ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ 20 ಕೋಟಿ ಬೆಲೆಬಾಳುವ ಕಕೇಶಿಯ್ ಶೆಫರ್ಡ್ (, Caucasian Shepherd) ಶ್ವಾನವನ್ನು ಖ್ಯಾತ ನಟ ರವಿಚಂದ್ರನ್ (Ravichandran) ನಾಯಕ ನಟನಾಗಿ ನಟಿಸುತ್ತಿರುವ ‘ಗೌರಿಶಂಕರ’ (Gauri Shankar) ಸಿನಿಮಾ ಚಿತ್ರೀಕರಣಕ್ಕೆ ತರಲಾಗಿದ್ದು ಈ ವೇಳೆ ದಾಂಡೇಲಿಯಲ್ಲಿ ಶ್ವಾನವನ್ನು ನೋಡಿದ ಅರಣ್ಯ ಸಿಬ್ಬಂದಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಲ್ಲದೇ ಇದೊಂದು ಕಾಡುಪ್ರಾಣಿ ಎಂದು ತಿಳಿದು ವಶಕ್ಕೆ ಪಡೆಯಲು ಮುಂದಾಗಿದ್ದರು. ಕೊನೆಗೆ ನಾಯಿ ಮಾಲೀಕ ಸತೀಶ್ ಕ್ಯಾಡಬಮ್ಸ್ ಇದು ಶ್ವಾನ, ತೋಳ ಅಥವಾ ಇನ್ಯಾವುದೇ ಕಾಡುಪ್ರಾಣಿಯಲ್ಲಾ ಎಂದು ಅರಣ್ಯ ಸಿಬ್ಬಂದಿಗಳಿಗೆ ಫೋಟೋವನ್ನು ತೋರಿಸುವ ಮೂಲಕ ಅರಣ್ಯ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟರು.
Advertisement
ಇದೇ ಮೊದಲಬಾರಿಗೆ ಸತೀಶ್ ರವರು ಸಾಕಿರುವ 20 ಕೋಟಿ ಬೆಲೆಬಾಳುವ ಹೈದರ್ ಹೆಸರಿನ ಈ ಶ್ವಾನವನ್ನು ಕನ್ನಡದ ಸಿನಿಮಾದಲ್ಲಿ ಬಳಸಲಾಗುತ್ತಿದ್ದು ದಾಂಡೇಲಿ, ಜೋಯಿಡಾ ,ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನು ಶ್ವಾನಕ್ಕೆ ತಂಗಲು ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಸಹ ಮಾಡಲಾಗಿದ್ದು 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ
Advertisement
Advertisement
ಈ ಸಿನಿಮಾದ ಶೂಟಿಂಗ್ ಗಾಗಿಯೇ ನಾಯಿಗೆ ಸಂಭಾವನೆಯನ್ನು ಕೂಡ ನೀಡಲಾಗುತ್ತಿದ್ದು, ಹತ್ತು ಲಕ್ಷ ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಈ ಪ್ರಮಾಣದ ಹಣವನ್ನು ಸಂಭಾವನೆಯಾಗಿ ಪಡೆದ ಮೊದಲ ಪ್ರಾಣಿ ಇದಾಗಿದೆ. ಈಗಾಗಲೇ ಮೂರು ದಿನಗಳ ಕಾಲ ಚಿತ್ರೀಕರಣದಲ್ಲೂ ಅದು ಭಾಗಿಯಾಗಿದೆ. ಕೇವಲ ಮೂರೇ ಮೂರು ಪಾತ್ರಗಳು ಸಿನಿಮಾದಲ್ಲಿದ್ದು, ನಾಯಿ ಮತ್ತು ಹುಲಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿವೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k