‘ದಿ ಗೋಟ್’ ಅಡ್ಡಾದಿಂದ ಧೂಳೆಬ್ಬಿಸೋ ಸಾಂಗ್ : ದಳಪತಿ ಫ್ಯಾನ್ಸ್ ದಿಲ್ ಖುಷ್

Public TV
1 Min Read
GOAT Movie Vijay Thalapathy

ಳಪತಿ ವಿಜಯ್ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ `ದಿ ಗೋಟ್’ ಇದೇ ಸೆಪ್ಟಂಬರ್ 5ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಈಗಾಗ್ಲೇ ಒಂದೊಂದೇ ಹಾಡುಗಳ ಮೂಲಕ ಸದ್ದು ಮಾಡಿರುವ `ದಿ ಗೋಟ್’ ಸಿನಿಮಾದ ನಾಲ್ಕನೇ ಹಾಡು ಇಂದು (ಆ.31) ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ವಿಜಯ್ ಫ್ಯಾನ್ಸ್ ಗಣೇಶನ ಮುಂದೆ ಭರ್ಜರಿ ಸ್ಟೆಪ್ ಹಾಕೋಕೆ ಹೇಳಿ ಮಾಡಿಸಿದ `ಮಟ್ಟ’ ಹಾಡು ರಿಲೀಸ್ ಆಗಿದೆ.

ಅಂದಹಾಗೆ ವಿವೇಕ್ ಸಾಹಿತ್ಯ ಬರೆದಿರುವ, ಯುವಾನ್ ಶಂಕರ್ ರಾಜಾ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಮಾಡ್ತಿದೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ತಯಾರಾದ `ದಿ ಗೋಟ್’ ಸಿನಿಮಾ ಮೇಲೆ ಭಾರೀ ನಿರೀಕ್ಷೆಗಳಿದ್ದು, ವಿಜಯ್ ಫ್ಯಾನ್ಸ್ ಗಣೇಶನ ಹಬ್ಬದ ಜೊತೆಗೆ ಸಿನಿಮಾ ಕಣ್ತುಂಬಿಕೊಳ್ಳುವ ಅವಕಾಶ. ಇದನ್ನೂ ಓದಿ: ಹೆರಿಗೆಗಾಗಿ ಲಂಡನ್‌ಗೆ ಹಾರಲಿದ್ದಾರೆ ದೀಪಿಕಾ ಪಡುಕೋಣೆ

GOAT Movie Vijay Thalapathy 1

ಕಾಲಿವುಡ್‌ನಲ್ಲಿ ತಮ್ಮ ವಿಭಿನ್ನ ಸಿನಿಮಾಗಳಿಂದ ಮಾಸ್ ಆ್ಯಂಡ್ ಕ್ಲಾಸ್ ಆಡಿಯೆನ್ಸ್ ಹೊಂದಿರುವ ನಟ ದಳಪತಿ ವಿಜಯ್. ಅವ್ರ ಪರ್ಫಾಮೆನ್ಸ್, ಡ್ಯಾನ್ಸ್, ಫೈಟ್ ನೋಡೋಕೆ ತುದಿಗಾಲಲ್ಲಿ ನಿಂತು ಭಕ್ತಗಣ ಕಾಯುತ್ತಿದೆ. ಇತ್ತೀಗಷ್ಟೇ ಟ್ರೈಲರ್ ಮೂಲಕ ವಿಜಯ್ ಡ್ಯುಯೆಲ್ ರೋಲ್‌ನಲ್ಲಿ ಕಾಣಿಸಿಕೊಳ್ತಿರುವ ಬಗ್ಗೆ ಹಿಂಟ್ ಕೊಟ್ಟಮೇಲೆ ಅಭಿಮಾನಿಗಳು ಮತ್ತಷ್ಟು ಕೌತುಕತೆಯಿಂದ ಸಿನಿಮಾದ ರಿಲೀಸ್‌ನ್ನ ಎದುರು ನೋಡ್ತಿದ್ದಾರೆ. ಇದನ್ನೂ ಓದಿ: ಹೈದ್ರಾಬಾದ್‌ನಲ್ಲಿ ಅದಿತಿ-ಸಿದ್ದಾರ್ಥ್ ಮದುವೆ ತಯಾರಿ

ಸದ್ಯ ಬಿಡುಗಡೆಯಾಗಿರುವ `ಮಟ್ಟ’ ಸಾಂಗ್ ಮಾತ್ರ ಅದ್ಭುತ.. ಅಮೋಘ.. ಸ್ಟೆಪ್ ಹಾಕೋಕೆ ಮಾತ್ರ ಹೇಳಿ ಮಾಡಿಸಿದ ಸಾಂಗ್. ಸಿನಿಮಾ ಬರೋವರೆಗೂ ಸಾಂಗ್ ನೋಡ್ತಾ ಎಂಜಾಯ್ ಮಾಡಿ. ಇದನ್ನೂ ಓದಿ: ವಿಲನ್ ರವಿಶಂಕರ್ ಪುತ್ರನ ಚೊಚ್ಚಲ ಸಿನಿಮಾ: ಪ್ರೀ ಲುಕ್ ಅನಾವರಣ

Share This Article