ಮಡಿಕೇರಿ: ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪೋಷಕರು ನಮ್ಮ ಮಕ್ಕಳು ಸುರಕ್ಷಿತವಾಗಿ ಬಂದ್ರೆ ಸಾಕು ಎಂದು ಕೇಲಿಕೊಳ್ಳುತ್ತಿದ್ದಾರೆ. ಈ ನಡುವೆ ಕೊಡಗಿನ ವಿದ್ಯಾರ್ಥಿನಿ ಸುರಕ್ಷಿತವಾಗಿ ಬಂದಿದ್ದು, ಆಕೆಯ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.
Advertisement
ಯುದ್ಧದಿಂದ ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಮೃತಪಟ್ಟ ಹಿನ್ನೆಲೆ ಪೋಷಕರ ಆತಂಕ ಇನ್ನೂ ಹೆಚ್ಚಾಗುತ್ತಿದೆ. ಹೀಗಾಗಿ ತಮ್ಮ ಮಕ್ಕಳು ಸುರಕ್ಷಿತವಾಗಿ ತಾಯ್ನಾಡಿಗೆ ಬರಬೇಕು ಎಂದು ಪೋಷಕರ ಪ್ರಾರ್ಥನೆ ಮಾಡುತ್ತಿದ್ರೆ. ಇತ್ತ ಕೊಡಗು ಜಿಲ್ಲೆಯ 16 ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿನಿಯೊಬ್ಬಳು ಕೊಡಗು ಜಿಲ್ಲೆಗೆ ಅಗಮಿಸಿದ್ದಾರೆ. ಇದರಿಂದ ಅತಂಕದಲ್ಲಿ ಇದ್ದ ಪೋಷಕರು ನಿಟ್ಟುಸಿರು ಬಿಡುವಂತೆ ಅಗಿದೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ
Advertisement
Advertisement
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನ ಮದೀಹ(21) ಇಂದು ಬೆಳಗಿನ ಜಾವ ಗೋಣಿಕೊಪ್ಪಲುವಿಗೆ ಆಗಮಿಸಿದ್ದಾರೆ. ಉಕ್ರೇನ್‍ನಲ್ಲಿ ನಡೆಯುತ್ತಿದ್ದ ಘಟನೆ ಅಷ್ಟಾಗಿ ತಮ್ಮ ಗಮನಕ್ಕೆ ಬಾರದೆ ಇದ್ರು ಪೋಷಕರು ತುಂಬಾ ಅತಂಕಕ್ಕೆ ಒಳಗಾಗಿದ್ರು. ಉಕ್ರೇನ್‍ನಲ್ಲಿ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಎರಡು ತಿಂಗಳ ಹಿಂದೆ ಹೋಗಿದೆ. ಆದರೆ ಈ ರೀತಿಯ ಘಟನೆಗಳು ಅಗುತ್ತದೆ ಎಂದು ನಮ್ಮಗೆ ಗೊತ್ತಿರಲಿಲ್ಲ. ಅದ್ರೂ ರಕ್ಷಣೆಯ ಬಳಿಕ ನನಗೆ ಮರು ಜನ್ಮ ಸಿಕ್ಕಂತಾಗಿದೆ. ಭಾರತೀಯ ರಾಯಭಾರ ಕಚೇರಿಗೆ ಈ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
Advertisement
ಈ ವೇಳೆ ಮದೀಹ ಉಕ್ರೇನ್‍ನಲ್ಲಿ ರಷ್ಯಾ ಸೈನಿಕರ ದಾಳಿಗೆ ಕರ್ನಾಟಕ ಮೂಲದ ನವೀನ್ ಮೃತ ಪಟ್ಟಿರುವುದು ತುಂಬಾ ಬೇಸರ ತಂದಿದೆ. ಅದಷ್ಟು ಬೇಗಾ ಕೇಂದ್ರ ಸರ್ಕಾರ ಉಳಿದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನವೀನ್ ವ್ಯಕ್ತಿತ್ವ ಪ್ರಶಂಸಿದ ಚಂದನವನದ ಮೋಹಕತಾರೆ