದಾರೆ. ಅವ್ಯನ್ ಅಂದರೆ ಗಣೇಶ ಮತ್ತು ವಿಷ್ಣುದೇವನಿಗೆ ಕರೆಯುವ ಮತ್ತೊಂದು ಹೆಸರಂತೆ. ಈ ಹೆಸರನ್ನು ಆಯ್ಕೆ ಮಾಡಿದ್ದು ತಮ್ಮ ಪತ್ನಿ ರೇವತಿ ಎಂದು ಹೇಳಿದ್ದಾರೆ ನಿಖಿಲ್.